
IPL 2023: ಐಪಿಎಲ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಇದೀಗ 16ನೇ ಸೀಸನ್ ಐಪಿಎಲ್ ಟೂರ್ನಿಯು ಭರದಿಂದ ಸಾಗುತ್ತಿದೆ. ಹೊಡಿಬಡಿ ಆಟವೆಂದೇ ಖ್ಯಾತಿ ಪಡೆದಿರುವ ಈ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಹೀಗೆ ನಿರ್ಮಾಣವಾದ ದಾಖಲೆಗಳಲ್ಲಿ ಸಿಕ್ಸರ್ಗಳ ದಾಖಲೆ ಪ್ರಮುಖವಾದವು.

ಇಲ್ಲಿ ಅತೀ ಹೆಚ್ಚು ಸಿಕ್ಸ್ಗಳನ್ನು ಸಿಡಿಸಿದ ದಾಖಲೆ ಇರುವುದು ಕ್ರಿಸ್ ಗೇಲ್ ಹೆಸರಿನಲ್ಲಿ. ಗೇಲ್ ಐಪಿಎಲ್ನಲ್ಲಿ 357 ಸಿಕ್ಸ್ಗಳನ್ನು ಬಾರಿಸಿ ದಾಖಲೆ ಬರೆದಿಟ್ಟಿದ್ದಾರೆ. ಮತ್ತೊಂದೆಡೆ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಕೆಲ ಬೌಲರ್ಗಳಿದ್ದಾರೆ. ಆ ಬೌಲರ್ಗಳು ಯಾರೆಂದರೆ...

1- ಪಿಯೂಷ್ ಚಾವ್ಲಾ: ಐಪಿಎಲ್ನಲ್ಲಿ 169 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಪಿಯೂಷ್ ಚಾವ್ಲಾ ಒಟ್ಟು 185 ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸ್ ಚಚ್ಚಿಸಿಕೊಂಡ ಬೌಲರ್ ಎನಿಸಿಕೊಂಡಿದ್ದಾರೆ.

2- ಯುಜ್ವೇಂದ್ರ ಚಹಾಲ್: ಐಪಿಎಲ್ನಲ್ಲಿ ಸಿಕ್ಸ್ ಹೊಡೆಸಿಕೊಂಡ ಬೌಲರ್ಗಳ ಪಟ್ಟಿಯಲ್ಲಿ ಚಹಾಲ್ 2ನೇ ಸ್ಥಾನದಲ್ಲಿದ್ದಾರೆ. ಯುಜ್ವೇಂದ್ರ ಚಹಾಲ್ 135 ಇನಿಂಗ್ಸ್ಗಳಲ್ಲಿ 182 ಸಿಕ್ಸ್ ಹೊಡೆಸಿಕೊಂಡಿದ್ದಾರೆ.

3- ರವೀಂದ್ರ ಜಡೇಜಾ: ಈ ಪಟ್ಟಿಯಲ್ಲಿ ಜಡೇಜಾ ಮೂರನೇ ಸ್ಥಾನದಲ್ಲಿದ್ದು, 186 ಇನಿಂಗ್ಸ್ಗಳಲ್ಲಿ 180 ಸಿಕ್ಸ್ಗಳನ್ನು ಚಚ್ಚಿಸಿಕೊಂಡಿದ್ದಾರೆ.

4- ಅಮಿತ್ ಮಿಶ್ರಾ: ಐಪಿಎಲ್ನಲ್ಲಿ 156 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅಮಿತ್ ಮಿಶ್ರಾ 176 ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದಾರೆ.

5- ರವಿಚಂದ್ರನ್ ಅಶ್ವಿನ್: 186 ಐಪಿಎಲ್ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ ಒಟ್ಟು 173 ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದಾರೆ.