IPL 2023: ಧೋನಿಗಿಂದು ಐತಿಹಾಸಿಕ ಪಂದ್ಯ; ವಿಶೇಷ ಉಡುಗೊರೆ ನೀಡುತ್ತೇವೆ ಎಂದ ಜಡೇಜಾ

Updated on: Apr 12, 2023 | 3:32 PM

MS Dhoni: ಎಂಎಸ್ ಧೋನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೈದಾನಕ್ಕಿಳಿದ ತಕ್ಷಣ ನಾಯಕನಾಗಿ ಸಿಎಸ್‌ಕೆ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಬರೆಯಲಿದ್ದಾರೆ.

1 / 7
ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯ ಮುಕ್ತಾಯವಾಗುವ ಮುನ್ನವೇ ಸಿಎಸ್​ಕೆ ನಾಯಕ ಧೋನಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯ ಮುಕ್ತಾಯವಾಗುವ ಮುನ್ನವೇ ಸಿಎಸ್​ಕೆ ನಾಯಕ ಧೋನಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

2 / 7

ಎಂಎಸ್ ಧೋನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೈದಾನಕ್ಕಿಳಿದ ತಕ್ಷಣ ನಾಯಕನಾಗಿ ಸಿಎಸ್‌ಕೆ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಬರೆಯಲಿದ್ದಾರೆ. ಅರ್ಥಾತ್ ಇಲ್ಲಿಯವರೆಗೆ ಅವರು 199 ಐಪಿಎಲ್ ಪಂದ್ಯಗಳಲ್ಲಿ ಸಿಎಸ್‌ಕೆ ನಾಯಕತ್ವವನ್ನು ವಹಿಸಿದ್ದಾರೆ.

3 / 7

ಧೋನಿಯ ದ್ವಿಶತಕದ ಪಂದ್ಯವನ್ನು ವಿಶೇಷವಾಗಿಸಲು ಚಿಂತಿಸಿರುವ ಸಿಎಸ್​ಕೆ, ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಗೆದ್ದು, ತನ್ನ ನೆಚ್ಚಿನ ನಾಯಕನಿಗೆ ಉಡುಗೊರೆ ನೀಡಲು ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ರವೀಂದ್ರ ಜಡೇಜಾ, ಧೋನಿ ಸಿಎಸ್‌ಕೆ ಮಾತ್ರವಲ್ಲ, ಭಾರತೀಯ ಕ್ರಿಕೆಟ್‌ನ ದಂತಕಥೆಯೂ ಹೌದು. ನಮ್ಮ ತಂಡ ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಧೋನಿಗೆ ಗೆಲುವಿನ ಉಡುಗೊರೆ ನೀಡಲಿದ್ದೇವೆ ಎಂದಿದ್ದಾರೆ.

4 / 7

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಎಂಎಸ್ ಧೋನಿ ಅವರ ವೃತ್ತಿಜೀವನ ಅದ್ಭುತವಾಗಿದೆ. ಅವರ ನಾಯಕತ್ವದಲ್ಲಿ ಸಿಎಸ್​ಕೆ ತಂಡ ಐಪಿಎಲ್‌ನ ಕಳೆದ 15 ಸೀಸನ್‌ಗಳಲ್ಲಿ 11 ಬಾರಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಅದರಲ್ಲಿ 4 ಬಾರಿ ಪ್ರಶಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

5 / 7

ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018 ಮತ್ತು 2021ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ಯಶಸ್ಸು ಧೋನಿಯನ್ನು ವಿಶ್ವದ ಅತಿದೊಡ್ಡ ಟಿ20 ಲೀಗ್‌ನಲ್ಲಿ ಎರಡನೇ ಅತ್ಯಂತ ಯಶಸ್ವಿ ನಾಯಕನನ್ನಾಗಿ ಮಾಡಿದೆ.

6 / 7

ಇಲ್ಲಿಯವರೆಗೆ ಸಿಎಸ್​ಕೆ ಪರ 199 ಪಂದ್ಯಗಳನ್ನು ಒಳಗೊಂಡಂತೆ ಧೋನಿ ಐಪಿಎಲ್‌ನಲ್ಲಿ ಒಟ್ಟು 207 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ ಅವರು 123 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ. 83 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

7 / 7

ಅಷ್ಟೇ ಅಲ್ಲ, ನಾಯಕನಾಗಿ ವಿರಾಟ್ ಕೊಹ್ಲಿ ನಂತರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ನಾಯಕನಾಗಿ ಧೋನಿ ಇದುವರೆಗೆ 4482 ರನ್ ಬಾರಿಸಿದ್ದು, ವಿರಾಟ್ 4481 ರನ್ ಬಾರಿಸಿದ್ದಾರೆ.

Published On - 3:29 pm, Wed, 12 April 23

Loading...
Unable to load recommendations.
Follow Us