AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ​IPLನ 13 ತಂಡಗಳ ವಿರುದ್ಧ ಅರ್ಧಶತಕ ಬಾರಿಸಿ ದಾಖಲೆ ಬರೆದ ವಿರಾಟ್ ಕೊಹ್ಲಿ..!

Virat Kohli Records: ವಿರಾಟ್ ಕೊಹ್ಲಿ ಯಾವ ತಂಡದ ವಿರುದ್ಧ ಎಷ್ಟು ಅರ್ಧಶತಕಗಳನ್ನು ಬಾರಿಸಿದ್ದಾರೆ. ಯಾವ ಟೀಮ್ ವಿರುದ್ಧ ಅರ್ಧಶತಕ ಬಾರಿಸಲು ವಿಫಲರಾಗಿದ್ದರು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Apr 12, 2023 | 8:57 PM

ಐಪಿಎಲ್ ಇತಿಹಾಸದಲ್ಲಿ ಒಟ್ಟು 15 ತಂಡಗಳು ಕಣಕ್ಕಿಳಿದಿವೆ. ಈ ಹದಿನೈದು ತಂಡಗಳಲ್ಲಿ RCB ಯನ್ನು ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ 13 ಟೀಮ್​ಗಳ ವಿರುದ್ಧ ಅರ್ಧಶತಕ ಬಾರಿಸಿದ್ದಾರೆ. ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿದರೆ ಬೇರೆ ಯಾವುದೇ ಬ್ಯಾಟರ್ ಇಷ್ಟೊಂದು ತಂಡಗಳ ವಿರುದ್ಧ ಕನಿಷ್ಠ ಅರ್ಧಶತಕದ ಸಾಧನೆ ಮಾಡಿಲ್ಲ.

1 / 16
ಅಂದರೆ RCB ಯನ್ನು ಹೊರತುಪಡಿಸಿದರೆ ಉಳಿದ 14 ತಂಡಗಳಲ್ಲಿ ವಿರಾಟ್ ಕೊಹ್ಲಿ 13 ತಂಡಗಳ ವಿರುದ್ಧ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಹಾಗಿದ್ರೆ ವಿರಾಟ್ ಕೊಹ್ಲಿ ಯಾವ ತಂಡದ ವಿರುದ್ಧ ಎಷ್ಟು ಅರ್ಧಶತಕಗಳನ್ನು ಬಾರಿಸಿದ್ದಾರೆ. ಯಾವ ಟೀಮ್ ವಿರುದ್ಧ ಅರ್ಧಶತಕ ಬಾರಿಸಲು ವಿಫಲರಾಗಿದ್ದರು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

2 / 16
1- ಚೆನ್ನೈ ಸೂಪರ್ ಕಿಂಗ್ಸ್: 2008 ರಿಂದ ಐಪಿಎಲ್​ನಲ್ಲಿರುವ ಸಿಎಸ್​ಕೆ ತಂಡದ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 9 ಬಾರಿ 50+ ಸ್ಕೋರ್​ಗಳಿಸಿದ್ದಾರೆ.

3 / 16
2- ಡೆಲ್ಲಿ ಕ್ಯಾಪಿಟಲ್ಸ್: 2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹೆಸರಿನಲ್ಲಿ ರೂಪುಗೊಂಡಿದ್ದ ಡೆಲ್ಲಿ ಫ್ರಾಂಚೈಸಿಯು ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಿಸಿತ್ತು. ಈ 2 ತಂಡಗಳ ವಿರುದ್ಧ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಡೆಲ್ಲಿ ಫ್ರಾಂಚೈಸಿ ವಿರುದ್ಧ ಇದುವರೆಗೆ 8 ಬಾರಿ 50 ಕ್ಕಿಂತ ಹೆಚ್ಚು ರನ್​ಗಳಿಸಿದ್ದಾರೆ.

4 / 16
3- ಕೊಲ್ಕತ್ತಾ ನೈಟ್​ ರೈಡರ್ಸ್: ಐಪಿಎಲ್​ ಆರಂಭದಿಂದಲೂ ಕಣದಲ್ಲಿರುವ ಕೆಕೆಆರ್ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 5 ಬಾರಿ 50+ ಗಿಂತ ಹೆಚ್ಚಿನ ರನ್​ ಕಲೆಹಾಕಿದ್ದಾರೆ.

5 / 16
4- ಮುಂಬೈ ಇಂಡಿಯನ್ಸ್: 2008 ರಿಂದ ಐಪಿಎಲ್​ ಕಣದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ ಕೊಹ್ಲಿ 5 ಬಾರಿ ಅರ್ಧಶತಕ ಸಿಡಿಸಿದ್ದಾರೆ.

6 / 16
5- ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್​ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 4 ಬಾರಿ 50+ ಸ್ಕೋರ್​ಗಳಿಸಿದ್ದಾರೆ.

7 / 16
6- ರಾಜಸ್ಥಾನ್ ರಾಯಲ್ಸ್: 2008 ರಿಂದ ಐಪಿಎಲ್​ನಲ್ಲಿ ಕಣಕ್ಕಿಳಿಯುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಇದುವರೆಗೆ 4 ಬಾರಿ ಫಿಫ್ಟಿ ಪ್ಲಸ್ ಸ್ಕೋರ್​ ಕಲೆಹಾಕಿದ್ದಾರೆ.

8 / 16
7- ಡೆಕ್ಕನ್ ಚಾರ್ಜರ್ಸ್​: ಐಪಿಎಲ್​ ಆರಂಭದಲ್ಲಿ ಡೆಕ್ಕನ್ ಚಾರ್ಜರ್ಸ್ ಹೆಸರಿನಲ್ಲಿ ಕಣಕ್ಕಿಳಿದಿದ್ದ ಹೈದರಾಬಾದ್ ಮೂಲದ ತಂಡದ ವಿರುದ್ಧ ಕಿಂಗ್ ಕೊಹ್ಲಿ 3 ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ರನ್​ಗಳಿಸಿದ್ದರು.

9 / 16
8- ಗುಜರಾತ್ ಲಯನ್ಸ್: 2015 ರ ಐಪಿಎಲ್​ನಲ್ಲಿ ಕಣಕ್ಕಿಳಿದಿದ್ದ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ 3 ಬಾರಿ 50+ ಸ್ಕೋರ್​ಗಳಿಸಿದ್ದಾರೆ.

10 / 16
9- ರೈಸಿಂಗ್ ಪುಣೆ ಸೂಪರ್ ಜೈಂಟ್: 2016 ರಲ್ಲಿ ಐಪಿಎಲ್​ ಕಣದಲ್ಲಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಕೂಡ ಕಿಂಗ್ ಕೊಹ್ಲಿ 3 ಅರ್ಧಶತಕಗಳನ್ನು ಸಿಡಿಸಿದ್ದರು.

11 / 16
10- ಪಂಜಾಬ್ ಕಿಂಗ್ಸ್: ಐಪಿಎಲ್​ನ ಆರಂಭದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹೆಸರಿನಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ವಿರುದ್ದ ಕೂಡ ವಿರಾಟ್ ಕೊಹ್ಲಿ 3 ಬಾರಿ 50+ ಸ್ಕೋರ್​ಗಳಿಸಿದ್ದಾರೆ.

12 / 16
11- ಗುಜರಾತ್ ಟೈಟಾನ್ಸ್: 2022 ರಿಂದ ಐಪಿಎಲ್​ ಅಭಿಯಾನ ಆರಂಭಿಸಿರುವ ಗುಜರಾತ್ ಟೈಟಾನ್ಸ್ ವಿರುದ್ಧ ವಿರಾಟ್ ಕೊಹ್ಲಿ 2 ಅರ್ಧಶತಕಗಳನ್ನು ಬಾರಿಸಿದ್ದಾರೆ.

13 / 16
12- ಪುಣೆ ವಾರಿಯರ್ಸ್ ಇಂಡಿಯಾ: 2011 ರಲ್ಲಿ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದ ಪುಣೆ ವಾರಿಯರ್ಸ್ ಇಂಡಿಯಾ ತಂಡದ ವಿರುದ್ಧ ವಿರಾಟ್ ಕೊಹ್ಲಿ 1 ಅರ್ಧಶತಕ ಬಾರಿಸಿದ್ದರು.

14 / 16
13- ಲಕ್ನೋ ಸೂಪರ್ ಜೈಂಟ್ಸ್: ಐಪಿಎಲ್ ಸೀಸನ್ 16 ರ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ 61 ರನ್​ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಪ್ರಸ್ತುತ ಕಣದಲ್ಲಿರುವ ಎಲ್ಲಾ ತಂಡಗಳ ವಿರುದ್ಧ ಅರ್ಧಶತಕ ಬಾರಿಸಿದ ವಿಶೇಷ ದಾಖಲೆ ಕೊಹ್ಲಿ ಬರೆದರು.

15 / 16
14- ಕೊಚ್ಚಿ ಟಸ್ಕರ್ಸ್ ಕೇರಳ: 2011 ರ ಐಪಿಎಲ್​ನಲ್ಲಿ ಕಣಕ್ಕಿಳಿದಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ವಿರುದ್ಧ ಮಾತ್ರ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಒಂದು ಸೀಸನ್​ನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೊಚ್ಚಿನ್ ಟಸ್ಕರ್ಸ್ ಆರ್​ಸಿಬಿ ವಿರುದ್ಧ 2 ಪಂದ್ಯಗಳನ್ನಾಡಿತ್ತು. ಆದರೆ ಈ 2 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಜೇಯ 27 ಹಾಗೂ 23 ರನ್​ಗಳಿಸಿದ್ದರು.

16 / 16

Published On - 8:30 pm, Wed, 12 April 23

Follow us
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು

ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ

ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ

ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್

ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು

ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್

ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?

ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್

‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ

ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ