Updated on:Apr 12, 2023 | 9:24 PM
IPL 2023: ಚೆನ್ನೈನ ಎಂಎ ಚಿದರಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅದು ಕೂಡ ಐಪಿಎಲ್ ಇತಿಹಾಸದಲ್ಲೇ ಯಾರು ಮಾಡದ ದಾಖಲೆ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಜೊತೆ ಟಾಸ್ಗೆ ಆಗಮಿಸುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಸಿಎಸ್ಕೆ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ವಿಶೇಷ ದಾಖಲೆ ಬರೆದರು. ಐಪಿಎಲ್ನಲ್ಲಿ ಯಾವುದೇ ನಾಯಕ ಒಂದೇ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿಲ್ಲ.
ಹಾಗೆಯೇ 200 ಪಂದ್ಯಗಳಲ್ಲಿ ಯಾರು ಕೂಡ ನಾಯಕರಾಗಿ ಕಾಣಿಸಿಕೊಂಡಿಲ್ಲ. ಇದೀಗ 200 ಪಂದ್ಯಗಳಲ್ಲಿ ಸಿಎಸ್ಕೆ ತಂಡದ ಕಪ್ತಾನನಾಗಿ ಕಾಣಿಸಿಕೊಳ್ಳುವ ಮೂಲಕ ಧೋನಿ ಇತಿಹಾಸ ನಿರ್ಮಿಸಿದ್ದಾರೆ. ಅಂದಹಾಗೆ ಧೋನಿ ಐಪಿಎಲ್ನಲ್ಲಿ 2 ತಂಡಗಳ ನಾಯಕರಾಗಿ ಕಾಣಿಸಿಕೊಂಡಿದ್ದರು.
ಸಿಎಸ್ಕೆ ಕ್ಯಾಪ್ಟನ್ ಆಗಿ ಐಪಿಎಲ್ ಕೆರಿಯರ್ ಆರಂಭಿಸಿದ್ದ ಧೋನಿ, ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬ್ಯಾನ್ ಆಗಿದ್ದ ವೇಳೆ ರೈಸಿಂಗ್ ಪುಣೆ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು. ಒಟ್ಟು 214 ಪಂದ್ಯಗಳಲ್ಲಿ ಎಂಎಸ್ಡಿ ನಾಯಕರಾಗಿ ಕಾಣಿಸಿಕೊಂಡಿದ್ದು, ಈ ವೇಳೆ 125 ಗೆಲುವು ಹಾಗೂ 87 ಸೋಲು ಕಂಡಿದ್ದಾರೆ.
ಇನ್ನು ಐಪಿಎಲ್ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡ ಆಟಗಾರ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ಹಿಟ್ಮ್ಯಾನ್ ಒಟ್ಟು 146 ಪಂದ್ಯಗಳಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ.
ಹಾಗೆಯೇ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದು, ಕಿಂಗ್ ಕೊಹ್ಲಿ ಒಟ್ಟು 140 ಪಂದ್ಯಗಳಲ್ಲಿ ಆರ್ಸಿಬಿ ತಂಡದ ಸಾರಥ್ಯವಹಿಸಿದ್ದರು.
Published On - 9:24 pm, Wed, 12 April 23