IPL 2023: ಅನಗತ್ಯ ದಾಖಲೆ ಬರೆದ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್
IPL 2023 Kannada: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವ ಮೂಲಕ ಧೋನಿ ಸಿಎಸ್ಕೆ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕ ಎನಿಸಿಕೊಂಡರು. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅನಗತ್ಯ ದಾಖಲೆ ಬರೆದರು.
Updated on: Apr 12, 2023 | 11:33 PM

IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ ಕಳಪೆ ದಾಖಲೆಯೊಂದು ಸ್ಯಾಮ್ಸನ್ ಪಾಲಾಗಿದೆ.

ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್ಸನ್ ತಾವು ಎದುರಿಸಿದ ರವೀಂದ್ರ ಜಡೇಜಾರ 2ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ಪರ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎಂಬ ಕೆಟ್ಟ ದಾಖಲೆಯೊಂದು ಸಂಜು ಸ್ಯಾಮನ್ಸ್ ಹೆಸರಿಗೆ ಸೇರ್ಪಡೆಯಾಯಿತು.

ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ ಶೇನ್ ವಾರ್ನ್ ಹಾಗೂ ಸ್ಟುವರ್ಟ್ ಬಿನ್ನಿ ಹೆಸರಿನಲ್ಲಿತ್ತು. ವಾರ್ನ್ ಹಾಗೂ ಬಿನ್ನ ತಲಾ 7 ಬಾರಿ ಶೂನ್ಯಕ್ಕೆ ಔಟಾಗಿದ್ದರು.

ಆದರೆ ಈ ಬಾರಿಯ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಶೂನ್ಯುಕ್ಕೆ ಔಟಾಗುವ ಮೂಲಕ ಸಂಜು ಸ್ಯಾಮ್ಸನ್ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಸ್ಯಾಮ್ಸನ್ ಶೂನ್ಯಕ್ಕೆ ಔಟಾಗಿದ್ದರು. ಇದೀಗ ಸಿಎಸ್ಕೆ ವಿರುದ್ಧ ಕೂಡ ಯಾವುದೇ ರನ್ಗಳಿಸದೇ ವಿಕೆಟ್ ಒಪ್ಪಿಸಿದ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ.
