Updated on: May 22, 2023 | 5:54 PM
16ನೇ ಆವೃತ್ತಿಯ ಐಪಿಎಲ್ನ ಲೀಗ್ ಹಂತದ ಪ್ರಯಾಣ ಮೇ 21 ರಂದು ಕೊನೆಗೊಂಡಿದೆ. ಲೀಗ್ ಹಂತದ ಅಂತ್ಯಕ್ಕೆ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್ನಲ್ಲಿರುವವರ ಟಾಪ್ 5 ಬ್ಯಾಟರ್ಗಳನ್ನು ನೋಡುವುದಾದರೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 14 ಪಂದ್ಯಗಳಿಂದ 730 ರನ್‌ಗಳೊಂದಿಗೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಗುಜರಾತ್ ತಂಡದ ಯುವ ಆಟಗಾರ ಶುಭ್ಮನ್ ಗಿಲ್ ಸತತ ಎರಡು ಶತಕ ಸಿಡಿಸಿ 680 ರನ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಈ ಆವೃತ್ತಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಕೊಹ್ಲಿ ಕೂಡ ಆರೆಂಜ್ ಕ್ಯಾಪ್ ರೇಸ್ನಲ್ಲಿ ಟಾಪ್ 3ರಲ್ಲಿ ಸ್ಥಾನ ಪಡೆದಿದ್ದು, ಕೊಹ್ಲಿ ಆಡಿರುವ 14 ಪಂದ್ಯಗಳಲ್ಲಿ 649 ರನ್ ಕಲೆಹಾಕಿದ್ದಾರೆ
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 625 ರನ್‌ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.
ಐದನೇ ಸ್ಥಾನದಲ್ಲಿರುವ ಚೆನ್ನೈ ಆರಂಭಿಕ ಡೆವೋನ್ ಕಾನ್ವೇ 14 ಪಂದ್ಯಗಳಿಂದ 585 ರನ್ ಬಾರಿಸಿದ್ದಾರೆ.