AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 4 ಆಟಗಾರರೊಂದಿಗೆ ಕಪ್ ಗೆಲ್ಲಲು ಹೊರಟಿದ್ದ RCB

IPL 2023 Kannada: ಈ ಬಾರಿ RCB ಆಡಿರುವ 14 ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿರುವುದು ಕೇವಲ 4 ಆಟಗಾರರು ಮಾತ್ರ. ಉಳಿದ ಪ್ಲೇಯರ್ಸ್​ಗಳಿಂದ ಒಂದೆರೆಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿದ್ದರೂ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುತ್ತಿತ್ತು.

TV9 Web
| Updated By: ಝಾಹಿರ್ ಯೂಸುಫ್|

Updated on: May 22, 2023 | 7:21 PM

Share
IPL 2023: ಐಪಿಎಲ್​ ಸೀಸನ್​ 16 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಅಂತ್ಯವಾಗಿದೆ. 13 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದ್ದ ಆರ್​ಸಿಬಿಗೆ ಕೊನೆಯ ಪಂದ್ಯದವರೆಗೂ ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೆ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಗ್ಗರಿಸುವುದರೊಂದಿಗೆ ಐಪಿಎಲ್​ನಿಂದ ಹೊರಬಿದ್ದಿದೆ.

1 / 12
ವಿಶೇಷ ಎಂದರೆ ಈ ಬಾರಿ RCB ಆಡಿರುವ 14 ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿರುವುದು ಕೇವಲ 4 ಆಟಗಾರರು ಮಾತ್ರ. ಉಳಿದ ಪ್ಲೇಯರ್ಸ್​ಗಳಿಂದ ಒಂದೆರೆಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿದ್ದರೂ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುತ್ತಿತ್ತು.

2 / 12
ಏಕೆಂದರೆ ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರಿಸಿದ್ದು ಬಿಟ್ಟರೆ ಉಳಿದವರು ಲೆಕ್ಕಕ್ಕಿದ್ದರರೆ ಹೊರತು ಆಟಕ್ಕಿರಲಿಲ್ಲ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

3 / 12
ಫಾಫ್ ಡುಪ್ಲೆಸಿಸ್ ಆಡಿರುವ 14 ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 730 ರನ್​ಗಳು. ಈ ವೇಳೆ 8 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು.

4 / 12
ಇನ್ನು ವಿರಾಟ್ ಕೊಹ್ಲಿ 14 ಇನಿಂಗ್ಸ್​ಗಳಲ್ಲಿ 2 ಭರ್ಜರಿ ಶತಕ ಹಾಗೂ 6 ಅರ್ಧಶತಕದೊಂದಿಗೆ ಒಟ್ಟು 639 ರನ್​ ಕಲೆಹಾಕಿದ್ದಾರೆ.

5 / 12
ಹಾಗೆಯೇ ಗ್ಲೆನ್ ಮ್ಯಾಕ್ಸ್​ವೆಲ್ 14 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 400 ರನ್​ಗಳಿಸಿದ್ದಾರೆ.

6 / 12
ಅಂದರೆ ಆರ್​ಸಿಬಿ ತಂಡ ಈ ಬಾರಿ ಕಲೆಹಾಕಿದ ಒಟ್ಟು ಸ್ಕೋರ್​ 2502 ರನ್​ಗಳು. ಇದರಲ್ಲಿ KGF ಜೋಡಿಗಳು ಜೊತೆಗೂಡಿ ಕಲೆಹಾಕಿದ ಒಟ್ಟು ಸ್ಕೋರ್ ಬರೋಬ್ಬರಿ 1,769 ರನ್​ಗಳು. ಇನ್ನುಳಿದ ಎಲ್ಲಾ ಬ್ಯಾಟರ್​ಗಳು ಸೇರಿ ಪೇರಿಸಿದ್ದು ಕೇವಲ 733 ರನ್​ಗಳು ಮಾತ್ರ ಎಂದರೆ ನಂಬಲೇಬೇಕು.

7 / 12
ಇಲ್ಲಿ ಅಚ್ಚರಿಯ ವಿಷಯ ಎಂದರೆ ಈ ಮೂವರನ್ನು ಹೊರತುಪಡಿಸಿ ಆರ್​ಸಿಬಿ ತಂಡದ ಯಾವೊಬ್ಬ ಬ್ಯಾಟ್ಸ್​ಮನ್ ಕೂಡ 150 ರನ್​ ಕಲೆಹಾಕಿಲ್ಲ ಎಂಬುದು.

8 / 12
ಅಂದರೆ ಆರ್​ಸಿಬಿ ತಂಡವು ಬ್ಯಾಟಿಂಗ್​ನಲ್ಲಿ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಅವಲಂಭಿಸಿದ್ದರು ಎಂಬುದು ಸ್ಪಷ್ಟ. ಇನ್ನು ಬೌಲಿಂಗ್​ನಲ್ಲಿ ಮಿಂಚಿದ್ದು ಮೊಹಮ್ಮದ್ ಸಿರಾಜ್ ಮಾತ್ರ.

9 / 12
RCB ಪರ ಪವರ್​ಪ್ಲೇನಲ್ಲಿ ಅತ್ಯುತ್ತಮ ದಾಳಿ ಸಂಘಿಟಿಸುತ್ತಿದ್ದ ಸಿರಾಜ್ ಟೂರ್ನಿಯುದಕ್ಕೂ ಮೊದಲ 6 ಓವರ್​ಗಳಲ್ಲಿ ವಿಕೆಟ್ ಉರುಳಿಸಿ ಯಶಸ್ಸು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಲ್ಲಿ ಸಿರಾಜ್​ಗೆ ಉತ್ತಮ ಸಾಥ್ ಸಿಕ್ಕಿರುವುದೇ ಅಪರೂಪ.

10 / 12
ಏಕೆಂದರೆ ಈ ಬಾರಿ ಸಿರಾಜ್ ಒಟ್ಟು 300 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಈ ವೇಳೆ ನೀಡಿರುವುದು ಕೇವಲ 376 ರನ್​ಗಳು. ಅಲ್ಲದೆ 19 ವಿಕೆಟ್​ಗಳನ್ನು ಕೂಡ ಕಬಳಿಸಿ ಆರ್​ಸಿಬಿ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಉಳಿದ ಯಾವುದೇ ಬೌಲರ್​ಗಳಿಂದ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ ಎಂಬುದೇ ಸತ್ಯ.

11 / 12
ಅಂದರೆ ಆರ್​ಸಿಬಿ ತಂಡವು ಈ ನಾಲ್ವರು ಆಟಗಾರರನ್ನೇ ಅವಲಂಭಿಸಿ 7 ಪಂದ್ಯಗಳನ್ನು ಗೆದ್ದಿರುವುದೇ ದೊಡ್ಡ ಸಾಧನೆ. ಅಲ್ಲದೆ ಈ ನಾಲ್ವರನ್ನೇ  ಅವಲಂಭಿಸಿ RCB ಕಪ್ ಗೆಲ್ಲಲು ಹೊರಟಿದ್ದೇ ಪರಮಾಶ್ಚರ್ಯ ಎನ್ನದೇ ವಿಧಿಯಿಲ್ಲ.

12 / 12
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ