Prithvi Shaw: ಪೃಥ್ವಿ ಶಾ ವಿರುದ್ಧ ದೂರು ದಾಖಲು: ಅರ್ಧದಲ್ಲೇ IPL​ ತೊರೆಯಲಿದ್ದಾರಾ ಡ್ಯಾಶಿಂಗ್ ಓಪನರ್?

| Updated By: ಝಾಹಿರ್ ಯೂಸುಫ್

Updated on: Apr 06, 2023 | 3:29 PM

IPL 2023 Kannada: ಕಳಪೆ ಫಾರ್ಮ್​​ನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ಯಾಶಿಂಗ್ ಓಪನರ್​ ಪೃಥ್ವಿ ಶಾಗೆ ಹೊಸ ಸಂಕಷ್ಟ ಎದುರಾಗಿದೆ.

1 / 7
ಐಪಿಎಲ್​​ ಆರಂಭದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾಗೆ ಸಂಕಷ್ಟ ಎದುರಾಗಿದೆ. ಒಂದೆಡೆ ಕಳಪೆ ಬ್ಯಾಟಿಂಗ್​ನಿಂದ ಟೀಕೆಗೆ ಒಳಗಾಗಿದ್ದರೆ, ಮತ್ತೊಂದೆಡೆ ಯುವ ಆಟಗಾರನ ವಿರುದ್ಧ ಮುಂಬೈನಲ್ಲಿ ಎಫ್​ಐಆರ್​ ದಾಖಲಾಗಿದೆ.

2 / 7
ಸೋಷಿಯಲ್ ಮೀಡಿಯಾದ ಸೆಲೆಬ್ರಿಟಿ ಸಪ್ನಾ ಗಿಲ್ ಅವರು ಪೃಥ್ವಿ ಶಾ ವಿರುದ್ಧ ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪೃಥ್ವಿ ಶಾ ಹಾಗೂ ಸಪ್ನಾ ಗಿಲ್ ಸ್ನೇಹಿತರ ನಡುವೆ ಜಗಳವಾಗಿತ್ತು.

3 / 7
ಮುಂಬೈನ ಕ್ಲಬ್‌ನಲ್ಲಿ ಪೃಥ್ವಿ ಹಾಗೂ ಸಪ್ನಾ ಗಿಲ್ ಸ್ನೇಹಿತರ ನಡುವೆ ವಾಗ್ವಾದ ನಡೆದಿತ್ತು. ಆ ಬಳಿಕ ಹೊರಗೆ ಇಬ್ಬರ ಸ್ನೇಹಿತರ ನಡುವೆ ಜಗಳವಾಗಿತ್ತು. ಈ ವೇಳೆ ಪೃಥ್ವಿ ಶಾ ಮತ್ತು ಆತನ ಸ್ನೇಹಿತರು ತನಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಸಪ್ನಾ ಗಿಲ್ ಆರೋಪಿಸಿದ್ದಾರೆ.

4 / 7
ಸೆಲ್ಫಿ ತೆಗೆಯುವ ಸಲುವಾಗಿ ಶುರುವಾದ ಈ ವಾಗ್ವಾದವು ಆ ಬಳಿಕ ಜಗಳವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಪೃಥ್ವಿ ಶಾ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಇದೇ ಘಟನೆಗೆ ಸಂಬಂಧ ಅಂಧೇರಿ ಮ್ಯಾಜಿಸ್ಟ್ರೇಟ್ 66 ನ್ಯಾಯಾಲಯದಲ್ಲಿ ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

5 / 7
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನ ವಿರುದ್ಧ ಐಪಿಸಿ ಸೆಕ್ಷನ್ 354, 509, 324 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಶಾ ಜೊತೆಗಿದ್ದ ಸ್ನೇಹಿತ ಕೂಡ ತನಗೆ ಬ್ಯಾಟ್‌ನಿಂದ ಹೊಡೆದಿದ್ದಾರೆ ಎಂಬುದಕ್ಕೆ ಸಪ್ನಾ ಗಿಲ್ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಿದ್ದು, ಅದರಲ್ಲಿ ಲೈಂಗಿಕ ಶೋಷಣೆಯ ಬಗ್ಗೆ ನಮೂದಿಸಲಾಗಿದೆ ಎಂದು ವರದಿಯಾಗಿದೆ.

6 / 7
ಸದ್ಯ ಪೃಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಪ್ನಾ ಗಿಲ್ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಯು ಇದೇ ಏಪ್ರಿಲ್ 17 ರಂದು ನಡೆಯಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಪೃಥ್ವಿ ವಿಚಾರಣೆಗೆ ಹಾಜರಾಗಬೇಕಾಗಿ ಬಂದರೆ, ಐಪಿಎಲ್​ ಅನ್ನು ಅರ್ಧದಲ್ಲೇ ತೊರೆಯಬಹುದು.

7 / 7
ಒಟ್ಟಿನಲ್ಲಿ ಕಳಪೆ ಫಾರ್ಮ್​​ನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ಯಾಶಿಂಗ್ ಓಪನರ್​ಗೆ ಇದೀಗ ಹೊಸ ಸಂಕಷ್ಟ ಎದುರಾಗಿದ್ದು, ಇದರಿಂದ ಪೃಥ್ವಿ ಶಾ ಹೇಗೆ ಪಾರಾಗಲಿದ್ದಾರೆ ಕಾದು ನೋಡಬೇಕಿದೆ.