IPL 2023 RCB vs GT: ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಇಲ್ಲಿದೆ ನಿಯಮಗಳು

Edited By:

Updated on: May 21, 2023 | 7:41 PM

IPL 2023 Rain Rules: ಈ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕ. ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಮಾತ್ರ ಆರ್​ಸಿಬಿ ತಂಡಕ್ಕೆ ಪ್ಲೇಆಫ್​ ಪ್ರವೇಶಿಸಲು ಅವಕಾಶ ಇರಲಿದೆ.

1 / 12
IPL 2023 RCB vs GT: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

IPL 2023 RCB vs GT: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

2 / 12

ಭಾನುವಾರ ಸಂಜೆ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಇದೀಗ ತುಂತುರು ಮಳೆ ಮುಂದುವರೆದಿದೆ. ಇದರ ನಡುವೆ ಆರ್​ಸಿಬಿ-ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

3 / 12

ಏಕೆಂದರೆ ಈ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕ. ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಮಾತ್ರ ಆರ್​ಸಿಬಿ ತಂಡಕ್ಕೆ ಪ್ಲೇಆಫ್​ ಪ್ರವೇಶಿಸಲು ಅವಕಾಶ ಇರಲಿದೆ. ಒಂದು ವೇಳೆ ಪಂದ್ಯ ರದ್ದಾರೆ ಮುಂಬೈ ಇಂಡಿಯನ್ಸ್ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.

4 / 12

ಒಂದು ವೇಳೆ ಮಳೆ ನಿಂತರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುವುದು ಖಚಿತ. ಹಾಗಿದ್ರೆ ಮಳೆ ನಿಂತ ಬಳಿಕ ಪಂದ್ಯ ಹೇಗೆ ನಡೆಯಲಿದೆ ಎಂದು ತಿಳಿಯೋಣ...

5 / 12

ಬೆಂಗಳೂರಿನಲ್ಲಿ ಇಂದು ನಡೆಯಬೇಕಿರುವ ಪಂದ್ಯ ಶುರುವಾಗಬೇಕಿರುವ ಸಮಯ 7:30 PM. ಇದಕ್ಕನುಗುಣವಾಗಿ ಪಂದ್ಯದ ಹೆಚ್ಚುವರಿ ಕಟ್ ಆಫ್ ಸಮಯ 11:50 PM. ಅದುವರೆಗೆ ಪಂದ್ಯ ಆಯೋಜಿಸಲು ಸಾಧ್ಯನಾ ಎಂಬುದನ್ನು ಎದುರು ನೋಡಲಿದ್ದಾರೆ.

6 / 12

ಇದರ ನಡುವೆ ಪಂದ್ಯ ನಡೆಸಲು ಅವಕಾಶವಿದ್ದರೆ ಹೆಚ್ಚುವರಿ ಸಮಯವನ್ನು ಬಳಸಲಿದ್ದಾರೆ. ಅಂದರೆ ವಿಳಂಬವಾದ ಆರಂಭ ಅಥವಾ ಅಡಚಣೆಯ ಸಂದರ್ಭದಲ್ಲಿ, ಅರವತ್ತು ನಿಮಿಷಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಪೂರ್ಣ 20 ಓವರ್ ಆಡಿಸಲು ಅವಕಾಶ ಇದೆಯಾ ಎಂದು ನೋಡಲಾಗುತ್ತದೆ.

7 / 12

ಆದರೆ ನಿಗದಿತ ಸಮಯದೊಳಗೆ 20 ಓವರ್​ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬುದು ಕಂಡು ಬಂದರೆ ಓವರ್​ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ. ಇಲ್ಲಿ ಟೈಮ್ ಔಟ್ ಸಮಯ ಹಾಗೂ ಇನ್ನಿಂಗ್ಸ್ ಬ್ರೇಕ್​ಗಳನ್ನು ಸಹ ತೆಗೆದು ಹಾಕಲಾಗುತ್ತದೆ. ಆ ಮೂಲಕ ಓವರ್​ ಕಡಿತದೊಂದಿಗೆ ಪಂದ್ಯ ಆಯೋಜಿಸಲಾಗುತ್ತದೆ.

8 / 12

ಇನ್ನು ಪಂದ್ಯ ಶುರುವಾದ ಬಳಿಕ ಮಳೆ ಬಂದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.

9 / 12

ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್​ಗಳ ಪಂದ್ಯಗಳನ್ನು ಆಡಲೇಬೇಕು. ಇದಕ್ಕಿಂತ ಕಡಿಮೆ ಓವರ್​ಗಳ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ. ಅದರಂತೆ ಎರಡೂ ತಂಡಗಳು ಕನಿಷ್ಠ 5 ಓವರ್​ಗಳನ್ನು ಬೌಲಿಂಗ್ ಮಾಡಿದ್ರೆ ಮಾತ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

10 / 12

ಒಂದು ವೇಳೆ ಮೊದಲ ಇನಿಂಗ್ಸ್ ಆಡಿದ ತಂಡ 10 ಓವರ್ ಆಡಿದ್ರೆ, 2ನೇ ಇನಿಂಗ್ಸ್​ನಲ್ಲಿ 5 ಓವರ್​ಗಳನ್ನು ಪೂರ್ಣಗೊಳಿಸಬೇಕು. ಅಂದರೆ ಮಾತ್ರ ಇಲ್ಲಿ ಡಕ್​ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಗುತ್ತದೆ. ಹೀಗಾಗಿಯೇ ಆರ್​ಸಿಬಿ ತಂಡದ ಗೆಲುವು ನಿರ್ಧರಿಸಲು ಕನಿಷ್ಠ 5 ಓವರ್​ಗಳ ಪಂದ್ಯವಾದರೂ ನಡೆಯಲೇಬೇಕು.

11 / 12

ಅಂದಹಾಗೆ ಆರ್​ಸಿಬಿ-ಗುಜರಾತ್ ಟೈಟಾನ್ಸ್ ನಡುವಣ ಪಂದ್ಯದ 5 ಓವರ್​ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಮ್ಯಾಚ್​ ಅನ್ನು ರದ್ದುಗೊಳಿಸುವ ಬಗ್ಗೆ ಮ್ಯಾಚ್ ರೆಫರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

12 / 12

ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಹೀಗಾಗಿ ಓವರ್ ಕಡಿತದೊಂದಿಗೆ ಪಂದ್ಯವನ್ನು ನಡೆಯುವ ಸಾಧ್ಯತೆ ಹೆಚ್ಚು.

Published On - 7:41 pm, Sun, 21 May 23

Loading...
Unable to load recommendations.
Follow Us