IPL 2023: CSK ತಂಡದಲ್ಲಿ ಎಲ್ಲವೂ ಸರಿಯಿಲ್ಲ? ಕರ್ಮ ನಿಮ್ಮನ್ನ ಬಿಡಲ್ಲ ಎಂದ ಜಡೇಜಾ

| Updated By: ಝಾಹಿರ್ ಯೂಸುಫ್

Updated on: May 22, 2023 | 8:28 PM

IPL 2023 Kannada: ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರಲಾರಂಭಿಸಿದೆ. ಏಕೆಂದರೆ ಈ ಹಿಂದೆ ಕೂಡ ಜಡೇಜಾ ಸಿಎಸ್​ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು.

1 / 7
IPL 2023: ಐಪಿಎಲ್​ ಸೀಸನ್ 16 ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಇತ್ತ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಕಾರಣ ಸಿಎಸ್​ಕೆ ಆಟಗಾರ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್.

2 / 7
ಖಂಡಿತವಾಗಿಯೂ...ಕರ್ಮವು ನಿಮ್ಮ ಬಳಿಗೆ ಬಂದೇ ಬರುತ್ತದೆ. ಅದು ಬೇಗನೆ ಬರಬಹುದು ಅಥವಾ ತಡವಾಗಬಹುದು. ಆದರೆ ಅದು ಖಂಡಿತವಾಗಿಯೂ ಬಂದೇ ಬರುತ್ತದೆ ಎಂಬ ಪೋಸ್ಟ್​ ಅನ್ನು ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3 / 7
ಅಚ್ಚರಿ ಎಂದರೆ ಈ ಪೋಸ್ಟ್​ ಅನ್ನು ಶೇರ್ ಮಾಡಿರುವ ಜಡೇಜಾ ಅವರ ಪತ್ನಿ ರಿವಾಬಾ..ನಿಮ್ಮ ಸ್ವಂತ ಹಾದಿಯನ್ನು ಅನುಸರಿಸಿ ಎಂದು ಬರೆದುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಜಡೇಜಾ ಅವರ ಈ ಕುತೂಹಲಕಾರಿ ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ.

4 / 7
ಏಕೆಂದರೆ ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ನಡುವೆ ವಾಕ್ಸಮರ ನಡೆದಿತ್ತು. ಎಲ್ಲಾ ಆಟಗಾರರು ಪ್ಲೇಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದರೆ ಇತ್ತ ಧೋನಿ ಜಡೇಜಾಗೆ ಕ್ಲಾಸ್ ತೆಗೆದುಕೊಂಡಿದ್ದರು.

5 / 7
ಅಲ್ಲದೆ ಸಿಎಸ್​ಕೆ ನಾಯಕನ ಮಾತುಗಳನ್ನು ಆಲಿಸುತ್ತಿದ್ದ ಜಡೇಜಾ ಅವರ ಮುಖದಲ್ಲಿ ಯಾವುದೇ ನಗು ಇರಲಿಲ್ಲ. ಅಲ್ಲದೆ ನಿರಾಶಭಾವದೊಂದಿಗೆ ಅವರು ಡಗೌಟ್​ಗೆ ತೆರಳಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಜಡೇಜಾ ಕರ್ಮ ರಿಟರ್ನ್ಸ್ ಪೋಸ್ಟ್ ಹಾಕಿದ್ದಾರೆ.

6 / 7
ಇದರ ಬೆನ್ನಲ್ಲೇ ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರಲಾರಂಭಿಸಿದೆ. ಏಕೆಂದರೆ ಈ ಹಿಂದೆ ಕೂಡ ಜಡೇಜಾ ಸಿಎಸ್​ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್​ನಲ್ಲಿ ನಾಯಕತ್ವ ನೀಡಿ ಕೆಲ ಪಂದ್ಯಗಳ ಬಳಿಕ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿದ್ದು.

7 / 7
ಇದಾದ ಬಳಿಕ ಜಡೇಜಾ ಸಿಎಸ್​ಕೆ ಪರ ಆಡುವುದಿಲ್ಲ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಅಂತಿಮವಾಗಿ ಸಿಎಸ್​ಕೆ ಫ್ರಾಂಚೈಸಿಯು ಸ್ಟಾರ್ ಆಲ್​ರೌಂಡರ್​ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಧೋನಿ ಜೊತೆಗಿನ ಜಗಳದ ಬೆನ್ನಲ್ಲೇ ರವೀಂದ್ರ ಜಡೇಜಾ ಹಾಕಿರುವ ಕರ್ಮ ರಿಟರ್ನ್ಸ್ ಪೋಸ್ಟ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.