IPL 2023: ಕ್ಯಾಚ್​ ಕೈ ಚೆಲ್ಲಿ ಮ್ಯಾಚ್ ಸೋತ RCB

| Updated By: ಝಾಹಿರ್ ಯೂಸುಫ್

Updated on: Apr 26, 2023 | 11:17 PM

IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಬೌಲಿಂಗ್ ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ.

1 / 7
IPL 2023 RCB vs KKR: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಅದರಲ್ಲೂ ವಿಕೆಟ್​ಗಳ ಹುಡುಕಾಟದಲ್ಲಿದ್ದಾಗ ಬೌಲರ್​ಗಳೇ ಕ್ಯಾಚ್​ಗಳನ್ನು ಕೈಚೆಲ್ಲಿರುವುದು ಅಚ್ಚರಿ.

2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಬೌಲಿಂಗ್ ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಪವರ್​ಪ್ಲೇನಲ್ಲೇ ಅಬ್ಬರಿಸಿದ ಜೇಸನ್ ರಾಯ್-ಜಗದೀಸನ್ 6 ಓವರ್​ಗಳಲ್ಲಿ 66 ರನ್​ ಚಚ್ಚಿದ್ದರು.

3 / 7
ಇದಾದ ಬಳಿಕ ಕನ್ನಡಿಗ ವೈಶಾಕ್ ವಿಜಯಕುಮಾರ್ ಒಂದೇ ಓವರ್​ನಲ್ಲಿ ಜಗದೀಸನ್ (27) ಹಾಗೂ ಜೇಸನ್ ರಾಯ್ (56) ವಿಕೆಟ್ ಉರುಳಿಸಿ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಆದರೆ ಆ ಬಳಿಕ ಜೊತೆಯಾದ ವೆಂಕಟೇಶ್ ಅಯ್ಯರ್ ಹಾಗೂ ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿದರು.

4 / 7
ಆರ್​ಸಿಬಿ ಫೀಲ್ಡರ್​ಗಳು ಮಾಡಿದ ತಪ್ಪಿನಿಂದಾಗಿ ಈ ಜೋಡಿಯು ಮೂರನೇ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡಿದ್ದರು. ಅಂದರೆ 13ನೇ ಓವರ್​ನಲ್ಲಿ 5 ರನ್​ಗಳಿಸಿದ್ದ ನಿತೀಶ್ ರಾಣಾ ಅವರ ಸುಲಭ ಕ್ಯಾಚ್​ ಅನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದರು.

5 / 7
ಇದಾದ ಬಳಿಕ 20 ರನ್​ಗಳಿಸಿದ್ದ ನಿತೀಶ್ ರಾಣಾ ಹರ್ಷಲ್ ಪಟೇಲ್ ಮತ್ತೊಂದು ಜೀವದಾನ ನೀಡಿದರು. ಸಿರಾಜ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದ ರಾಣಾ ಅವರ ಸುಲಭ ಕ್ಯಾಚ್​ ಅನ್ನು ಹರ್ಷಲ್ ಪಟೇಲ್ ಕೈಚೆಲ್ಲಿದರು.

6 / 7
ಈ ಎರಡು ಜೀವದಾನಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ನಿತೀಶ್ ರಾಣಾ 21 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 48 ರನ್​ ಚಚ್ಚಿದರು. ಅಲ್ಲದೆ ವೆಂಕಟೇಶ್ ಅಯ್ಯರ್ (31) ಜೊತೆಗೂಡಿ 80 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ಕೆಕೆಆರ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತು.

7 / 7
201 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ತಂಡವು 8 ವಿಕೆಟ್ ನಷ್ಟಕ್ಕೆ 179 ರನ್​​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೆಕೆಆರ್ 21 ರನ್​ಗಳ ಜಯ ಸಾಧಿಸಿತು. ಒಂದು ವೇಳೆ ನಿತೀಶ್ ರಾಣಾ ಅವರ ವಿಕೆಟ್ ಬೇಗನೆ ಸಿಗುತ್ತಿದ್ದರೆ ಕೆಕೆಆರ್ ತಂಡವು ಒತ್ತಡಕ್ಕೆ ಒಳಗಾಗುತ್ತಿತ್ತು. ಅಲ್ಲದೆ ಮೂರನೇ ವಿಕೆಟ್​ಗೆ 80 ರನ್​ಗಳ ಭರ್ಜರಿ ಜೊತೆಯಾಟ ಕೂಡ ಮೂಡಿಬರುತ್ತಿರಲಿಲ್ಲ. ಇದರಿಂದ ಕೆಕೆಆರ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಕಡಿಮೆ ಗುರಿ ಪಡೆದು ಆರ್​ಸಿಬಿಗೆ ಗೆಲ್ಲುವ ಅವಕಾಶ ಇರುತ್ತಿತ್ತು. ಆದರೆ ಆರ್​ಸಿಬಿ ಕ್ಯಾಚ್ ಕೈಚೆಲ್ಲಿ ಮ್ಯಾಚ್ ಅನ್ನು ಕೂಡ ಕೈಚೆಲ್ಲಿದೆ ಎನ್ನಬಹುದು.