IPL 2023: RCB ತಂಡದಲ್ಲಿ 3 ಬ್ಯಾಟ್ಸ್​ಮನ್​, ಒಬ್ಬ ಬೌಲರ್ ಮತ್ತು 7 ಫೀಲ್ಡರ್​ಗಳು..!

|

Updated on: Apr 24, 2023 | 8:33 PM

IPL 2023 Kannada: ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಕೆಕೆಆರ್ ವಿರುದ್ಧ ಆಡಲಿದೆ. ಏಪ್ರಿಲ್ 26 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದೊಂದಿಗೆ ಆರ್​ಸಿಬಿ ದ್ವಿತಿಯಾರ್ಧ ಶುರು ಮಾಡಲಿದೆ.

1 / 9
IPL 2023: ಈ ಸಲ ಕಪ್ ಕಮ್ದೆ ಎಂಬ ಘೋಷವಾಕ್ಯದೊಂದಿಗೆ ಐಪಿಎಲ್ ಸೀಸನ್ 16 ಅಭಿಯಾನ ಆರಂಭಿಸಿದ್ದ ಆರ್​ಸಿಬಿ ತಂಡದ ಲೆಕ್ಕಾಚಾರಗಳು ತಲೆ ಕೆಳಗಾಗುತ್ತಿದೆ. ಏಕೆಂದರೆ ಆಡಿರುವ 7 ಪಂದ್ಯಗಳಲ್ಲಿ ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ. ಆದರೆ ಈ ನಾಲ್ಕು ಪಂದ್ಯಗಳ ಗೆಲುವಿನ ಹಿಂದಿರುವುದು ಕೂಡ ನಾಲ್ವರು ಎಂಬುದು ವಿಶೇಷ.

2 / 9
ಅಂದರೆ ಆರ್​ಸಿಬಿ ತಂಡವು 11 ಮಂದಿಯೊಂದಿಗೆ ಕಣಕ್ಕಿಳಿಯುತ್ತಿದ್ದರೂ ತಂಡದ ಗೆಲುವಿನಲ್ಲಿ ಕೊಡುಗೆ ನೀಡುತ್ತಿರುವುದು ಕೇವಲ ನಾಲ್ವರು ಆಟಗಾರರು ಮಾತ್ರ. ಉಳಿದವರು ಕೇವಲ ಫೀಲ್ಡಿಂಗ್​ಗೆ ಸೀಮಿತವಾಗುತ್ತಿದ್ದಾರೆ.

3 / 9
ಏಕೆಂದರೆ ಏಳು ಪಂದ್ಯಗಳನ್ನು ಮುಗಿಸಿರುವ ಆರ್​ಸಿಬಿ ಬ್ಯಾಟಿಂಗ್ ಲೈನಪ್​ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಅವಲಂಭಿಸಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

4 / 9
ಈ 7 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 279 ರನ್​ ಕಲೆಹಾಕಿದರೆ, ಗ್ಲೆನ್ ಮ್ಯಾಕ್ಸ್​ವೆಲ್ 253 ರನ್​ಗಳಿಸಿದ್ದಾರೆ. ಹಾಗೆಯೇ ಫಾಫ್ ಡುಪ್ಲೆಸಿಸ್ 7 ಪಂದ್ಯಗಳಲ್ಲಿ 405 ರನ್​ ಬಾರಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್​ಮನ್ 7 ಪಂದ್ಯಗಳಿಂದ​ 70 ರನ್​ ಕೂಡ ಕಲೆಹಾಕಿಲ್ಲ ಎಂಬುದೇ ಅಚ್ಚರಿ.

5 / 9
ದಿನೇಶ್ ಕಾರ್ತಿಕ್ 7 ಪಂದ್ಯಗಳಿಂದ ಒಟ್ಟು 61 ರನ್​ಗಳಿಸಿದರೆ, ಶಹಬಾಝ್ ಅಹ್ಮದ್ 40 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಮಹಿಪಾಲ್ ಲೋಮ್ರರ್ 5 ಪಂದ್ಯಗಳಿಂದ 41 ರನ್​ ಕಲೆಹಾಕಿದರೆ, ಸುಯಶ್ ಪ್ರಭುದೇಸಾಯಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 19 ರನ್​ ಮಾತ್ರ. ಅಂದರೆ ಇಲ್ಲಿ ಆರ್​ಸಿಬಿ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಂದ ಯಾವುದೇ ಕೊಡುಗೆಯಿಲ್ಲ ಎಂಬುದೇ ಸತ್ಯ.

6 / 9
ಇನ್ನು ಬೌಲಿಂಗ್ ವಿಭಾಗದಲ್ಲೂ ಇದೇ ಕಥೆ. ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬೌಲರ್​ಗಳು ಪರಿಣಾಮಕಾರಿಯಾಗುತ್ತಿಲ್ಲ. 7 ಪಂದ್ಯಗಳಿಂದ ಸಿರಾಜ್ ಒಟ್ಟು 13 ವಿಕೆಟ್ ಪಡೆದಿರುವುದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ.

7 / 9
ಇನ್ನು ಹರ್ಷಲ್ ಪಟೇಲ್ 10 ವಿಕೆಟ್ ಕಬಳಿಸಿದರೂ ಪ್ರತಿ ಓವರ್​ನಲ್ಲಿ 9.77 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹಾಗೆಯೇ ಇನ್ನುಳಿದ ಯಾವುದೇ ಬೌಲರ್​ 5 ಕ್ಕಿಂತ ಹೆಚ್ಚಿನ ವಿಕೆಟ್ ಕೂಡ ಕಬಳಿಸಿಲ್ಲ ಎಂಬುದೇ ಅಚ್ಚರಿ.

8 / 9
ಅಂದರೆ ಇಲ್ಲಿ ಆರ್​ಸಿಬಿ ತಂಡದ ಗೆಲುವಿನಲ್ಲಿ ಬ್ಯಾಟಿಂಗ್ ಮೂಲಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅಮೂಲ್ಯ ಕೊಡುಗೆ ನೀಡುತ್ತಿದ್ದರೆ, ಬೌಲಿಂಗ್​ ಮೂಲಕ ಮೊಹಮ್ಮದ್ ಸಿರಾಜ್ ಮಿಂಚುತ್ತಿದ್ದಾರೆ. ಉಳಿದ 7 ಮಂದಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಪರಿಸ್ಥಿತಿ ತಲೆದೂರಿದೆ.

9 / 9
ಇದೇ ಪರಿಸ್ಥಿತಿ ಮುಂದುವರೆದರೆ ಆರ್​ಸಿಬಿ ಮುಂದಿನ ಹಂತಕ್ಕೇರುವುದು ಕೂಡ ಕಷ್ಟಸಾಧ್ಯ. ಏಕೆಂದರೆ ಈ ನಾಲ್ವರಲ್ಲಿ ಇಬ್ಬರು ಕೈ ಕೊಟ್ಟರೂ ಆರ್​ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕೆ ಉತ್ತಮ ಉದಾಹರಣೆ ಕೆಕೆಆರ್ ವಿರುದ್ಧದ ಹೀನಾಯ ಸೋಲು. ಹೀಗಾಗಿ ದ್ವಿತಿಯಾರ್ಧದ ಆರಂಭಕ್ಕೂ ಮುನ್ನ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಎಚ್ಚೆತ್ತುಕೊಳ್ಳುವುದು ಉತ್ತಮ.

Published On - 8:29 pm, Mon, 24 April 23