IPL 2023: 8 ವರ್ಷಗಳ ದೀರ್ಘ ಕಾಯುವಿಕೆಗೆ ಬ್ರೇಕ್ ಹಾಕುತ್ತಾ RCB
TV9 Web | Updated By: ಝಾಹಿರ್ ಯೂಸುಫ್
Updated on:
May 09, 2023 | 4:38 PM
IPL 2023 Kannada: ಮೂರನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಎಬಿಡಿ 215 ರನ್ಗಳ ದಾಖಲೆಯ ಜೊತೆಯಾಟವಾಡಿದ್ದರು. ಅಲ್ಲದೆ ಕಿಂಗ್ ಕೊಹ್ಲಿ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ 82 ರನ್ಗಳಿಸಿದರು.
1 / 8
IPL 2023 MI vs RCB: ಬರೋಬ್ಬರಿ 8 ವರ್ಷ...ಹೌದು, ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಸೋಲಿಸಿ ಬರೋಬ್ಬರಿ 8 ವರ್ಷಗಳೇ ಕಳೆದಿವೆ. ಅಂದರೆ ಕೊನೆಯ ಬಾರಿ ವಾಂಖೆಡೆ ಮೈದಾನದಲ್ಲಿ ಮುಂಬೈ ಪಡೆಗೆ ಆರ್ಸಿಬಿ ಸೋಲುಣಿಸಿದ್ದು 2015 ರಲ್ಲಿ.
2 / 8
ಮೇ 10, 2015 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಲ್ 13 ರನ್ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
3 / 8
ಮೂರನೇ ವಿಕೆಟ್ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಎಬಿಡಿ 215 ರನ್ಗಳ ದಾಖಲೆಯ ಜೊತೆಯಾಟವಾಡಿದ್ದರು. ಅಲ್ಲದೆ ಕಿಂಗ್ ಕೊಹ್ಲಿ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ 82 ರನ್ಗಳಿಸಿದರೆ, ಎಬಿ ಡಿವಿಲಿಯರ್ಸ್ 59 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್, 19 ಫೋರ್ನೊಂದಿಗೆ ಅಜೇಯ 133 ರನ್ ಸಿಡಿಸಿದ್ದರು. ಪರಿಣಾಮ ಆರ್ಸಿಬಿ ತಂಡದ ಮೊತ್ತ 1 ವಿಕೆಟ್ ನಷ್ಟಕ್ಕೆ 235 ಕ್ಕೆ ಬಂದು ನಿಂತಿತು.
4 / 8
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಲಿಂಡ್ಲ್ ಸಿಮನ್ಸ್ (68) ಅಜೇಯ ಅರ್ಧಶತಕ ಬಾರಿಸಿದರೆ, ಕೀರನ್ ಪೊಲಾರ್ಡ್ 24 ಎಸೆತಗಳಲ್ಲಿ 49 ರನ್ ಸಿಡಿಸಿದ್ದರು. ಇದಾಗ್ಯೂ ಅಂತಿಮ ಹಂತದಲ್ಲಿ ಆರ್ಸಿಬಿ ಬೌಲರ್ಗಳ ಉತ್ತಮ ದಾಳಿ ಪರಿಣಾಮ ಮುಂಬೈ ಇಂಡಿಯನ್ಸ್ ತಂಡವು 39 ರನ್ಗಳಿಂದ ಸೋಲೊಪ್ಪಿಕೊಂಡಿತು.
5 / 8
ಈ ಭರ್ಜರಿ ಗೆಲುವಿನ ಬಳಿಕ ಆರ್ಸಿಬಿ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿಲ್ಲ. ಇದೀಗ 8 ಮತ್ತೊಮ್ಮೆ ಉಭಯ ತಂಡಗಳು ಇದೇ ಮೈದಾನದಲ್ಲಿ ಮುಖಾಮುಖಿಯಾಗುತ್ತಿದೆ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ 8 ವರ್ಷಗಳ ದೀರ್ಘಕಾಯುವಿಕೆಗೆ ವಿರಾಮ ಹಾಕುವ ವಿಶ್ವಾಸದಲ್ಲಿದೆ ಆರ್ಸಿಬಿ.
6 / 8
ಅಂದಹಾಗೆ ವಾಂಖೆಡೆ ಮೈದಾನದಲ್ಲಿ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು 9 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಆರ್ಸಿಬಿ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಅಂದರೆ 6 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಜಯ ಸಾಧಿಸಿ ಮೇಲುಗೈ ಹೊಂದಿದೆ. ಇದಾಗ್ಯೂ ಸ್ಟಾರ್ ಆಟಗಾರರನ್ನು ಹೊಂದಿರುವ ಆರ್ಸಿಬಿ ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
7 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಹರ್ಷಲ್ ಪಟೇಲ್ , ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್, ಮೈಕೆಲ್ ಬ್ರೇಸ್ವೆಲ್, ವೈಶಾಕ್ ವಿಜಯಕುಮಾರ್, ಫಿನ್ ಅಲೆನ್, ಸೋನು ಯಾದವ್, ಮನೋಜ್ ಭಾಂಡಗೆ, ಶಹಬಾಝ್ ಅಹ್ಮದ್, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ.
8 / 8
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಕ್ಯಾಮೆರೋನ್ ಗ್ರೀನ್ , ತಿಲಕ್ ವರ್ಮಾ , ಟಿಮ್ ಡೇವಿಡ್ , ನೆಹಾಲ್ ವಧೇರಾ , ಜೋಫ್ರಾ ಆರ್ಚರ್ , ಪಿಯೂಷ್ ಚಾವ್ಲಾ , ಕುಮಾರ್ ಕಾರ್ತಿಕೇಯ , ಆಕಾಶ್ ಮಧ್ವಲ್ , ಅರ್ಷದ್ ಖಾನ್, ಸೂರ್ಯಕುಮಾರ್ ಯಾದವ್ , ಟ್ರಿಸ್ಟಾನ್ ಸ್ಟಬ್ಸ್ , ಡೆವಾಲ್ಡ್ ಬ್ರೆವಿಸ್ , ವಿಷ್ಣು ವಿನೋದ್ , ರಮಣದೀಪ್ ಸಿಂಗ್ , ಅರ್ಜುನ್ ತೆಂಡೂಲ್ಕರ್ , ಶಮ್ಸ್ ಮುಲಾನಿ , ಕ್ರಿಸ್ ಜೋರ್ಡಾನ್ , ಜೇಸನ್ ಬೆಹ್ರೆಂಡಾರ್ಫ್ , ಸಂದೀಪ್ ವಾರಿಯರ್ , ಹೃತಿಕ್ ಶೋಕೀನ್ , ಡುವಾನ್ ಜಾನ್ಸೆನ್ , ರಾಘವ್ ಗೋಯಲ್ , ರಿಲೆ ಮೆರೆಡಿತ್
Published On - 3:57 pm, Tue, 9 May 23