IPL 2023 RCB vs GT: ಮಳೆ ಬಂದರೂ ಪಂದ್ಯ ನಡೆಯುವುದು ಬಹುತೇಕ ಖಚಿತ
TV9 Web | Updated By: ಝಾಹಿರ್ ಯೂಸುಫ್
Updated on:
May 21, 2023 | 3:57 PM
IPL 2023 Kannada: ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್ಸಿಬಿ ತಂಡವು 16 ಪಾಯಿಂಟ್ಸ್ಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಆದರೀಗ ನಿರ್ಣಾಯಕ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ.
1 / 8
IPL 2023 RCB vs GT: ಐಪಿಎಲ್ನ 70ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ.
2 / 8
ಏಕೆಂದರೆ ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್ಸಿಬಿ ತಂಡವು 16 ಪಾಯಿಂಟ್ಸ್ಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಆದರೀಗ ನಿರ್ಣಾಯಕ ಪಂದ್ಯಕ್ಕೆ ವರುಣನ ಭೀತಿ ಎದುರಾಗಿದೆ.
3 / 8
ಏಕೆಂದರೆ ಇಂದು ಸಂಜೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. accuweather ವರದಿ ಪ್ರಕಾರ, ರಾತ್ರಿ 7 ಗಂಟೆಯಿಂದ ಮಳೆ ಶುರುವಾಗಲಿದ್ದು, ಶೇ.65 ರಷ್ಟು ಪಂದ್ಯದ ವೇಳೆ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
4 / 8
ಇನ್ನು ಸ್ಪೋರ್ಟ್ಸ್ಸ್ಟಾರ್ ವರದಿ ಪ್ರಕಾರ, ಸಂಜೆ 7 ಗಂಟೆಗೆ ಶೇ.65 ರಷ್ಟು ಮಳೆಯಾಗಲಿದ್ದು, ಇದಾದ ಬಳಿಕ ಕೂಡ ಮಳೆ ಮುಂದುವರೆಯಲಿದೆ. ಅಲ್ಲದೆ ರಾತ್ರಿ 10 ಗಂಟೆಯವರೆಗೂ ಸತತ ಮಳೆಯಾಗಲಿದೆ ಎಂದು ವರದಿ ಮಾಡಿದೆ.
5 / 8
ಆದರೆ ಇತ್ತ ಮಳೆ ಬಂದರೂ ಪಂದ್ಯವನ್ನು ಆಯೋಜಿಸಲು ಬೇಕಿರುವ ಅತ್ಯಾಧುನಿಕ ತಂತ್ರಜ್ಞಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ. ಹೀಗಾಗಿ ಮಳೆ ಬಂದು ಬಿಡುವು ಸಿಕ್ಕರೆ ಪಂದ್ಯವನ್ನು ಆಯೋಜಿಸುವುದು ಖಚಿತ ಎಂದೇ ಹೇಳಬಹುದು.
6 / 8
ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು.
7 / 8
ಸತತವಾಗಿ 1 ಗಂಟೆ ಮಳೆಯಾದರೆ ಮೈದಾನದ ಒಳಗಿರುವ ಸಬ್ ಏರ್ ಸಿಸ್ಟಂ ಮೂಲಕ 10 ರಿಂದ 15 ನಿಮಿಷದೊಳಗೆ ಗ್ರೌಂಡ್ ಅನ್ನು ಸಿದ್ಧಗೊಳಿಸಬಹುದು. ಅಲ್ಲದೆ ಸಬ್ ಏರ್ ಸಿಸ್ಟಂ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಶೀಘ್ರದಲ್ಲೇ ಒಣಗಿಸುವ ವ್ಯವಸ್ಥೆ ಕೂಡ ಇದೆ.
8 / 8
ಹಾಗಾಗಿ ಸತತ ಮಳೆ ಬಂದರೂ ಪಂದ್ಯ ನಡೆಸಲು ಕೆಲವು ಗಂಟೆಗಳು ಲಭ್ಯವಾದರೂ ಓವರ್ ಕಡಿತಗಳೊಂದಿಗೆ ಆರ್ಸಿಬಿ-ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವು ನಡೆಯಲಿದೆ. ಹೀಗಾಗಿ ಇಂದು ಬೆಂಗಳೂರಿನಾದ್ಯಂತ ಮಳೆಯಾದರೂ RCB vs GT ಪಂದ್ಯ ನಡೆಯುವುದು ಬಹುತೇಕ ಖಚಿತ ಎನ್ನಬಹುದು.
Published On - 3:57 pm, Sun, 21 May 23