IPL 2023: ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಕಾಣಿಸಿಕೊಂಡ ರಿಷಭ್ ಪಂತ್

| Updated By: ಝಾಹಿರ್ ಯೂಸುಫ್

Updated on: Apr 04, 2023 | 11:58 PM

IPL 2023 Kannada: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕರಾಗಿರುವ ರಿಷಭ್ ಪಂತ್ ಐಪಿಎಲ್‌ನಲ್ಲಿ 98 ಪಂದ್ಯಗಳಿಂದ ಒಟ್ಟು 2838 ರನ್ ಗಳಿಸಿದ್ದಾರೆ.

1 / 7
IPL 2023: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯದ ವೇಳೆ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್​ನಲ್ಲಿ ನಡೆದ ಕಾರು ಅಪಘಾತದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿರದ ಪಂತ್, ತಮ್ಮ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಬೆಂಬಲಿಸಲು ಸ್ಟೇಡಿಯಂಗೆ ಆಗಮಿಸಿದ್ದರು.

2 / 7
ಗಾಯದಿಂದ ರಿಷಭ್ ಪಂತ್ ಬಹುತೇಕ ಚೇತರಿಸಿಕೊಂಡಿದ್ದು, ಇದಾಗ್ಯೂ ನಡೆಯಲು ಊರುಗೋಲಿನ ಅವಲಂಭಿಸುತ್ತಿದ್ದಾರೆ. ಕ್ರೀಡಾಂಗಣಕ್ಕೂ ಊರುಗೋಲಿನ ಸಹಾಯದೊಂದಿಗೆ ಆಗಮಿಸಿದ್ದ ಪಂತ್​ ಅವರನ್ನು ಅಭಿಮಾನಿಗಳು ಹರ್ಷೋದ್ಘಾರದೊಂದಿಗೆ ಸ್ವಾಗತಿಸಿದರು.

3 / 7
ಇದೇ ವೇಳೆ ಅಭಿಮಾನಿಗಳತ್ತ ರಿಷಭ್ ಪಂತ್ ಕೈ ಬೀಸಿ ಸಂತಸ ವ್ಯಕ್ತಪಡಿಸಿದರು. ಇನ್ನು ಪಂತ್ ಅವರೊಂದಿಗೆ ಸ್ಟೇಡಿಯಂನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಕಾಣಿಕೊಂಡಿದ್ದರು.

4 / 7
ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಡಗೌಟ್​ನಲ್ಲಿ ರಿಷಭ್ ಪಂತ್ ಅವರ ಜೆರ್ಸಿ ಪ್ರದರ್ಶಿಸಿತ್ತು. ಇದೀಗ ಖುದ್ದು ಪಂತ್ ಅವರೇ ಸ್ಟೇಡಿಯಂಗೆ ಆಗಮಿಸಿರುವುದು ನೋಡಿ ಅಭಿಮಾನಿಗಳು ಕೂಡ ಭಾವುಕರಾದರು.

5 / 7
ಕಳೆದ ವರ್ಷ ನಡೆದ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಡಿಸೆಂಬರ್ 30 ರಂದು ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್ಕಿಯಲ್ಲಿರುವ ತನ್ನ ಮನೆಗೆ ತೆರಳುವಾಗ ಭೀಕರ ಅಪಘಾತ ಸಂಭವಿಸಿತ್ತು. ಬಳಿಕ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.

6 / 7
ಕೆಲ ದಿನಗಳ ಚಿಕಿತ್ಸೆಯ ಬಳಿಕ ಪಂತ್ ಅವರನ್ನು ಡೆಹ್ರಾಡೂನ್​ನಿಂದ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ರಿಷಭ್ ಪಂತ್ ಮನೆಯಲ್ಲಿಯೇ ಶುಶ್ರೂಷೆ ಮುಂದುವರೆಸಿದ್ದಾರೆ. ಇದರ ನಡುವೆ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿರುವುದು ವಿಶೇಷ.

7 / 7
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕರಾಗಿರುವ ರಿಷಭ್ ಪಂತ್  ಐಪಿಎಲ್‌ನಲ್ಲಿ 98 ಪಂದ್ಯಗಳಿಂದ ಒಟ್ಟು 2838 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 15 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಸದ್ಯ ಶುಶ್ರೂಷೆಯಲ್ಲಿರುವ ಪಂತ್ ಅವರು ಮತ್ತೆ ಮೈದಾನಕ್ಕಿಳಿಯಲು ಕೆಲ ತಿಂಗಳನ್ನು ತೆಗೆದುಕೊಳ್ಳಬಹುದು.