- Kannada News Photo gallery Cricket photos Kyle Mayers looks like new Chris Gayle in IPL Says Suresh Raina
IPL 2023: ಭರ್ಜರಿ ದಾಖಲೆ ನಿರ್ಮಾಣ: ಐಪಿಎಲ್ ಅಂಗಳದಲ್ಲಿ ಹೊಸ ಕ್ರಿಸ್ ಗೇಲ್
IPL 2023 Kannada: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದರ್ಪಣೆ ಮಾಡಿದ್ದ ಕೈಲ್ ಮೇಯರ್ಸ್, ಮೊದಲ ಪಂದ್ಯದಲ್ಲೇ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 73 ರನ್ ಸಿಡಿಸಿದ್ದರು.
Updated on: Apr 04, 2023 | 11:09 PM

IPL 2023: ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಅವರ ಆಟ ನೋಡುತ್ತಿದ್ದರೆ ಕ್ರಿಸ್ ಗೇಲ್ ನೆನಪಾಗುತ್ತಾರೆ. ಹೀಗೆ ಅಂದಿದ್ದು ಮತ್ಯಾರೂ ಅಲ್ಲ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ.

ಹೌದು, ಇದೇ ಮೊದಲ ಬಾರಿಗೆ ಐಪಿಎಲ್ ಅಂಗಳಕ್ಕೆ ಕಾಲಿಟ್ಟಿರುವ ಕೈಲ್ ಮೇಯರ್ಸ್ ಅಬ್ಬರ ನೋಡುತ್ತಿದ್ದರೆ ಕ್ರಿಸ್ ಗೇಲ್ ಒಮ್ಮೆ ಕಣ್ಮುಂದೆ ಬರುತ್ತಾರೆ. ಏಕೆಂದರೆ ಮೇಯರ್ಸ್ ಅಬ್ಬರ ಮೊದಲ ಓವರ್ನಿಂದಲೇ ಶುರುವಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಮೊದಲೆರಡು ಪಂದ್ಯಗಳು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಪಾದರ್ಪಣೆ ಮಾಡಿದ್ದ ಕೈಲ್ ಮೇಯರ್ಸ್, ಮೊದಲ ಪಂದ್ಯದಲ್ಲೇ 38 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 73 ರನ್ ಸಿಡಿಸಿದ್ದರು.

ಇದರೊಂದಿಗೆ 2008 ರ ಬಳಿಕ ಐಪಿಎಲ್ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಕೈಲ್ ಮೇಯರ್ಸ್ ಪಾಲಾಗಿತ್ತು. ಇದೀಗ ಸಿಎಸ್ಕೆ ವಿರುದ್ಧದ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ದಾಂಡಿಗ ಮತ್ತೊಮ್ಮೆ ಅಬ್ಬರಿಸಿದ್ದಾರೆ.

ಸಿಎಸ್ಕೆ ವಿರುದ್ಧ 22 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 53 ರನ್ ಬಾರಿಸಿದ್ದಾರೆ. ಇದರೊಂದಿಗೆ ಚೊಚ್ಚಲ ಐಪಿಎಲ್ನ ಮೊದಲೆರಡು ಇನಿಂಗ್ಸ್ಗಳಲ್ಲಿ ಅರ್ಧಶತಕ ಬಾರಿಸಿದ ವಿಶೇಷ ದಾಖಲೆಯೊಂದು ಕೈಲ್ ಮೇಯರ್ಸ್ ಪಾಲಾಗಿದೆ.

ಇನ್ನು ಕೈಲ್ ಮೇಯರ್ಸ್ ಅಬ್ಬರನ್ನು ಕ್ರಿಸ್ ಗೇಲ್ಗೆ ಹೋಲಿಸಲು ಮತ್ತೊಂದು ಕಾರಣ, ಎರಡೂ ಪಂದ್ಯಗಳಲ್ಲೂ 200 ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವುದು. ಇನ್ನು ನಿರ್ಭಯವಾಗಿ ಬ್ಯಾಟ್ ಬೀಸುತ್ತಿರುವ ಮೇಯರ್ಸ್ ಮುಂಬರುವ ದಿನಗಳಲ್ಲಿ ಐಪಿಎಲ್ನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರೂ ಅಚ್ಚರಿಪಡಬೇಕಿಲ್ಲ.
