IPL 2023: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 2 ಮಹತ್ವದ ದಾಖಲೆ ಬರೆದ ರೋಹಿತ್ ಶರ್ಮಾ..!

|

Updated on: May 22, 2023 | 3:00 PM

IPL 2023: ತನ್ನ ಅರ್ಧಶತಕದ ಇನ್ನಿಂಗ್ಸ್​ನೊಂದಿಗೆ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ ರೋಹಿತ್‌ ಈ ಪಂದ್ಯದಲ್ಲಿ ವೈಯಕ್ತಿಕವಾಗಿ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದರು.

1 / 6
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಎಂಟು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ ಪ್ಲೇಆಫ್ ಸುತ್ತಿಗೂ ಎಂಟ್ರಿಕೊಟ್ಟಿತು.

2 / 6
ಸನ್‌ರೈಸರ್ಸ್ ಹೈದರಾಬಾದ್ ನೀಡಿದ 201 ರನ್‌ಗಳನ್ನು ಬೆನ್ನಟ್ಟಿದ ಮುಂಬೈ ಕೇವಲ 18 ಓವರ್‌ಗಳಲ್ಲಿಯೇ ಆರಾಮವಾಗಿ ಗುರಿ ತಲುಪಿತು. ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ ನಾಯಕ ರೋಹಿತ್ ಶರ್ಮಾ ಕೂಡ 27 ಎಸೆತಗಳಲ್ಲಿ ಅವಶ್ಯಕ 56 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಭಾರಿ ಕೊಡುಗೆ ನೀಡಿದರು.

3 / 6
ತನ್ನ ಅರ್ಧಶತಕದ ಇನ್ನಿಂಗ್ಸ್​ನೊಂದಿಗೆ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ ರೋಹಿತ್‌ ಈ ಪಂದ್ಯದಲ್ಲಿ ವೈಯಕ್ತಿಕವಾಗಿ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದರು.

4 / 6
ಎಸ್​​ಆರ್​ಹೆಚ್ ವಿರುದ್ಧ ಅರ್ಧಶತಕ ಬಾರಿಸಿದ ರೋಹಿತ್ ಟಿ20 ಮಾದರಿಯಲ್ಲಿ 11,000 ರನ್ ಪೂರೈಸಿ ಈ ಅಪರೂಪದ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.

5 / 6
ಇನ್ನು ಟಿ20 ಮಾದರಿಯಲ್ಲಿ 11864 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

6 / 6
ಇದಲ್ಲದೆ ಮುಂಬೈ ಇಂಡಿಯನ್ಸ್‌ ಪರ 5021 ರನ್‌ಗಳನ್ನು ಪೂರ್ಣಗೊಳಿಸಿದ ರೋಹಿತ್ ಒಂದು ಫ್ರಾಂಚೈಸಿಗಾಗಿ 5000 ಪ್ಲಸ್ ರನ್‌ಗಳನ್ನು ಪೂರ್ಣಗೊಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಇವರನ್ನು ಬಿಟ್ಟರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿ ಮಾತ್ರ 7162 ರನ್ ಬಾರಿಸಿದ್ದಾರೆ.