Updated on: Apr 19, 2023 | 2:59 PM
IPL 2023: ಹೈದರಾಬಾದ್ನಲ್ಲಿ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ 28 ರನ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ದ 14 ರನ್ ಕಲೆಹಾಕುವುದರೊಂದಿಗೆ ರೋಹಿತ್ ಶರ್ಮಾ ಐಪಿಎಲ್ನಲ್ಲಿ 6 ಸಾವಿರ ರನ್ ಪೂರೈಸಿದರು. ಈ ಮೂಲಕ ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್ ಬಳಿಕ ಐಪಿಎಲ್ನಲ್ಲಿ 6000 ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಐಪಿಎಲ್ ರನ್ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ 220 ಇನಿಂಗ್ಸ್ ಮೂಲಕ ಒಟ್ಟು 6844 ರನ್ ಕಲೆಹಾಕಿದ್ದಾರೆ.
ಇನ್ನು ದ್ವಿತೀಯ ಸ್ಥಾನದಲ್ಲಿ ಶಿಖರ್ ಧವನ್ ಇದ್ದು, ಧವನ್ 209 ಇನಿಂಗ್ಸ್ಗಳ ಮೂಲಕ ಒಟ್ಟು 6477 ರನ್ಗಳಿಸಿದ್ದಾರೆ.
ಹಾಗೆಯೇ ಮೂರನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದಾರೆ. ಕೇವಲ 167 ಇನಿಂಗ್ಸ್ಗಳ ಮೂಲಕ ವಾರ್ನರ್ 6109 ರನ್ ಪೇರಿಸಿದ್ದಾರೆ.
ಇದೀಗ 6 ಸಾವಿರ ರನ್ ಸರದಾರರ ಪಟ್ಟಿಗೆ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದಾರೆ. 227 ಇನಿಂಗ್ಸ್ಗಳ ಮೂಲಕ ಹಿಟ್ಮ್ಯಾನ್ ಒಟ್ಟು 6014 ರನ್ ಕಲೆಹಾಕಿದ್ದಾರೆ.
ಇನ್ನು 6 ಸಾವಿರ ರನ್ ಪೂರೈಸಲು ಅತೀ ಕಡಿಮೆ ಎಸೆತಗಳನ್ನು ಎದುರಿಸಿರುವುದು ಡೇವಿಡ್ ವಾರ್ನರ್. ವಾರ್ನರ್ ಕೇವಲ 4285 ಎಸೆತಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಕಿಂಗ್ ಕೊಹ್ಲಿ 4595 ಎಸೆತಗಳಲ್ಲಿ 6 ಸಾವಿರ ರನ್ ಕಲೆಹಾಕಿದ್ದರು.
ಹಾಗೆಯೇ 4616 ಎಸೆತಗಳಲ್ಲಿ 6 ಸಾವಿರ ರನ್ ಪೂರೈಸಿರುವ ರೋಹಿತ್ ಶರ್ಮಾ ಇದೀಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಶಿಖರ್ ಧವನ್. ಶಿಖರ್ 4738 ಎಸೆತಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.
Published On - 2:59 pm, Wed, 19 April 23