IPL 2023: ರೋಹಿತ್ ಆಟಕ್ಕೆ ನಂ.1 ಪಟ್ಟ ಕಳೆದುಕೊಂಡ ಧವನ್; ಕುಸಿದ ಕಿಂಗ್ ಕೊಹ್ಲಿ
Rohit Sharma: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 20 ರನ್ ಬಾರಿಸಿದರು. ಇದರೊಂದಿಗೆ ವಿಶೇಷ ದಾಖಲೆ ಕೂಡ ಬರೆದರು.
1 / 6
ಐಪಿಎಲ್ನ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿದೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 20 ರನ್ ಬಾರಿಸಿದರು. ಇದರೊಂದಿಗೆ ವಿಶೇಷ ದಾಖಲೆ ಕೂಡ ಬರೆದರು.
2 / 6
ಕೆಕೆಆರ್ ವಿರುದ್ಧ 20 ರನ್ ಕಲೆಹಾಕಿದ ರೋಹಿತ್ ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಹಿಟ್ಮ್ಯಾನ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 1033 ರನ್ ಬಾರಿಸಿದ್ದು, ಇದು ದಾಖಲೆಯಾಗಿದೆ.
3 / 6
ಕೆಕೆಆರ್ ವಿರುದ್ಧ ರೋಹಿತ್ ಶರ್ಮಾ ನಾಲ್ಕು ಶತಕಗಳನ್ನು ಬಾರಿಸಿದ್ದು, 51.65 ಸರಾಸರಿ ಮತ್ತು 133.59 ಸ್ಟ್ರೈಕ್ ರೇಟ್ನಲ್ಲಿ 1033 ರನ್ ಕಲೆಹಾಕಿದ್ದಾರೆ.
4 / 6
ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1029 ರನ್ ಬಾರಿಸಿದ್ದ ಶಿಖರ್ ಧವನ್ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಹಾಗಿದ್ದರೆ ಈ ಇಬ್ಬರ ಬಳಿಕ ಈ ದಾಖಲೆ ಬರೆದಿರುವ ಇಬ್ಬರು ಆಟಗಾರರತ್ತ ಗಮನಹರಿಸುವುದಾದರೆ.
5 / 6
ಸದ್ಯ ಡೆಲ್ಲಿ ತಂಡದ ನಾಯಕತ್ವವಹಿಸಿಕೊಂಡಿರುವ ಡೇವಿಡ್ ವಾರ್ನರ್, ಕೆಕೆಆರ್ ವಿರುದ್ಧ 1018 ರನ್ ಗಳಿಸಿದ್ದು, ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ವಿರುದ್ಧ 1005 ಬಾರಿಸಿ, 4ನೇ ಸ್ಥಾನವನ್ನು ಅವರೇ ಉಳಿಸಿಕೊಂಡಿದ್ದಾರೆ.
6 / 6
ಇನ್ನು ಐದನೇ ಸ್ಥಾನದಲ್ಲಿ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದು, ಕಿಂಗ್ ಕೊಹ್ಲಿ ಚೆನ್ನೈ ವಿರುದ್ಧ 979 ರನ್ ಕಲೆ ಹಾಕಿದ್ದಾರೆ.