Updated on: May 22, 2023 | 3:44 PM
ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ಗಳಿಂದ ಹೀನಾಯವಾಗಿ ಮಣಿಸಿದ ಮುಂಬೈ ಇಂಡಿಯನ್ಸ್ ತಂಡ ಇತ್ತ ಆರ್ಸಿಬಿ ಸೋಲಿನ ಲಾಭ ಪಡೆದು ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಈ ಆವೃತ್ತಿಯಲ್ಲಿ ಮುಂಬೈ ಪ್ಲೇ ಆಫ್ಗೆ ಏರಬೇಕಿದ್ದರೆ, ಗುಜರಾತ್ ವಿರುದ್ಧ ಆರ್ಸಿಬಿ ಸೋಲಲೇಬೇಕಿತ್ತು. ಮುಂಬೈ ನಿರೀಕ್ಷೆಯಂತೆ ಆರ್ಸಿಬಿ ಸೋಲು ಮುಂಬೈಗೆ ಪ್ಲೇ ಆಫ್ ಟಿಕೆಟ್ ಅನ್ನು ಖಚಿತಪಡಿಸಿದೆ.
ಮುಂಬೈ ಪರ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರೆ, ನಾಯಕ ರೋಹಿತ್ ಕೂಡ ಅರ್ಧಶತಕದ ಪ್ರಮುಖ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ಮೂಲಕ ಸುಲಭವಾಗಿ ರನ್ ಬೆನ್ನಟ್ಟಿದ ಮುಂಬೈ ಪ್ಲೇ ಆಫ್ಗೇರಲು ಆರ್ಸಿಬಿ ಹಾಗೂ ಜಿಟಿ ನಡುವಿನ ಕದನದ ಪಲಿತಾಂಶದ ಮೇಲೆ ಅವಲಂಭಿತವಾಗಿತ್ತು.
ಈ ಇಬ್ಬರ ನಡುವಿನ ಕಾಳಗದಲ್ಲಿ ಆರ್ಸಿಬಿ ಗೆದ್ದಿದ್ದರೆ ಮುಂಬೈ ಪ್ಲೇ ಆಫ್ನಿಂದ ಹೊರಬೀಳುತ್ತಿತ್ತು. ಹೀಗಾಗಿ ಆರ್ಸಿಬಿ ಸೋಲಿಗಾಗಿ ಹಾತೋರೆಯುತ್ತಿದೆ ಮುಂಬೈಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿತು. ಆರ್ಸಿಬಿ ನೀಡಿದ 197 ರನ್ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಮುಂಬೈಗೆ ಪ್ಲೇ ಆಫ್ ಗಿಫ್ಟ್ ನೀಡಿತು.
ಮುಂಬೈಗೆ ಈ ಗೆಲುವಿನ ಉಡುಗೊರೆಯಲ್ಲಿ ಗುಜರಾತ್ನ ಶುಭ್ಮನ್ ಗಿಲ್ ಪಾತ್ರ ಆಗಾದವಾಗಿತ್ತು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಗಿಲ್, ಆರ್ಸಿಬಿಯ ಪ್ಲೇ ಆಫ್ ಕನಸಿಗೆ ನೀರೇರಚಿದರು. ಗಿಲ್ ಗುಜರಾತ್ ಪರ ಶತಕ ಸಿಡಿಸಿದರಾದರೂ ಲಾಭವಾಗುದ್ದು ಮಾತ್ರ ಮುಂಬೈಗೆ. ಹೀಗಾಗಿ ಗಿಲ್ ಸಹಾಯವನ್ನು ಮರೆಯದ ಸಚಿನ್ ತೆಂಡೂಲ್ಕರ್ ಗಿಲ್ ಆಟವನ್ನು ಹಾಡಿ ಹೊಗಳಿದ್ದಾರೆ.
ಗಿಲ್ ಆಟದ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಶುಭ್ಮನ್ ಗಿಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಪರ ಉತ್ತಮವಾಗಿನ ಆಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಕ್ರಿಕೆಟ್ ದೇವರ ಈ ರೀತಿಯ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದು, ಸಚಿನ್ ಅವರ ಈ ರೀತಿಯ ಕಾಮೆಂಟ್ಗೆ ಕ್ರಿಕೆಟ್ ಅಭಿಮಾನಿಗಳು ಬೇರೆ ಬೇರೆಯದ್ದೇ ಬಣ್ಣ ಕಟ್ಟುತ್ತಿದ್ದಾರೆ.