- Kannada News Photo gallery Cricket photos Kannada News - IPL 2023: Ravindra Jadeja mystery deepens amid MS Dhoni Spat
IPL 2023: CSK ತಂಡದಲ್ಲಿ ಎಲ್ಲವೂ ಸರಿಯಿಲ್ಲ? ಕರ್ಮ ನಿಮ್ಮನ್ನ ಬಿಡಲ್ಲ ಎಂದ ಜಡೇಜಾ
IPL 2023 Kannada: ಸಿಎಸ್ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರಲಾರಂಭಿಸಿದೆ. ಏಕೆಂದರೆ ಈ ಹಿಂದೆ ಕೂಡ ಜಡೇಜಾ ಸಿಎಸ್ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು.
Updated on: May 22, 2023 | 8:28 PM

IPL 2023: ಐಪಿಎಲ್ ಸೀಸನ್ 16 ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಕಾರಣ ಸಿಎಸ್ಕೆ ಆಟಗಾರ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್.

ಖಂಡಿತವಾಗಿಯೂ...ಕರ್ಮವು ನಿಮ್ಮ ಬಳಿಗೆ ಬಂದೇ ಬರುತ್ತದೆ. ಅದು ಬೇಗನೆ ಬರಬಹುದು ಅಥವಾ ತಡವಾಗಬಹುದು. ಆದರೆ ಅದು ಖಂಡಿತವಾಗಿಯೂ ಬಂದೇ ಬರುತ್ತದೆ ಎಂಬ ಪೋಸ್ಟ್ ಅನ್ನು ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಚ್ಚರಿ ಎಂದರೆ ಈ ಪೋಸ್ಟ್ ಅನ್ನು ಶೇರ್ ಮಾಡಿರುವ ಜಡೇಜಾ ಅವರ ಪತ್ನಿ ರಿವಾಬಾ..ನಿಮ್ಮ ಸ್ವಂತ ಹಾದಿಯನ್ನು ಅನುಸರಿಸಿ ಎಂದು ಬರೆದುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಜಡೇಜಾ ಅವರ ಈ ಕುತೂಹಲಕಾರಿ ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ.

ಏಕೆಂದರೆ ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ನಡುವೆ ವಾಕ್ಸಮರ ನಡೆದಿತ್ತು. ಎಲ್ಲಾ ಆಟಗಾರರು ಪ್ಲೇಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದರೆ ಇತ್ತ ಧೋನಿ ಜಡೇಜಾಗೆ ಕ್ಲಾಸ್ ತೆಗೆದುಕೊಂಡಿದ್ದರು.

ಅಲ್ಲದೆ ಸಿಎಸ್ಕೆ ನಾಯಕನ ಮಾತುಗಳನ್ನು ಆಲಿಸುತ್ತಿದ್ದ ಜಡೇಜಾ ಅವರ ಮುಖದಲ್ಲಿ ಯಾವುದೇ ನಗು ಇರಲಿಲ್ಲ. ಅಲ್ಲದೆ ನಿರಾಶಭಾವದೊಂದಿಗೆ ಅವರು ಡಗೌಟ್ಗೆ ತೆರಳಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಜಡೇಜಾ ಕರ್ಮ ರಿಟರ್ನ್ಸ್ ಪೋಸ್ಟ್ ಹಾಕಿದ್ದಾರೆ.

ಇದರ ಬೆನ್ನಲ್ಲೇ ಸಿಎಸ್ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರಲಾರಂಭಿಸಿದೆ. ಏಕೆಂದರೆ ಈ ಹಿಂದೆ ಕೂಡ ಜಡೇಜಾ ಸಿಎಸ್ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿ ನಾಯಕತ್ವ ನೀಡಿ ಕೆಲ ಪಂದ್ಯಗಳ ಬಳಿಕ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿದ್ದು.

ಇದಾದ ಬಳಿಕ ಜಡೇಜಾ ಸಿಎಸ್ಕೆ ಪರ ಆಡುವುದಿಲ್ಲ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಅಂತಿಮವಾಗಿ ಸಿಎಸ್ಕೆ ಫ್ರಾಂಚೈಸಿಯು ಸ್ಟಾರ್ ಆಲ್ರೌಂಡರ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಧೋನಿ ಜೊತೆಗಿನ ಜಗಳದ ಬೆನ್ನಲ್ಲೇ ರವೀಂದ್ರ ಜಡೇಜಾ ಹಾಕಿರುವ ಕರ್ಮ ರಿಟರ್ನ್ಸ್ ಪೋಸ್ಟ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.









