Updated on: Feb 25, 2023 | 11:58 PM
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿದೆ. ಮಾರ್ಚ್ 12 ರಿಂದ ಆರಂಭವಾಗಲಿರುವ ವರ್ಣರಂಜಿತ ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಬಲ್ಲ ಐವರು ಆಟಗಾರರನ್ನು ಹೆಸರಿಸಿದ್ದಾರೆ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ.
ಸಂವಾದ ಕಾರ್ಯಕ್ರಮವೊಂದರಲ್ಲಿ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿರುವ ಸೌರವ್ ಗಂಗೂಲಿ, ಮುಂಬರುವ ಐಪಿಎಲ್ಗಳಲ್ಲಿ ಎಲ್ಲರ ಗಮನ ಸೆಳೆಯಲಿರುವ ಆಟಗಾರರನ್ನು ಹೆಸರಿಸಿದರು. ಈ ಬಗ್ಗೆ ಮಾತನಾಡಿದ ದಾದಾ, ಸೂರ್ಯಕುಮಾರ್ ಯಾದವ್ ಬಗ್ಗೆ ಸಂಶಯವೇ ಬೇಡ. ಆತ ಅಬ್ಬರಿಸಲಿದ್ದಾನೆ. ಆದರೆ ಆತನನ್ನು ಯುವ ಆಟಗಾರರ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಅವರನ್ನು ಟಾಪ್-5 ಯಿಂದ ಕೈಬಿಡಲಾಗಿದೆ ಎಂದರು.
ಬದಲಾಗಿ ನನ್ನ ಪ್ರಕಾರ ಈ ಐವರು ಆಟಗಾರರು ಐಪಿಎಲ್‌ನಲ್ಲಿ ಸಂಚಲನ ಸೃಷ್ಟಿಸಲಿದ್ದಾರೆ ಎಂದು ಗಂಗೂಲಿ ಹೇಳಿದರು. ಆ ಆಟಗಾರರು ಯಾರೆಂದರೆ....
ಪೃಥ್ವಿ ಶಾ (ಡೆಲ್ಲಿ ಕ್ಯಾಪಿಟಲ್ಸ್); ಡೆಲ್ಲಿ ತಂಡದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಏಕೆಂದರೆ ಆತನಿಗೆ ಈಗ ಕೇವಲ 23 ವರ್ಷ ಅಷ್ಟೇ. ಹೀಗಾಗಿ ಪೃಥ್ವಿ ಭವಿಷ್ಯದಲ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ಗಂಗೂಲಿ ತಿಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕರಾಗಿರುವ ರಿಷಭ್ ಪಂತ್ ಐಪಿಎಲ್‌ನಲ್ಲಿ 98 ಪಂದ್ಯಗಳಿಂದ ಒಟ್ಟು 2838 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 15 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಸದ್ಯ ಶುಶ್ರೂಷೆಯಲ್ಲಿರುವ ಪಂತ್ ಅವರು ಮತ್ತೆ ಮೈದಾನಕ್ಕಿಳಿಯಲು ಕೆಲ ತಿಂಗಳನ್ನು ತೆಗೆದುಕೊಳ್ಳಬಹುದು.
ಶುಭ್ಮನ್ ಗಿಲ್ (ಗುಜರಾತ್ ಟೈಟಾನ್ಸ್) ಗುಜರಾತ್ ತಂಡದ ಆರಂಭಿಕ ಆಟಗಾರನಾಗಿ ಶುಭ್ಮನ್ ಗಿಲ್ ಕೂಡ 23 ವರ್ಷದ ಆಟಗಾರ. ಈಗಾಗಲೇ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಗಿಲ್ ಐಪಿಎಲ್‌ನಲ್ಲಿ ಮಿಂಚುವುದರಲ್ಲಿ ಅನುಮಾನವೇ ಇಲ್ಲ ಎಂದರು.
ರುತುರಾಜ್ ಗಾಯಕ್ವಾಡ್ (ಚೆನ್ನೈ ಸೂಪರ್ ಕಿಂಗ್ಸ್): ಸಿಎಸ್ಕೆ ಪರ ಆರಂಭಿಕನಾಗಿ ಆಡುತ್ತಿರುವ ರುತುರಾಜ್ ಗಾಯಕ್ವಾಡ್ ಕೂಡ ಭವಿಷ್ಯದ ತಾರೆ. ಈಗಾಗಲೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರುತುರಾಜ್ ಕೂಡ ಮುಂಬರುವ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೇರಲಿದ್ದಾರೆ ಎಂದು ಗಂಗೂಲಿ ತಿಳಿಸಿದರು.
ಉಮ್ರಾನ್ ಮಲಿಕ್ (ಸನ್ರೈಸರ್ಸ್ ಹೈದರಾಬಾದ್): 23 ವರ್ಷದ ಯುವ ವೇಗಿ ಉಮ್ರಾನ್ ಮಲಿಕ್ ಈಗಾಗಲೇ ತಮ್ಮ ವೇಗದ ಬೌಲಿಂಗ್ನೊಂದಿಗೆ ವಿಶ್ವದ ಗಮನ ಸೆಳೆದಿದ್ದಾರೆ. ಹೀಗಾಗಿ ಉಮ್ರಾನ್ ಕೂಡ ಐಪಿಎಲ್‌ನಲ್ಲಿ ಸಂಚಲನ ಸೃಷ್ಟಿಸಲಿದ್ದಾರೆ ಎಂದು ಸೌರವ್ ಗಂಗೂಲಿ ಭವಿಷ್ಯ ನುಡಿದರು.