ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿರುವ ಕೊಹ್ಲಿ, ಹಲವು ಪಂದ್ಯಗಳಲ್ಲಿ ನಾನು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. 2017 ರಲ್ಲಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಫೈನಲ್ ಆಡಿದೆ. 2019 ರ ವಿಶ್ವಕಪ್ ಸೆಮಿಫೈನಲ್ ತಲುಪಿದೆ. 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಫೈನಲ್ ಆಡಿದೆ. ಇದಾಗ್ಯೂ ನನ್ನನ್ನು ವಿಫಲ ನಾಯಕ ಎಂದು ಬಿಂಬಿಸಲಾಗುತ್ತಿದೆ ಎಂದು ಕೊಹ್ಲಿ ಬೇಸರಿಸಿಕೊಂಡರು.