IPL 2023: ‘ಕನ್ನಡಿಗನಿಗೆ ತಂಡದ ನಾಯಕತ್ವ ನೀಡಬೇಕಿತ್ತು’; ಹೈದರಾಬಾದ್ ಫ್ರಾಂಚೈಸ್ ನಿರ್ಧಾರಕ್ಕೆ ಫ್ಯಾನ್ಸ್ ಗರಂ!

|

Updated on: Feb 26, 2023 | 11:06 AM

IPL 2023: ಮಯಾಂಕ್ ಅಗರ್ವಾಲ್‌ಗೆ ಹೆಚ್ಚಿನ ನಾಯಕತ್ವದ ಅನುಭವವಿದೆ. ಆದರೆ ಈಗ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ನಾಯಕನನ್ನಾಗಿ ಮಾಡಿಲ್ಲ. ಇದರಿಂದ ಭಾರತದ ಆಟಗಾರನಿಗೆ ಅನ್ಯಾಯವಾಗಿದೆ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.

1 / 7
ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕ್ರಾಮ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತನ್ನ ತಂಡಕ್ಕೆ ನಾಯಕರನ್ನಾಗಿ ನೇಮಿಸಿದೆ. ಆದರೆ ಫ್ರಾಂಚೈಸ್ ನಿರ್ಧಾರಕ್ಕೆ ತಮ್ಮ ಅಸಮಾಧಾನ ಹೊರಹಾಕಿರುವ ಎಸ್​ಆರ್​ಹೆಚ್ ತಂಡದ ಅಭಿಮಾನಿಗಳು ಕನ್ನಡಿಗನ ಪರ ಬ್ಯಾಟ್ ಬೀಸಿದ್ದಾರೆ.

2 / 7
ವಾಸ್ತವವಾಗಿ, ಸನ್‌ರೈಸರ್ಸ್ ಹೈದರಾಬಾದ್ ನಾಯಕತ್ವದ ರೇಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಎಲ್ಲರಿಗಿಂತ ಮುಂದಿದ್ದರು. ಆದರೆ ತಂಡದ ಮ್ಯಾನೇಜ್‌ಮೆಂಟ್ ದಕ್ಷಿಣ ಆಫ್ರಿಕಾದ ಆಟಗಾರ ಏಡನ್ ಮಾರ್ಕ್ರಾಮ್ ಮೇಲೆ ನಂಬಿಕೆ ಇಟ್ಟಿದೆ.

3 / 7
ಕನ್ನಡಿಗ ಮಯಾಂಕ್ ಅಗರ್ವಾಲ್ ರಣಜಿ ಟ್ರೋಫಿ 2023 ರ ಸೀಸನ್​ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಮತ್ತೊಂದೆಡೆ, ಏಡೆನ್ ಮಾರ್ಕ್ರಾಮ್ ನಾಯಕತ್ವದಲ್ಲಿ, ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ದಕ್ಷಿಣ ಆಫ್ರಿಕಾದ ಟಿ 20 ಲೀಗ್‌ನ ಮೊದಲ ಸೀಸನ್ ಸಹ ಗೆದ್ದಿದೆ. ಅದಕ್ಕಾಗಿಯೇ SRH ಫ್ರಾಂಚೈಸ್ ಐಪಿಎಲ್ 2023 ರ ಸೀಸನ್‌ಗೆ ಮುಂಚಿತವಾಗಿ ಸನ್‌ರೈಸರ್ಸ್ ಹೈದರಾಬಾದ್‌ನ ನಾಯಕನಾಗಿ ಏಡೆನ್ ಮಾರ್ಕ್ರಾಮ್ ಅವರನ್ನು ನೇಮಿಸಿತು.

4 / 7
ಆದರೆ ಈ ನಿರ್ಧಾರ SRH ಅಭಿಮಾನಿಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಏಡೆನ್ ಮಾರ್ಕ್ರಾಮ್ ಬದಲಿಗೆ ಮಯಾಂಕ್ ಅಗರ್ವಾಲ್ ಉತ್ತಮ ನಾಯಕತ್ವದ ಆಯ್ಕೆ ಎಂದು ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

5 / 7
ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ನಂತರ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ಮತ್ತೆ ವಿದೇಶಿ ನಾಯಕನ ಮೇಲೆ ನಂಬಿಕೆ ಇಟ್ಟಿದೆ. ಆ ಕ್ರಮದಲ್ಲಿ ಇದೀಗ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಾಮ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ವಿದೇಶಿ ನಾಯಕರೆಂದರೆ ಹೆಚ್ಚು ಪ್ರೀತಿ ಎಂದು ಹಲವು ಅಭಿಮಾನಿಗಳು ಟ್ವಿಟರ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

6 / 7
ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ಅವರು ತಂಡದ ನಾಯಕರಾಗುವ ಮೊದಲು ಮೂರು ಸೀಸನ್​ಗಳಲ್ಲಿ ತಂಡದಲ್ಲಿ ಆಟಗಾರರಾಗಿದ್ದರು. ಆದರೆ ಐಡೆನ್ ಮಾರ್ಕ್ರಾಮ್ ತಂಡದ ಪರ ಕೇವಲ ಒಂದು ಸೀಸನ್ ಆಡಿದ ನಂತರ ಸನ್‌ರೈಸರ್ಸ್ ಹೈದರಾಬಾದ್‌ನ ನಾಯಕರಾರಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

7 / 7
ಮಯಾಂಕ್ ಅಗರ್ವಾಲ್‌ಗೆ ಹೆಚ್ಚಿನ ನಾಯಕತ್ವದ ಅನುಭವವಿದೆ. ಈ ಆಟಗಾರ ದೇಶೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲ ಕರ್ನಾಟಕ ತಂಡದ ನಾಯಕತ್ವವನ್ನೂ ವಹಿಸಿದ್ದರು. ಆದರೆ ಈಗ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ನಾಯಕನನ್ನಾಗಿ ಮಾಡಿಲ್ಲ. ಇದರಿಂದ ಭಾರತದ ಆಟಗಾರನಿಗೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Published On - 11:04 am, Sun, 26 February 23