
ಮಾಜಿ ಟೀಂ ಇಂಡಿಯಾ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಸುರೇಶ್ ರೈನಾ ಐಪಿಎಲ್ 2023 ರ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಅಚ್ಚರಿಯೆಂಬಂತೆ ತಾನು ಪ್ರತಿನಿಧಿಸಿದ್ದ ಹಾಗೂ ತನ್ನ ನೆಚ್ಚಿನ ನಾಯಕ ಎಂಎಸ್ ಧೋನಿಗೆ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ ಜೊತೆಗೆ ನಾಯಕತ್ವವನ್ನು ನೀಡಿಲ್ಲ.

ಧೋನಿ ಬದಲಿಗೆ ಗುಜರಾತ್ ಟೈಟಾನ್ಸ್‌ನ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರುವ ರೈನಾ ವಿಕೆಟ್ ಕೀಪರ್-ಬ್ಯಾಟರ್ ಆಗಿ ವೆಸ್ಟ್ ಇಂಡೀಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗಿದ್ದರೆ ರೈನಾ ಆಯ್ಕೆ ಮಾಡಿರುವ ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..

ಯಶಸ್ವಿ ಜೈಸ್ವಾಲ್

ಶುಭ್ಮನ್ ಗಿಲ್

ವಿರಾಟ್ ಕೊಹ್ಲಿ

ಸೂರ್ಯಕುಮಾರ್ ಯಾದವ್

ನಿಕೋಲಸ್ ಪೂರನ್

ಹಾರ್ದಿಕ್ ಪಾಂಡ್ಯ

ರಿಂಕು ಸಿಂಗ್

ರವೀಂದ್ರ ಜಡೇಜಾ

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಯುಜ್ವೇಂದ್ರ ಚಹಾಲ್