- Kannada News Photo gallery Cricket photos IPL 202 if GT vs MI Qualifier 2 cancelled due to rain which team will play final against Chennai super kings
IPL 2023: ಮಳೆಯಿಂದ ಕ್ವಾಲಿಫೈಯರ್ 2 ಪಂದ್ಯ ರದ್ದಾದರೆ ಯಾವ ತಂಡ ಫೈನಲ್ಗೇರಲಿದೆ ಗೊತ್ತಾ?
IPL 2023: ಶುಕ್ರವಾರ, ಮೇ 26 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ನಡೆಯಲಿದೆ.
Updated on: May 25, 2023 | 8:10 PM

ಐಪಿಎಲ್ನ ಎರಡನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಬುಧವಾರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ ಲಕ್ನೋ ತಂಡವನ್ನು ಮಣಿಸಿ ಕ್ವಾಲಿಫೈಯರ್ 2ಗೆ ಎಂಟ್ರಿಕೊಟ್ಟಿದೆ.

ಶುಕ್ರವಾರ, ಮೇ 26 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ನಡೆಯಲಿದೆ. ಈ ಭಾರಿಯ ಪಂದ್ಯದಲ್ಲಿ ಗೆಲುವಿಗಾಗಿ ಉಭಯ ತಂಡಗಳು ಸೆಣಸಾಡುವುದರಲ್ಲಿ ಸಂಶಯವಿಲ್ಲ.

ಆದರೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಫೈನಲ್ನಲ್ಲಿ ಸಿಎಸ್ಕೆ ವಿರುದ್ಧ ಯಾವ ತಂಡ ಆಡಲಿದೆ ಎಂಬ ಅನುಮಾನ ಮೂಡಿದೆ. ಆದರೆ, ಇದಕ್ಕೆ ಕೆಲವು ನಿಯಮಗಳನ್ನು ಕೂಡ ನಿಗದಿಪಡಿಸಲಾಗಿದ್ದು, ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭವಾಗಲಿದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

ಐಪಿಎಲ್‌ನಲ್ಲಿ ಲೀಗ್ ಸುತ್ತಿನಲ್ಲಿ ಪಂದ್ಯ ರದ್ದುಗೊಂಡರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತಿತ್ತು. ಆದರೆ ಪ್ಲೇಆಫ್ ಪಂದ್ಯಗಳಿಗೆ ಐಪಿಎಲ್ ನಿಯಮಗಳು ತುಂಬಾ ವಿಭಿನ್ನವಾಗಿವೆ. ಹೀಗಿರುವಾಗ ಮಳೆಯಿಂದಾಗಿ ಕ್ವಾಲಿಫೈಯರ್ ಪಂದ್ಯಗಳು ರದ್ದಾದರೆ ಯಾವ ತಂಡ ಅಂತಿಮ ಸುತ್ತು ಪ್ರವೇಶಿಸಲಿದೆ ಎಂಬ ಪ್ರಶ್ನೆ ಹಲವು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡಿದೆ.

ಐಪಿಎಲ್ ನಿಯಮಗಳ ಪ್ರಕಾರ ಕ್ವಾಲಿಫೈಯರ್ ಪಂದ್ಯಗಳು ರದ್ದಾದರೆ ಗುಜರಾತ್ ಟೈಟಾನ್ಸ್ ತಂಡ ಸಿಎಸ್ಕೆ ವಿರುದ್ಧ ಫೈನಲ್ನಲ್ಲಿ ಆಡುವ ಅವಕಾಶ ಪಡೆಯಲಿದೆ. ಮಳೆಯಿಂದ ಪಂದ್ಯ ಸ್ಥಗಿತಗೊಂಡರೆ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ.

ವಾಸ್ತವವಾಗಿ ನಿಯಮದ ಪ್ರಕಾರ ಮಳೆಯಿಂದಾಗಿ ಪಂದ್ಯ ರದ್ದಾದರೆ ಲೀಗ್ ಅಂಕಪಟ್ಟಿಯಲ್ಲಿ ಹೆಚ್ಚು ಅಂಕ ಗಳಿಸಿದ ತಂಡ ನೇರವಾಗಿ ಫೈನಲ್ನಲ್ಲಿ ಆಡಲಿದೆ. ಐಪಿಎಲ್ ಲೀಗ್ ಸುತ್ತಿನಲ್ಲಿ 10 ಪಂದ್ಯಗಳನ್ನು ಗೆದ್ದಿರುವ ಗುಜರಾತ್ ತಂಡ 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇನ್ನು ಮುಂಬೈ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕಗಳನ್ನು ಗಳಿಸಿತು. ಹೀಗಾಗಿ ಕ್ವಾಲಿಫೈಯರ್-2 ಮಳೆಯಿಂದಾಗಿ ರದ್ದಾದರೆ ಗುಜರಾತ್ ಟೈಟಾನ್ಸ್ ತಂಡ ಅಂತಿಮ ಸುತ್ತಿನಲ್ಲಿ ಚೆನ್ನೈ ವಿರುದ್ಧ ಆಡಲಿದೆ.




