ಕುಲ್ದೀಪ್ ಯಾದವ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಕಣಕ್ಕಿಳಿದಿದ್ದ ಕುಲ್ದೀಪ್ ಯಾದವ್ ಕೇವಲ 35 ರನ್ ನೀಡಿ 3 ವಿಕೆಟ್ ಉರುಳಿಸಿದ್ದರು. ಇದರೊಂದಿಗೆ ತಂಡದ ಗೆಲುವಿನ ಪ್ರಮುಖ ರುವಾರಿಯಾಗಿದ್ದರು. ಈ ಪ್ರದರ್ಶನದ ಆದಾರದ ಮೇಲೆ ಕುಲ್ದೀಪ್ ಮುಂದಿನ ವರ್ಷ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದಲ್ಲದೆ, ಶೀಘ್ರದಲ್ಲೇ ಎಲ್ಲಾ ಮೂರು ಸ್ವರೂಪಗಳಲ್ಲಿ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದರು.