- Kannada News Photo gallery Cricket photos Kannada News | Who Is Akash Madhwal: A net bowler for RCB, Now Mumbai Indians Player
IPL 2023: RCB ಬಳಗದಲ್ಲಿದ್ದ ಆಟಗಾರ: ಇದೀಗ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್
IPL 2023 Kannada: ಈ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ಮಾಡಿದ್ದ ಆಕಾಶ್ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ತಂಡವು 101 ರನ್ಗಳಿಗೆ ಆಲೌಟ್ ಆಗಿ 81 ರನ್ಗಳಿಂದ ಸೋಲೊಪ್ಪಿಕೊಂಡಿತು.
Updated on: May 25, 2023 | 3:56 PM

IPL 2023: ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಮುಂಬೈ ಇಂಡಿಯನ್ಸ್ 2ನೇ ಕ್ವಾಲಿಫೈಯರ್ಗೆ ಪ್ರವೇಶಿಸಿದೆ. ಈ ಭರ್ಜರಿ ಗೆಲುವಿನ ರೂವಾರಿ ಆಕಾಶ್ ಮಧ್ವಾಲ್.

ಈ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ಮಾಡಿದ್ದ ಆಕಾಶ್ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ತಂಡವು 101 ರನ್ಗಳಿಗೆ ಆಲೌಟ್ ಆಗಿ 81 ರನ್ಗಳಿಂದ ಸೋಲೊಪ್ಪಿಕೊಂಡಿತು.

ವಿಶೇಷ ಎಂದರೆ ಇಂತಹದೊಂದು ಅಮೋಘ ಪ್ರದರ್ಶನ ನೀಡಿದ ಆಕಾಶ್ ಮಧ್ವಾಲ್ ಈ ಹಿಂದೆ ಆರ್ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಅಂದರೆ 2019 ರಲ್ಲಿ ಮಧ್ವಾಲ್ ಆರ್ಸಿಬಿ ತಂಡದ ನೆಟ್ ಬೌಲರ್ ಆಗಿದ್ದರು.

ಆರ್ಸಿಬಿ ಬಳಗದಲ್ಲಿರುವಾಗ ವಿರಾಟ್ ಕೊಹ್ಲಿ, ಎಬಿಡಿ ಸೇರಿದಂತೆ ಪ್ರಮುಖರಿಗೆ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ದ ಆಕಾಶ್ ಅವರನ್ನು ಮುಂಬೈ ಇಂಡಿಯನ್ಸ್ 2022 ರಲ್ಲಿ ಬದಲಿ ಆಟಗಾರನಾಗಿ ಆಯ್ಕೆ ಮಾಡಿದ್ದರು.

2022 ರ ಐಪಿಎಲ್ನ ವೇಳೆ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್ ಬದಲಿಗೆ ಆಕಾಶ್ ಮಧ್ವಾಲ್ ಅವರನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿತ್ತು. ಆದರೆ ಆ ಸೀಸನ್ನಲ್ಲಿ ಯಾವುದೇ ಪಂದ್ಯವಾಡಲು ಚಾನ್ಸ್ ಸಿಕ್ಕಿರಲಿಲ್ಲ.

ಆದರೆ ಅದಾಗಲೇ ಬಲಗೈ ವೇಗಿ ಮೇಲೆ ಕಣ್ಣಿಟ್ಟಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಐಪಿಎಲ್ 2023 ರ ಹರಾಜಿನಲ್ಲಿ ಕೇವಲ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಆಕಾಶ್ ಮಧ್ವಾಲ್ ಅವರನ್ನು ಖರೀದಿಸಿತು. ಅಲ್ಲದೆ ಈ ಬಾರಿ ಜೋಫ್ರಾ ಆರ್ಚರ್ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಕಾರಣ ರೋಹಿತ್ ಶರ್ಮಾ ಮಧ್ವಾಲ್ ಅವರನ್ನು ಕಣಕ್ಕಿಳಿಸಿದ್ದರು.

ಅಂದರಂತೆ ಈ ಬಾರಿ ಒಟ್ಟು 7 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಆಕಾಶ್ ಒಟ್ಟು 129 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 167 ರನ್ ಮಾತ್ರ. ಅಲ್ಲದೆ ಒಟ್ಟು 13 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದಾರೆ.

ಅಂದರೆ ಆರ್ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿಯೇ ಕಾಲ ಕಳೆಯಬೇಕಿದ್ದ ಆಕಾಶ್ ಮಧ್ವಾಲ್ ಅವರ ಪ್ರತಿಭೆಯನ್ನು ಗುರುತಿಸಿ ಮುಂಬೈ ಇಂಡಿಯನ್ಸ್ ಇದೀಗ ಅತ್ಯುತ್ತಮ ಬೌಲರ್ ಆಗಿ ರೂಪಿಸಿದೆ. ಇದರ ಫಲವಾಗಿ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.



















