- Kannada News Photo gallery Cricket photos Kannada News | Rohit Sharma in post match presentation after LSG vs MI Match He talking about Akash Madhwal
Rohit Sharma: ಲಖನೌ ವಿರುದ್ಧ ಗೆದ್ದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ
LSG vs MI, IPL 2023: ಎಲ್ಎಸ್ಜಿ ವಿರುದ್ಧ ರೋಹಿತ್ ಪಡೆ ಬ್ಯಾಟಿಂಗ್ - ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿ ಬರೋಬ್ಬರಿ 81 ರನ್ಗಳ ಜಯ ಸಾಧಿಸಿತು. ಲಖನೌಕ್ಕೆ ವಿಲನ್ ಆದ ಅಕಾಶ್ ಮಧ್ವಾಲ್ 5 ರನ್ಗೆ 5 ವಿಕೆಟ್ ಪಡೆದು ಮಿಂಚಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ ತಮ್ಮ ತಂಡದ ಆಟಗಾರರನ್ನು ಕೊಂಡಾಡಿದ್ದಾರೆ.
Updated on:May 25, 2023 | 10:52 AM

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದರೆ, ಲಖನೌ ಟೂರ್ನಿಯಿಂದ ಹೊರಬಿದ್ದಿದೆ.

ಮೇ 26 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇದರಲ್ಲಿ ಗೆಲ್ಲುವ ತಂಡ ಮೇ 28 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಎಲ್ಎಸ್ಜಿ ವಿರುದ್ಧ ರೋಹಿತ್ ಪಡೆ ಬ್ಯಾಟಿಂಗ್ - ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿ ಬರೋಬ್ಬರಿ 81 ರನ್ಗಳ ಜಯ ಸಾಧಿಸಿತು. ಲಖನೌಕ್ಕೆ ವಿಲನ್ ಆದ ಅಕಾಶ್ ಮಧ್ವಾಲ್ 5 ರನ್ಗೆ 5 ವಿಕೆಟ್ ಪಡೆದು ಮಿಂಚಿದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ ತಮ್ಮ ತಂಡದ ಆಟಗಾರರನ್ನು ಕೊಂಡಾಡಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹಿಟ್ಮ್ಯಾನ್ ಏನು ಹೇಳಿದ್ರು ನೋಡಿ.

ಮುಖ್ಯವಾಗಿ ಆಕಾಶ್ ಮಧ್ವಾಲ್ ಅವರನ್ನು ಹಾಡಿ ಹೊಗಳಿದ ರೋಹಿತ್, ಆಕಾಶ್ 2022ರಲ್ಲಿ ನಮ್ಮ ತಂಡದಲ್ಲಿ ಸಹಾಯಕ ಬೌಲರ್ ಆಗಿದ್ದರು. ಆದರೆ, ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಸಿಕ್ಕ ಅವಕಾಶವನ್ನು ಉಪಯೋಗಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದ ಅನುಭವಿ ವೇಗಿ ಜೋಫ್ರ ಆರ್ಚರ್ ತಂಡ ತೊರೆದ ಮೇಲೆ, ಮಧ್ವಾಲ್ ಅವರು ತಂಡಕ್ಕೆ ಆಸರೆಯಾಗಲಿದ್ದಾರೆ. ಬ್ಯಾಂಕೆಡ್‌ನಲ್ಲಿ ಬೌಲ್ ಮಾಡಲು ಒಬ್ಬ ಬೌಲರ್ ಅವಶ್ಯಕತೆ ಇತ್ತು. ಈ ಕಾರ್ಯವನ್ನು ಮಧ್ವಾಲ್ ನಿಭಾಯಿಸಿದ್ದಾರೆ - ರೋಹಿತ್ ಶರ್ಮಾ.

ಮುಂಬೈ ಇಂಡಿಯನ್ಸ್‌ನಿಂದ ಅನೇಕ ಪ್ರತಿಭೆಗಳು ಹುಟ್ಟುಕೊಂಡು ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. ಯುವ ಆಟಗಾರರಲ್ಲಿ ಉತ್ತಮ ಭಾವನೆ ಮೂಡಿಸಿ ಅವರನ್ನು ತಂಡದಲ್ಲಿ ಬಳಸಿಕೊಳ್ಳುವುದು ಒಳ್ಳೆಯ ಅನುಭವವಾಗಿದೆ. ಮೈದಾನದಲ್ಲಿ ಅವರಿಗೆ ಸ್ಥಾನ ಕಲ್ಪಿಸುವುದು ನನ್ನ ಕೆಲಸ ಎಂಬುದು ಹಿಟ್ಮ್ಯಾನ್ ಮಾತು.
Published On - 10:50 am, Thu, 25 May 23
























