IPL 2023: ಐಪಿಎಲ್​​ನಲ್ಲಿ ದಾಖಲೆ ಬರೆದ ಲಕ್ನೋ; ಆದರೂ ಆರ್​ಸಿಬಿ ರೆಕಾರ್ಡ್​ ಮುರಿಯಲಾಗಲಿಲ್ಲ!

|

Updated on: Apr 28, 2023 | 10:05 PM

IPL 2023: ಪಂಜಾಬ್ ಕಿಂಗ್ಸ್ ವಿರುದ್ಧ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದ ಲಕ್ನೋ ಬ್ಯಾಟರ್​​ಗಳು ನಿಗದಿತ 20 ಓವರ್​​ಗಳಲ್ಲಿ 257 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ 2ನೇ ಅತ್ಯಧಿಕ ಟಾರ್ಗೆಟ್ ಸೆಟ್ ಮಾಡಿದ ದಾಖಲೆ ಬರೆದಿದ್ದಾರೆ.

1 / 7
ಮೊಹಾಲಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದ ಲಕ್ನೋ ಬ್ಯಾಟರ್​​ಗಳು ನಿಗದಿತ 20 ಓವರ್​​ಗಳಲ್ಲಿ 257 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ 2ನೇ ಅತ್ಯಧಿಕ ಟಾರ್ಗೆಟ್ ಸೆಟ್ ಮಾಡಿದ ದಾಖಲೆ ಬರೆದಿದ್ದಾರೆ.

2 / 7
ಪಂಜಾಬ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡದ ಪರ ಆರಂಭಿಕ ಮೇಯರ್ಸ್​ 54 ರನ್, ಬದೋನಿ 43 ರನ್, ಸ್ಟೋಯಿನ್ 72 ರನ್ ಹಾಗೂ ಪೂರನ್ 42 ರನ್ ಚಚ್ಚಿದರು.

3 / 7
ಈ ನಾಲ್ವರು ಬ್ಯಾಟರ್​ಗಳ ಅಬ್ಬರದಿಂದಾಗಿ ಲಕ್ನೋ ತಂಡ 20 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್​ನಲ್ಲಿ ಅತ್ಯಧಿಕ ರನ್ ಬಾರಿಸಿದ 2ನೇ ತಂಡ ಎಂಬ ದಾಖಲೆಯನ್ನೂ ಬರೆಯಿತು. ಹಾಗಿದ್ದರೆ, ಅತ್ಯಧಿಕ ರನ್ ಬಾರಿಸಿದ ಟಾಪ್ 5 ತಂಡಗಳು ಯಾವುವು ಎಂಬುದನ್ನು ನೋಡುವುದಾದರೆ...

4 / 7
2013ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್ ಕಳೆರದುಕೊಂಡು ಬರೋಬ್ಬರಿ 263 ರನ್ ಕಲೆಹಾಕಿತು. ಇದರೊಂದಿಗೆ ಒಂದು ಇನ್ನಿಂಗ್ಸ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಮೊದಲ ತಂಡವಾಗಿ ಆರ್​​ಸಿಬಿ ಈಗಲೂ ಮುಂದುವರೆದಿದೆ.

5 / 7
ಲಕ್ನೋಗಿಂತ ಮುಂಚೆ ಆರ್​ಸಿಬಿ ತಂಡವೇ 2ನೇ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೀಗ 3ನೇ ಸ್ಥಾನಕ್ಕೆ ಜಾರಿರುವ ಆರ್​​ಸಿಬಿ 2016 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 248 ರನ್ ಕಲೆಹಾಕಿತ್ತು.

6 / 7
2010ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 246 ರನ್ ಬಾರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನದಲ್ಲಿದೆ.

7 / 7
ಇನ್ನು 5ನೇ ಸ್ಥಾನದಲ್ಲಿ 2018ರ ಐಪಿಎಲ್​​ನಲ್ಲಿ ಇದೇ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ತಂಡ 245 ರನ್ ಬಾರಿಸಿತ್ತು.

Published On - 10:05 pm, Fri, 28 April 23