AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ದಾಖಲೆಯ 263 ರನ್ಸ್​: ಅಂದು RCB ಪರ ಯಾರ್ಯಾರು ಎಷ್ಟು ರನ್​ಗಳಿಸಿದ್ದರು? ಇಲ್ಲಿದೆ ಮಾಹಿತಿ

IPL Highest Team Score: 5ನೇ ಕ್ರಮಾಂಕದಲ್ಲಿ ಆಡಿದ ಸೌರವ್ ತಿವಾರಿ 2 ಎಸೆತಗಳಲ್ಲಿ 2 ರನ್​ಗಳಿಸಿ ಅಶೋಕ್ ದಿಂಡಾಗೆ ವಿಕೆಟ್ ಒಪ್ಪಿಸಿದರೆ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರವಿ ರಾಂಪಾಲ್ ಶೂನ್ಯಕ್ಕೆ ಔಟಾಗಿದ್ದರು.

TV9 Web
| Edited By: |

Updated on: Apr 29, 2023 | 3:57 PM

Share
IPL 2024: ದಾಖಲೆಯ 263 ರನ್​ಗಳು. 11 ವರ್ಷಗಳ ಹಿಂದೆ ಐಪಿಎಲ್​ನಲ್ಲಿ ಆರ್​ಸಿಬಿ ಕಲೆಹಾಕಿದ 263 ರನ್​ಗಳ ಸ್ಕೋರ್​ಕಾರ್ಡ್ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಸನ್​ರೈಸರ್ಸ್​ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್​ ವಿರುದ್ಧ 277 ರನ್ ಬಾರಿಸಿ ದಾಖಲೆ ಬರೆದಿರುವುದು.

1 / 13
ಅಂದರೆ ಐಪಿಎಲ್ ಇತಿಹಾಸದಲ್ಲೇ ಕೇವಲ 2 ತಂಡಗಳು ಮಾತ್ರ 250 ಕ್ಕಿಂತ ಹೆಚ್ಚು ರನ್​ ಕಲೆಹಾಕಿದೆ. 2013 ರಲ್ಲಿ ಆರ್​ಸಿಬಿ 263 ರನ್​ಗಳಿಸಿದರೆ, 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ 257 ರನ್​ ಬಾರಿಸಿದೆ.

2 / 13
ಇದಾಗ್ಯೂ ಐಪಿಎಲ್ ಇತಿಹಾಸದಲ್ಲಿ ಮೂಡಿಬಂದ ಮೊದಲ 250+ ರನ್​ಗಳ ದಾಖಲೆ ಈಗಲೂ ವಿಶೇಷ ದಾಖಲೆಯಾಗಿಯೇ ಉಳಿದಿದೆ. ಈ ದಾಖಲೆಯ ಇನಿಂಗ್ಸ್​ನಲ್ಲಿ ಅಂದು ಆರ್​ಸಿಬಿ ಪರ ಯಾರ್ಯಾರು ಎಷ್ಟೆಷ್ಟು ರನ್ ಕಲೆಹಾಕಿದ್ದರು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

3 / 13
2013, ಏಪ್ರಿಲ್ 23...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ವಾರಿಯರ್ಸ್ ತಂಡದ ನಾಯಕ ಆರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.

4 / 13
ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಸ್ಪೋಟಕ ಆರಂಭ ಒದಗಿಸಿದ್ದರು. ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗೇಲ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅತ್ತ ಯೂನಿವರ್ಸ್ ಬಾಸ್​ನ ಅಬ್ಬರದಿಂದ ಪುಣೆ ವಾರಿಯರ್ಸ್ ಬೌಲರ್​ಗಳು ಲಯ ತಪ್ಪಿದರು. ಪರಿಣಾಮ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದರು.

5 / 13
ಅಷ್ಟೇ ಅಲ್ಲದೆ 66 ಎಸೆತಗಳಲ್ಲಿ 17 ಸಿಕ್ಸ್​ ಹಾಗೂ 13 ಫೋರ್​ನೊಂದಿಗೆ ಅಜೇಯ 175 ರನ್​ ಬಾರಿಸಿ ಐಪಿಎಲ್​ನಲ್ಲಿ ಹೊಸ ದಾಖಲೆಯನ್ನೂ ಕೂಡ ಬರೆದರು.

6 / 13
ಮತ್ತೊಂದೆಡೆ ತಿಲಕರತ್ನೆ ದಿಲ್ಶಾನ್ ಆರಂಭದಲ್ಲಿ ತುಸು ಬಿರುಸಿನ ಬ್ಯಾಟಿಂಗ್ ನಡೆಸಿದರೂ, ಆ ಬಳಿಕ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ 36 ಎಸೆತಗಳನ್ನು ಎದುರಿಸಿದ ದಿಲ್ಶಾನ್ 5 ಫೋರ್​ನೊಂದಿಗೆ 33 ರನ್​ಗಳಿಸಿ ಲೂಕ್​ ರೈಟ್​ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಇದಕ್ಕೂ ಮುನ್ನ ಗೇಲ್ ಜೊತೆ ಮೊದಲ ವಿಕೆಟ್​ಗೆ 167 ರನ್​ಗಳ ಭರ್ಜರಿ ಜೊತೆಯಾಟವಾಡಿದ್ದರು.

7 / 13
ಆ ನಂತರ ಬಂದ ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್​ನೊಂದಿಗೆ 11 ರನ್​ಗಳಿಸಿದರೂ ಅಶೋಕ್ ದಿಂಡಾ ಅವರ ಅತ್ಯುತ್ತಮ ಫೀಲ್ಡಿಂಗ್​ನಿಂದಾಗಿ ರನೌಟ್ ಆಗಿ ಹೊರ ನಡೆದರು.

8 / 13
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಅಕ್ಷರಶಃ ಅಬ್ಬರಿಸುವ ಮೂಲಕ ಪಂದ್ಯವನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ದರು. ಕೇವಲ 8 ಎಸೆತಗಳನ್ನು ಎದುರಿಸಿದ್ದ ಎಬಿಡಿ 3 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 31 ರನ್​ ಬಾರಿಸಿ ಮಿಚೆಲ್ ಮಾರ್ಷ್​ಗೆ ವಿಕೆಟ್ ಒಪ್ಪಿಸಿದ್ದರು. ಅಷ್ಟರಲ್ಲಾಗಲೇ ಆರ್​ಸಿಬಿ ತಂಡದ ಮೊತ್ತ 250 ರ ಗಡಿದಾಟಿತ್ತು.

9 / 13
ಹಾಗೆಯೇ 5ನೇ ಕ್ರಮಾಂಕದಲ್ಲಿ ಆಡಿದ ಸೌರವ್ ತಿವಾರಿ 2 ಎಸೆತಗಳಲ್ಲಿ 2 ರನ್​ಗಳಿಸಿ ಅಶೋಕ್ ದಿಂಡಾಗೆ ವಿಕೆಟ್ ಒಪ್ಪಿಸಿದರೆ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರವಿ ರಾಂಪಾಲ್ ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್​ಗಳಿಸಿತು.

10 / 13
264 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಪುಣೆ ವಾರಿಯರ್ಸ್ ಪರ ಸ್ಟೀವ್ ಸ್ಮಿತ್ 31 ಎಸೆತಗಳಲ್ಲಿ 41 ರನ್​ಗಳಿಸಿದ್ದು ಗರಿಷ್ಠ ಸ್ಕೋರ್. ಅಲ್ಲದೆ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 133 ರನ್​ಗಳಿಸುವ ಮೂಲಕ ಪುಣೆ ವಾರಿಯರ್ಸ್ ತಂಡವು 130 ರನ್​ಗಳ ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿತ್ತು. ಈ ದಾಖಲೆಯ ಪಂದ್ಯದ ಉಭಯ ತಂಡಗಳ ಪ್ಲೇಯಿಂಗ್ 11 ಈ ಕೆಳಗಿನಂತಿದೆ...

11 / 13
ಪುಣೆ ವಾರಿಯರ್ಸ್ ಪ್ಲೇಯಿಂಗ್ 11: ಆರೋನ್ ಫಿಂಚ್ (ನಾಯಕ) , ರಾಬಿನ್ ಉತ್ತಪ್ಪ ( ವಿಕೆಟ್ ಕೀಪರ್ ) , ಯುವರಾಜ್ ಸಿಂಗ್ , ಸ್ಟೀವ್ ಸ್ಮಿತ್ , ಲೂಕ್ ರೈಟ್ , ಮಿಚೆಲ್ ಮಾರ್ಷ್ , ಮಿಥುನ್ ಮನ್ಹಾಸ್ , ಭುವನೇಶ್ವರ್ ಕುಮಾರ್ , ಈಶ್ವರ್ ಪಾಂಡೆ , ಅಲಿ ಮುರ್ತಾಜಾ , ಅಶೋಕ್ ದಿಂಡಾ.

12 / 13
ಆರ್​ಸಿಬಿ ಪ್ಲೇಯಿಂಗ್ 11: ತಿಲಕರತ್ನೆ ದಿಲ್ಶನ್ , ಕ್ರಿಸ್ ಗೇಲ್ , ವಿರಾಟ್ ಕೊಹ್ಲಿ (ನಾಯಕ) , ಎಬಿ ಡಿವಿಲಿಯರ್ಸ್ , ಸೌರಭ್ ತಿವಾರಿ , ಅರುಣ್ ಕಾರ್ತಿಕ್ ( ವಿಕೆಟ್ ಕೀಪರ್ ) , ರವಿ ರಾಂಪಾಲ್ , ವಿನಯ್ ಕುಮಾರ್ , ಮುರಳಿ ಕಾರ್ತಿಕ್ , ಆರ್ ಪಿ ಸಿಂಗ್ , ಜಯದೇವ್ ಉನಾದ್ಕಟ್.

13 / 13
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ

ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ

ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು

‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್

2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ

ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ

ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ

VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ