IPL 2023: RCB ಸಾವಿರ ರನ್​ ಸರದಾರರು: ನಮ್ಮದೊಂದು ಲೆಕ್ಕ, ಅವರದೊಂದು ಲೆಕ್ಕ..!

IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್.

TV9 Web
| Updated By: ಝಾಹಿರ್ ಯೂಸುಫ್

Updated on: Apr 29, 2023 | 7:22 PM

IPL 2023: ಐಪಿಎಲ್​ ಸೀಸನ್​ 16 ರಲ್ಲಿ ಆರ್​ಸಿಬಿ ತಂಡವು ಭರ್ಜರಿಯಾಗಿ ಶುಭಾರಂಭ ಮಾಡಿತ್ತು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದು ಬೀಗಿದ್ದ ಆರ್​ಸಿಬಿ ಆ ಬಳಿಕ ನೀರಸ ಪ್ರದರ್ಶನ ನೀಡಿತ್ತು. ಇದೀಗ ಆಡಿರುವ 8 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವುದು ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್.

1 / 9
ಅದರಲ್ಲೂ ಆರ್​ಸಿಬಿ ಮೂವರು ಬ್ಯಾಟ್ಸ್​ಮನ್​ಗಳನ್ನೇ ಅವಲಂಭಿಸಿದೆ. ಇದಕ್ಕೆ ಸಾಕ್ಷಿಯೇ ಈ ಮೂವರು ಆಟಗಾರರು ಜೊತೆಯಾಗಿ ಸಾವಿರ ರನ್​ ಕಲೆಹಾಕಿರುವುದು.

2 / 9
ಅಂದರೆ ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್​ ಒಟ್ಟು 422 ರನ್​ ಕಲೆಹಾಕಿದರೆ, ವಿರಾಟ್ ಕೊಹ್ಲಿ 333 ರನ್​ಗಳಿಸಿದ್ದಾರೆ. ಹಾಗೆಯೇ ಗ್ಲೆನ್ ಮ್ಯಾಕ್ಸ್​ವೆಲ್ 258 ರನ್​ ಕಲೆಹಾಕಿದ್ದಾರೆ. ಅಂದರೆ ಈ ಮೂವರು ಆಟಗಾರರೇ ಒಟ್ಟು 1013 ರನ್​ ಕಲೆಹಾಕಿರುವುದು ವಿಶೇಷ.

3 / 9
ಇನ್ನುಳಿದ ಎಲ್ಲಾ ಆಟಗಾರರೆಲ್ಲರೂ ಸೇರಿ 400 ರನ್​ ಕೂಡ ಗಳಿಸಿಲ್ಲ ಎಂಬುದೇ ಇಲ್ಲಿ ದೊಡ್ಡ ಅಚ್ಚರಿ. ಅಂದರೆ ಆರ್​ಸಿಬಿ ಪರ ಬ್ಯಾಟರ್​ಗಳಾಗಿ ಅನೂಜ್ ರಾವತ್, ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೋಮ್ರರ್, ದಿನೇಶ್ ಕಾರ್ತಿಕ್ ಕಣಕ್ಕಿಳಿದಿದ್ದಾರೆ.

4 / 9
ಹಾಗೆಯೇ ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಝ್ ಅಹ್ಮದ್,ಆಲ್​ರೌಂಡರ್​ಗಳಾಗಿ ಆಡಿದ್ದಾರೆ. ಇವೆಲ್ಲರೂ ಸೇರಿ ಕಲೆಹಾಕಿರುವುದು ಕೇವಲ 352 ರನ್​ಗಳು ಮಾತ್ರ.

5 / 9
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಆಟಗಾರರು ಒಟ್ಟು 13 ಅರ್ಧಶತಕಗಳನ್ನು ಬಾರಿಸಿದೆ. ಈ ಹಾಫ್ ಸೆಂಚುರಿಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ತಲಾ 5 ಅರ್ಧಶತಕಗಳನ್ನು ಸಿಡಿಸಿದರೆ, ಮ್ಯಾಕ್ಸ್​ವೆಲ್ 3 ಹಾಫ್ ಸೆಂಚುರಿ ಬಾರಿಸಿದ್ದಾರೆ.

6 / 9
ಆದರೆ ಆರ್​ಸಿಬಿ ಪರ ಕಣಕ್ಕಿಳಿದ ಇತರೆ ಬ್ಯಾಟರ್​-ಆಲ್​ರೌಂಡರ್​ಗಳಿಂದ ಒಂದೇ ಒಂದು ಅರ್ಧಶತಕ ಕೂಡ ಮೂಡಿಬಂದಿಲ್ಲ. ಅಂದರೆ ಆರ್​ಸಿಬಿ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ತ್ರಿಮೂರ್ತಿಗಳನ್ನು ಅಲಂಭಿಸಿದೆ ಎಂಬುದಕ್ಕೆ ಇದುವೇ ಸಾಕ್ಷಿ.

7 / 9
ಒಟ್ಟಿನಲ್ಲಿ ಈಗಾಗಲೇ 8 ಪಂದ್ಯಗಳನ್ನಾಡಿರುವ ಆರ್​ಸಿಬಿ ಪರ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರದ್ದು ಒಂದು ಲೆಕ್ಕವಾದರೆ, ಇತರೆ ಆಟಗಾರರದ್ದು ಇನ್ನೊಂದು ಲೆಕ್ಕ...ಇಲ್ಲಿ ಇತರೆ ಆಟಗಾರರ ಒಟ್ಟು ಲೆಕ್ಕ ಕೇವಲ 352 ರನ್​ ಎಂಬುದೇ ಈಗ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.

8 / 9
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

9 / 9
Follow us