ಮೊಹಾಲಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದ ಲಕ್ನೋ ಬ್ಯಾಟರ್ಗಳು ನಿಗದಿತ 20 ಓವರ್ಗಳಲ್ಲಿ 257 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ 2ನೇ ಅತ್ಯಧಿಕ ಟಾರ್ಗೆಟ್ ಸೆಟ್ ಮಾಡಿದ ದಾಖಲೆ ಬರೆದಿದ್ದಾರೆ.
ಪಂಜಾಬ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡದ ಪರ ಆರಂಭಿಕ ಮೇಯರ್ಸ್ 54 ರನ್, ಬದೋನಿ 43 ರನ್, ಸ್ಟೋಯಿನ್ 72 ರನ್ ಹಾಗೂ ಪೂರನ್ 42 ರನ್ ಚಚ್ಚಿದರು.
ಈ ನಾಲ್ವರು ಬ್ಯಾಟರ್ಗಳ ಅಬ್ಬರದಿಂದಾಗಿ ಲಕ್ನೋ ತಂಡ 20 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್ನಲ್ಲಿ ಅತ್ಯಧಿಕ ರನ್ ಬಾರಿಸಿದ 2ನೇ ತಂಡ ಎಂಬ ದಾಖಲೆಯನ್ನೂ ಬರೆಯಿತು. ಹಾಗಿದ್ದರೆ, ಅತ್ಯಧಿಕ ರನ್ ಬಾರಿಸಿದ ಟಾಪ್ 5 ತಂಡಗಳು ಯಾವುವು ಎಂಬುದನ್ನು ನೋಡುವುದಾದರೆ...
2013ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ಕಳೆರದುಕೊಂಡು ಬರೋಬ್ಬರಿ 263 ರನ್ ಕಲೆಹಾಕಿತು. ಇದರೊಂದಿಗೆ ಒಂದು ಇನ್ನಿಂಗ್ಸ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಮೊದಲ ತಂಡವಾಗಿ ಆರ್ಸಿಬಿ ಈಗಲೂ ಮುಂದುವರೆದಿದೆ.
ಲಕ್ನೋಗಿಂತ ಮುಂಚೆ ಆರ್ಸಿಬಿ ತಂಡವೇ 2ನೇ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೀಗ 3ನೇ ಸ್ಥಾನಕ್ಕೆ ಜಾರಿರುವ ಆರ್ಸಿಬಿ 2016 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 248 ರನ್ ಕಲೆಹಾಕಿತ್ತು.
2010ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 246 ರನ್ ಬಾರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನದಲ್ಲಿದೆ.
ಇನ್ನು 5ನೇ ಸ್ಥಾನದಲ್ಲಿ 2018ರ ಐಪಿಎಲ್ನಲ್ಲಿ ಇದೇ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ತಂಡ 245 ರನ್ ಬಾರಿಸಿತ್ತು.
Published On - 10:05 pm, Fri, 28 April 23