IPL 2023: 6,6,6,6,6: ವಿಜಯ್ ಶಂಕರ್ ಸಿಡಿಲಬ್ಬರಕ್ಕೆ ನಲುಗಿದ KKR

| Updated By: ಝಾಹಿರ್ ಯೂಸುಫ್

Updated on: Apr 09, 2023 | 5:58 PM

IPL 2023 Kannada: ವಿಶೇಷ ಎಂದರೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇದುವರೆಗೆ 54 ಪಂದ್ಯಗಳನ್ನಾಡಿರುವ ವಿಜಯ್ ಶಂಕರ್​ಗೆ ಇದು ನಾಲ್ಕನೇ ಅರ್ಧಶತಕ.

1 / 5
IPL 2023 GT vs KKR: ಅಹಮದಾಬಾದ್​ನಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯದಲ್ಲಿ ವಿಜಯ್ ಶಂಕರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ಹಂಗಾಮಿ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡವು 14ನೇ ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 118 ರನ್​ ಕಲೆಹಾಕಿತ್ತು.

2 / 5
ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ವಿಜಯ್ ಶಂಕರ್ ಬೀಸ್ಟ್ ಮೋಡ್​ನಲ್ಲಿ ಬ್ಯಾಟ್ ಬೀಸಿದ್ದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಟೈಟಾನ್ಸ್ ಆಟಗಾರ ಕೆಕೆಆರ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ವಿಜಯ್ ಶಂಕರ್ ಬ್ಯಾಟ್​ನಿಂದ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.

3 / 5
ಅಷ್ಟೇ ಅಲ್ಲದೆ ಕೊನೆಯ ಓವರ್​ನಲ್ಲಿ ಶಾರ್ದೂಲ್ ಠಾಕೂರ್ ಎಸೆತಗಳಿಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಕೇವಲ 24 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ ಚಚ್ಚುವ ಮೂಲಕ ವಿಜಯ್ ಶಂಕರ್ ಅಜೇಯ 63 ರನ್​ ಕಲೆಹಾಕಿದರು. ಪರಿಣಾಮ ಗುಜರಾತ್ ಟೈಟಾನ್ಸ್​ ತಂಡದ ಮೊತ್ತವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್​ಗೆ ಬಂದು ನಿಂತಿತು.

4 / 5
ವಿಶೇಷ ಎಂದರೆ ಐಪಿಎಲ್​ನಲ್ಲಿ ಇದುವರೆಗೆ 54 ಪಂದ್ಯಗಳನ್ನಾಡಿರುವ ವಿಜಯ್ ಶಂಕರ್​ಗೆ ಇದು ನಾಲ್ಕನೇ ಅರ್ಧಶತಕ. ಅದರಲ್ಲೂ ಅವರ ಬ್ಯಾಟ್​ನಿಂದ ಮೂಡಿಬಂದ ಅತ್ಯಂತ ವೇಗದ ಹಾಫ್ ಸೆಂಚುರಿ ಕೂಡ ಇದಾಗಿದೆ. ಒಟ್ಟಿನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವಿಜಯ್ ಶಂಕರ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.

5 / 5
ಇನ್ನು ಈ ಪಂದ್ಯದಿಂದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. ಅನಾರೋಗ್ಯದ ಕಾರಣ ಮುಂಜಾಗೃತ ಕ್ರಮವಾಗಿ ಪಾಂಡ್ಯ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಹೀಗಾಗಿ ತಂಡದ ಉಪನಾಯಕ ರಶೀದ್ ಖಾನ್ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.