IPL 2023: ಡೆಲ್ಲಿಗೆ ಶಾಕ್ ನೀಡಿ ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ವೈಶಾಕ್

| Updated By: ಝಾಹಿರ್ ಯೂಸುಫ್

Updated on: Apr 15, 2023 | 8:29 PM

IPL 2023 Kannada: ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ 175 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್​ ನಷ್ಟಕ್ಕೆ 151 ರನ್​ಗಳಿಸಲಷ್ಟೇ ಶಕ್ತರಾದರು.

1 / 7
IPL 2023 RCB vs DC: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿ ವೇಗಿ ವೈಶಾಕ್ ವಿಜಯಕುಮಾರ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಚೊಚ್ಚಲ ಐಪಿಎಲ್​ ಪಂದ್ಯದ ಮೂಲಕ ಎಂಬುದೇ ವಿಶೇಷ.

2 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 174 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

3 / 7
ಆರಂಭಿಕ ಆಟಗಾರ ಪೃಥ್ವಿ ಶಾ ರನೌಟ್ ಆದರೆ, ಮಿಚೆಲ್ ಮಾರ್ಷ್​ ಪಾರ್ನೆಲ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಯಶ್ ಧುಲ್ ಸಿರಾಜ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದರು. ಇದಾಗ್ಯೂ ಕ್ರೀಸ್ ಕಚ್ಚಿ ನಿಂತಿದ್ದ ಡೇವಿಡ್ ವಾರ್ನರ್ ವಿಕೆಟ್ ಆರ್​ಸಿಬಿ ಪಾಲಿಗೆ ಅತ್ಯಗತ್ಯವಾಗಿತ್ತು.

4 / 7
ಈ ಹಂತದಲ್ಲಿ ಐಪಿಎಲ್​ನ ಮೊದಲ ಓವರ್ ಎಸೆಯಲು ಬಂದ ಕನ್ನಡಿಗ ವೈಶಾಕ್ ತಮ್ಮ 4ನೇ ಎಸೆತದಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದರು. ಆನಂತರದ ಓವರ್​ಗಳಲ್ಲಿ ಡೇಂಜರಸ್ ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್ ವಿಕೆಟ್ ಕಬಳಿಸಿ ಮಿಂಚಿದರು.

5 / 7
ಅಷ್ಟೇ ಅಲ್ಲದೆ ಮೊದಲ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದು ವೈಶಾಕ್ ವಿಜಯಕುಮಾರ್ ನೀಡಿರುವುದು ಕೇವಲ 20 ರನ್ ಮಾತ್ರ. ಇದರ ಜೊತೆಗೆ 3 ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದರು.

6 / 7
ಅಂದರೆ ಆರ್​ಸಿಬಿ ಪರ ಪಾದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ವೇಗಿ ಎಂಬ ದಾಖಲೆ ವೈಶಾಕ್ ವಿಜಕುಮಾರ್ ಪಾಲಾಗಿದೆ. ಅಲ್ಲದೆ ಮುಂಬರುವ ಪಂದ್ಯಗಳಿಗೂ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

7 / 7
ಇನ್ನು ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ 175 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್​ ನಷ್ಟಕ್ಕೆ 151 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆರ್​ಸಿಬಿ ತಂಡವು 23 ರನ್​ಗಳ ಭರ್ಜರಿ ಜಯ ಸಾಧಿಸಿತು.