IPL 2023: ಹರ್ಷಲ್ ಪಟೇಲ್ ಅವರ ಓವರ್ ಬ್ಯಾನ್ ಮಾಡಿದ್ದೇಕೆ? ಇಲ್ಲಿದೆ ಕಾರಣ

Edited By:

Updated on: Apr 18, 2023 | 4:13 PM

IPL 2023 Kannada: ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 27 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 52 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಮೊಯೀನ್ ಅಲಿ ಹಾಗೂ ರವೀಂದ್ರ ಜಡೇಜಾ ಉಪಯುಕ್ತ ಕಾಣಿಕೆ ನೀಡಿದರು.

1 / 8
IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿದ್ದರು.

IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿದ್ದರು.

2 / 8

ಅದರಂತೆ ಇನಿಂಗ್ಸ್ ಆರಂಭಿಸಿದ ಸಿಎಸ್​ಕೆ ತಂಡಕ್ಕೆ ಡೆವೊನ್ ಕಾನ್ವೆ ಸ್ಪೋಟಕ ಆರಂಭ ಒದಗಿಸಿದ್ದರು. ಆರಂಭದಿಂದಲೇ ಆರ್​ಸಿಬಿ ಬೌಲರ್​ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಕಾನ್ವೆ 45 ಎಸೆತಗಳಲ್ಲಿ 6 ಫೋರ್ ಹಾಗೂ 6 ಸಿಕ್ಸ್​ನೊಂದಿಗೆ 83 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

3 / 8

ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ 27 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 52 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಮೊಯೀನ್ ಅಲಿ ಹಾಗೂ ರವೀಂದ್ರ ಜಡೇಜಾ ಉಪಯುಕ್ತ ಕಾಣಿಕೆ ನೀಡಿದರು.

4 / 8

ಅದರಲ್ಲೂ ಕೊನೆಯ ಓವರ್ ಎಸೆದ ಹರ್ಷಲ್ ಪಟೇಲ್ ಅತಿರಿಕ್ತ ರನ್​ಗಳನ್ನು ನೀಡುವ ಮೂಲಕ ದುಬಾರಿಯಾದರು. 20 ಓವರ್​ನ ಮೊದಲ ಎಸೆತದಲ್ಲಿ 1 ರನ್ ನೀಡಿದ ಹರ್ಷಲ್ ಪಟೇಲ್, ಆ ಬಳಿಕ ನೋಬಾಲ್ ಎಸೆದರು.

5 / 8

ಇದಾದ ಬಳಿಕ ಫ್ರೀಹಿಟ್​ನಲ್ಲಿ 1 ರನ್ ನೀಡಿದರು. ಆ ನಂತರ ಮತ್ತೆ ವೈಡ್ ಎಸೆದರು. ಆ ಬಳಿಕ ಮತ್ತೊಂದು ನೋಬಾಲ್. ತಕ್ಷಣವೇ ಅಂಪೈರ್ ಹರ್ಷಲ್ ಪಟೇಲ್ ಅವರ ಬೌಲಿಂಗ್ ತಡೆದರು.

6 / 8

ಇದಕ್ಕೆ ಮುಖ್ಯ ಕಾರಣ ಅವರು ಎಸೆದ ಎರಡೂ ಬೀಮರ್ ನೋಬಾಲ್​ಗಳು. ಅಂದರೆ ಸೊಂಟಕ್ಕಿಂತ ಮೇಲ್ಭಾಗಕ್ಕೆ ನೇರವಾಗಿ ಚೆಂಡೆಸೆಯುವ ಮೂಲಕ ಹರ್ಷಲ್ ಪಟೇಲ್ ತಪ್ಪು ಮಾಡಿದರು. ಮೊದಲ ಬೀಮರ್ ಎಸೆದಾಗಲೇ ಅಂಪೈರ್ ಎಚ್ಚರಿಕೆ ನೀಡಿದ್ದರು. ಇದಾಗ್ಯೂ 2ನೇ ಬಾರಿ ಅಂತಹದ್ದೇ ಬೀಮರ್ ಎಸೆದಿದ್ದರಿಂದ ಅಂಪೈರ್ ಅವರ ಬೌಲಿಂಗ್ ಅನ್ನು ನಿಷೇಧಿಸಿದರು.

7 / 8

ಐಸಿಸಿ ನಿಯಮದ ಪ್ರಕಾರ, ಬ್ಯಾಟ್ಸ್​ಮನ್​ಗಳ ಸುರಕ್ಷತೆಯ ದೃಷ್ಟಿಯಲ್ಲಿ ಸೊಂಟದ ಮೇಲೆ ಅಥವಾ ಎದೆ ಭಾಗದತ್ತ ಬರುವ ಅಪಾಯಕಾರಿ ಎಸೆತಗಳನ್ನು ನೋ ಬಾಲ್ ಎಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿಯ ಬೀಮರ್ ಎಸೆತಕ್ಕೆ ಅಂಪೈರ್ ಎಚ್ಚರಿಕೆ ನೀಡುತ್ತಾರೆ. ಅದೇ ತಪ್ಪು ಮರುಕಳಿಸಿದರೆ ಅವರ ಬೌಲಿಂಗ್ ಅನ್ನು ತಡೆ ಹಿಡಿಯಬಹುದು.

8 / 8

ಇದೇ ಕಾರಣಕ್ಕಾಗಿ 20ನೇ ಓವರ್​ನಲ್ಲಿ 3 ಬೌಲ್ ಮಾಡಿದ ಬಳಿಕ ಹರ್ಷಲ್ ಪಟೇಲ್ ಅವರ ಬೌಲಿಂಗ್ ಅನ್ನು ನಿಷೇಧಿಸಲಾಯಿತು. ಆ ಬಳಿಕ ಗ್ಲೆನ್ ಮ್ಯಾಕ್ಸ್​ವೆಲ್ 3 ಎಸೆತಗಳನ್ನು ಎಸೆಯುವ ಮೂಲಕ 20ನೇ ಓವರ್​ ಪೂರ್ಣಗೊಳಿಸಿದ್ದರು.

Published On - 4:08 pm, Tue, 18 April 23

Loading...
Unable to load recommendations.
Follow Us