IPL 2024: ಐಪಿಎಲ್ ಇತಿಹಾಸವನ್ನೇ ಬದಲಿಸಿದ ಸಿಎಸ್‌ಕೆ ಸೋಲು..!
IPL 2024: ಳೆದ ಸೀಸನ್ನಲ್ಲಿ ಸಿಎಸ್‌ಕೆ ಹೊರತುಪಡಿಸಿ, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದವು. ಈ ನಾಲ್ಕರಲ್ಲಿ ಸಿಎಸ್‌ಕೆ ಹಾಗೂ ಗುಜರಾತ್ ಫೈನಲ್ಗೇರಿದ್ದವು. ಆ ಫೈನಲ್ನಲ್ಲಿ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಈ ಬಾರಿ ಈ 4 ತಂಡಗಳಿಗೂ ತಂಡಗಳು ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
1 / 8
ಐಪಿಎಲ್ 2024ರ 68 ನೇ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿತು. ಇದರೊಂದಿಗೆ ಪ್ಲೇ ಆಫ್ ತಲುಪಿದ ನಾಲ್ಕನೇ ತಂಡ ಎನಿಸಿಕೊಂಡಿತು.
2 / 8
ಆರ್ಸಿಬಿಯ ಆಗಮನದೊಂದಿಗೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆದ ಎಲ್ಲಾ ನಾಲ್ಕು ತಂಡಗಳು ಯಾವುವು ಎಂಬುದು ಖಚಿತವಾಗಿದೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಈಗಾಗಲೇ ಸ್ಥಾನ ಪಡೆದಿವೆ.
3 / 8
ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ನಿಂದ ಹೊರಬಿದ್ದಿದೆ. ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಹಿಂದೇದು ನಡೆಯದ ಘಟನೆಯೊಂದು ಈ ಐಪಿಎಲ್ ಆವೃತ್ತಿಯಲ್ಲಿ ನಡೆದಿದೆ.
4 / 8
ವಾಸ್ತವವಗಾಗಿ ಕಳೆದ ಸೀಸನ್ನಲ್ಲಿ ಸಿಎಸ್‌ಕೆ ಹೊರತುಪಡಿಸಿ, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದವು. ಈ ನಾಲ್ಕರಲ್ಲಿ ಸಿಎಸ್‌ಕೆ ಹಾಗೂ ಗುಜರಾತ್ ಫೈನಲ್ಗೇರಿದ್ದವು. ಆ ಫೈನಲ್ನಲ್ಲಿ ಸಿಎಸ್‌ಕೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
5 / 8
ಆದರೆ ಈ ಬಾರಿ ಈ 4 ತಂಡಗಳಿಗೂ ತಂಡಗಳು ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಕಳೆದ ಸೀಸನ್ನ ಅಗ್ರ 4 ತಂಡಗಳ ಪೈಕಿ ಯಾವ ತಂಡವೂ ಪ್ಲೇಆಫ್ ತಲುಪದೆ ಇರುವುದು ಇದೇ ಮೊದಲ ಬಾರಿಗೆ ಸಂಭಾವಿಸಿದೆ.
6 / 8
ಇನ್ನು ಐಪಿಎಲ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ. ಈ ಹಿಂದೆ 2020 ಮತ್ತು 2022ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.
7 / 8
ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಐಪಿಎಲ್ ಪ್ರಶಸ್ತಿ ಗೆದ್ದಿದ್ದವು. ಆದರೆ ಈ ಬಾರಿ ಪ್ಲೇಆಫ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಇನ್ನೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.
8 / 8
ಹೀಗಿರುವಾಗ ಈ ಬಾರಿ ಹೊಸ ಚಾಂಪಿಯನ್ ಪಟ್ಟಕ್ಕೇರುವುದು ತುಂಬಾ ಕಷ್ಟವಾದರೂ ಆರ್ಸಿಬಿಯ ಫಾರ್ಮ್ ನೋಡಿದರೆ ಅದೂ ಅಸಾಧ್ಯವೆಂದು ಹೇಳಲಾಗದು. 2008ರಲ್ಲಿ ರಾಜಸ್ಥಾನ್ ರಾಯಲ್ಸ್, 2012-2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ ಚಾಂಪಿಯನ್ ಆಗಿವೆ.