
ಕಳೆದೆರಡು ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್ಗೆ ಮುನ್ನಡೆಸಿ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ನಿಂದ ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕನಾಗಿ ಕಣಕ್ಕಿಳಿಯಲು ತಯಾರಿ ಆರಂಭಿಸಿದ್ದಾರೆ.

ವಾಸ್ತವವಾಗಿ ಲೀಗ್ ಆರಂಭಕ್ಕೂ ಮುನ್ನ ನಡೆದ ಮಿನಿ ಹರಾಜಿನ ಬಳಿಕ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಟ್ರೇಡಿಂಗ್ ಮೂಲಕ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಎರಡು ಬಾರಿ ತಂಡವನ್ನು ಫೈನಲ್ನತ್ತ ಮುನ್ನಡೆಸಿದ್ದ ಪಾಂಡ್ಯ ಇದಕ್ಕಿದಂತೆ ಗುಜರಾತ್ ತಂಡವನ್ನು ತೊರೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಇತ್ತ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ಹಾರ್ದಿಕ್ ಪಾಂಡ್ಯಗೆ ತಂಡದ ನಾಯಕತ್ವವನ್ನು ನೀಡಲಾಯಿತು. ಯಶಸ್ವಿ ನಾಯಕ ರೋಹಿತ್ ಶರ್ಮಾರನ್ನು ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ಹಸ್ತಾಂತರಿಸಿದಕ್ಕೆ ರೋಹಿತ್ ಅಭಿಮಾನಿಗಳು ಮುಂಬೈ ಪ್ರಾಂಚೈಸಿ ವಿರುದ್ಧ ಕಿಡಿಕಾರಿದ್ದರು

ಆದರೆ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಏಕೆ ತೊರೆದರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಪೂರಕವಾಗಿ ಪಾಂಡ್ಯ ತಂಡವನ್ನು ತೊರೆದಿದ್ದು ಏಕೆ ಎಂಬುದಕ್ಕೆ ಗುಜರಾತ್ ಫ್ರಾಂಚೈಸಿಯಾಗಲಿ ಅಥವಾ ತಂಡದ ಕೋಚ್ ಆಶಿಸ್ ನೆಹ್ರಾ ಆಗಲಿ ಯಾವುದೇ ಹೇಳಿಕೆ ನೀಡಿರಲಿಲ್ಲ.

ಆದರೀಗ ಐಪಿಎಲ್ ಆರಂಭಕ್ಕೂ ಮುನ್ನ ಪಾಂಡ್ಯ ತಂಡವನ್ನು ತೊರೆದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಕೋಚ್ ಆಶಿಸ್ ನೆಹ್ರಾ, ಹಾರ್ದಿಕ್ರನ್ನು ತಂಡದಲ್ಲಿಯೇ ಉಳಿಯುವಂತೆ ನಾನು ಎಂದಿಗೂ ಮನವೊಲಿಸುವ ಕೆಲಸ ಮಾಡಲಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ನೆಹ್ರಾ, ‘ನಾನು ಹಾರ್ದಿಕ್‌ಗೆ ಮನವೊಲಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಆಟವು ಪ್ರಗತಿಯಲ್ಲಿರುವ ರೀತಿಯಲ್ಲಿ ಆಟಗಾರರು ಪ್ರಸ್ತುತ ತಂಡವನ್ನು ತೊರೆದು ಬೇರೆ ತಂಡವನ್ನು ಸೇರಿಕೊಳ್ಳುವುದು ಸರ್ವೆ ಸಾಮಾನ್ಯ ಆಟಗಾರರ ಈ ರೀತಿಯ ನಡೆಯನ್ನು ನಾವು ಫುಟ್ಬಾಲ್ನಲ್ಲಿ ನೋಡಬಹುದು.

ಹೀಗಾಗಿ ನಾವು ಹಾರ್ದಿಕ್‌ಗೆ ಗುಜರಾತ್ ತಂಡದಲ್ಲಿ ಇರುವಂತೆ ನಾವು ಮನವೊಲಿಸುವ ಕೆಲಸ ಮಾಡಲಿಲ್ಲ. ಅವರು ಹೋಗಬೇಕೆಂದು ಬಯಸಿದ್ದರು ಮತ್ತು ಹೋದರು ಎಂದು ಆಶಿಶ್ ನೆಹ್ರಾ ಸ್ಪಷ್ಟವಾಗಿ ಹೇಳಿದ್ದಾರೆ. ಇದರರ್ಥ ಪಾಂಡ್ಯ ಒಬ್ಬರಿಂದ ತಂಡ ಯಶಸ್ಸಿನತ್ತ ಸಾಗಲಿಲ್ಲ ಎಂಬುದು ನೆಹ್ರಾ ಅವರ ಮಾತಿನಿಂದ ಸ್ಪಷ್ಟವಾದಂತ್ತಾಗಿದೆ.