- Kannada News Photo gallery Cricket photos IPL 2024 Gujarat Titans uncapped wicketkeeper batter Robin Minz ruled out of IPL 2024
IPL 2024: ಗುಜರಾತ್ಗೆ ಮತ್ತೊಂದು ಬಿಗ್ ಶಾಕ್; 3.6 ಕೋಟಿಯ ಪ್ಲೇಯರ್ ಐಪಿಎಲ್ನಿಂದ ಔಟ್..!
IPL 2024: ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಎದುರಾಗಿರುವಷ್ಟು ಸಂಕಷ್ಟ ಮತ್ತ್ತ್ಯಾವ ತಂಡಕ್ಕೂ ಆಗಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್ ಕ್ರಿಕೆಟಿಗರ ಅಲಭ್ಯತೆಯಿಂದ ಬಳಲುತ್ತಿರುವ ತಂಡಕ್ಕೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ತಂಡದ ಯುವ ಆಟಗಾರ ರಾಬಿನ್ ಮಿಂಜ್ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
Updated on: Mar 16, 2024 | 6:36 PM

ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಎದುರಾಗಿರುವಷ್ಟು ಸಂಕಷ್ಟ ಮತ್ತ್ತ್ಯಾವ ತಂಡಕ್ಕೂ ಆಗಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್ ಕ್ರಿಕೆಟಿಗರ ಅಲಭ್ಯತೆಯಿಂದ ಬಳಲುತ್ತಿರುವ ತಂಡಕ್ಕೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ತಂಡದ ಯುವ ಆಟಗಾರ ರಾಬಿನ್ ಮಿಂಜ್ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಕೆಲವು ದಿನಗಳ ಹಿಂದೆ ಬೈಕ್ ಅಪಘಾತಕ್ಕೀಡಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಮಿಂಜ್ ಚೇತರಿಕೆಯ ಹಾದಿಯಲ್ಲಿದ್ದರು. ಆದರೀಗ ರಾಬಿನ್ ಮಿಂಜ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ತಂಡದ ಮುಖ್ಯ ಕೋಚ್ ಆಶಿಷ್ ನೆಹ್ರಾ, ರಾಬಿನ್ ಲೀಗ್ನಿಂದ ಹೊರಬಿದ್ದಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ, ಇದು ರಾಬಿನ್ ಮಿಂಜ್ಗೆ ಚೊಚ್ಚಲ ಐಪಿಎಲ್ ಆಗಿದೆ. ಆದರೆ ದುರದೃಷ್ಟವಶಾತ್ ಅವರನ್ನು ತಂಡದಿಂದ ಕೈಬಿಡಬೇಕಾಯಿತು ಎಂದಿದ್ದಾರೆ.

ಈ ಬಾರಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಈ ಯುವ ವಿಕೆಟ್ಕೀಪರ್ ಬ್ಯಾಟ್ಸ್ಮನ್ನನ್ನು ಗುಜರಾತ್ ಟೈಟಾನ್ಸ್ ತಂಡ 3.60 ಕೋಟಿ ರೂ. ನೀಡಿ ಖರೀದಿಸಿತ್ತು. ದೇಶೀ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಬಿನ್ಗೆ ಐಪಿಎಲ್ನ ಭಾಗ್ಯದ ಬಾಗಿಲು ತೆರೆದಿತ್ತು. ಆದರೀಗ ಐಪಿಎಲ್ಗೆ ಪದಾರ್ಪಣೆ ಮಾಡುವ ರಾಬಿನ್ ಕನಸು ಇನ್ನು ಕನಸಾಗೆ ಉಳಿಯಲಿದೆ.

ರಾಬಿನ್ ಮಿಂಜ್ ತಂಡದಿಂದ ಹೊರಗುಳಿಯುವುದರ ಜೊತೆಗೆ ಗುಜರಾತ್ ತಂಡಕ್ಕೆ ಸಾಕಷ್ಟು ಹಿನ್ನಡೆಯುಂಟಾಗಿದೆ. ಏಕೆಂದರೆ ಈಗಾಗಲೇ ತಂಡ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಕಳೆದುಕೊಂಡಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಸದ್ಯ ಚೇತರಿಕೆಯ ಹಾದಿಯಲ್ಲಿದ್ದು, ಅವರು ಈ ಬಾರಿಯ ಐಪಿಎಲ್ನಿಂದ ಹೊರಬಿದ್ದಿದ್ದಾರೆ.

ಅವರಲ್ಲದೆ ತಂಡದ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಕೂ ಲೀಗ್ನ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಇದೆ. ಇದೆಲ್ಲದ್ದಕ್ಕೂ ಮಿಗಿಲಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಹೀಗಾಗಿ ತಂಡದ ನಾಯಕತ್ವವಹಿಸಿಕೊಂಡಿರುವ ಯುವ ಆಟಗಾರ ಶುಭ್ಮನ್ ಗಿಲ್, ಸ್ಟಾರ್ ಆಟಗಾರರ ಅಲಭ್ಯತೆಯ ನಡುವೆ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.




