
ಐಪಿಎಲ್ ಮಿನಿ ಹರಾಜಿಗಾಗಿ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಡಿ.19) ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯಲಿರುವ ಆಕ್ಷನ್ನಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಆದರೆ ಇವರಲ್ಲಿ ಅವಕಾಶ ಸಿಗಲಿರುವುದು ಕೇವಲ 77 ಆಟಗಾರರಿಗೆ ಮಾತ್ರ.

ಅಂದರೆ 10 ತಂಡಗಳಲ್ಲಿ ಕೇವಲ 77 ಸ್ಲಾಟ್ಗಳು ಮಾತ್ರ ಖಾಲಿಯಿವೆ. ಹೀಗಾಗಿ 333 ಪ್ಲೇಯರ್ಗಳಲ್ಲಿ ಎಪ್ಪತ್ತೇಳು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಅದರಂತೆ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ...

1- ಚೆನ್ನೈ ಸೂಪರ್ ಕಿಂಗ್ಸ್ (CSK): ಈ ಬಾರಿಯ ಹರಾಜಿನಲ್ಲಿ ಸಿಎಸ್ಕೆ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

2- ಗುಜರಾತ್ ಟೈಟಾನ್ಸ್ (GT): ಗುಜರಾತ್ ಟೈಟಾನ್ಸ್ ತಂಡಕ್ಕೆ ಒಟ್ಟು 8 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇದರಲ್ಲಿ 6 ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು.

3- ಕೋಲ್ಕತ್ತಾ ನೈಟ್ ರೈಡರ್ಸ್ (KKR): ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಖಾಲಿಯಿರುವ ಸ್ಲಾಟ್ಗಳ ಸಂಖ್ಯೆ 12. ಈ ಸ್ಥಾನಗಳಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರನ್ನು ಖರೀದಿಸಬಹುದು.

4- ಸನ್‌ರೈಸರ್ಸ್ ಹೈದರಾಬಾದ್ (SRH): ಎಸ್ಆರ್ಹೆಚ್ ತಂಡದಲ್ಲಿ 6 ಸ್ಥಾನಗಳು ಖಾಲಿಯಿವೆ. ಈ ಸ್ಲಾಟ್ಗಳಲ್ಲಿ ಮೂವರು ಭಾರತೀಯರು ಹಾಗೂ ಮೂವರು ವಿದೇಶಿ ಆಟಗಾರರನ್ನು ಖರೀದಿಸಬಹುದು.

5- ಮುಂಬೈ ಇಂಡಿಯನ್ಸ್ (MI): ಇಂಡಿಯನ್ಸ್ ತಂಡವು ಒಟ್ಟು 8 ಸ್ಲಾಟ್ಗಳನ್ನು ಹೊಂದಿದೆ. ಇದರಲ್ಲಿ ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

6- ಲಕ್ನೋ ಸೂಪರ್ ಜೈಂಟ್ಸ್ (LSG): ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಒಟ್ಟು 6 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಲ್ಲಿ ನಾಲ್ವರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು.

7- ರಾಜಸ್ಥಾನ್ ರಾಯಲ್ಸ್ (RR): ಆರ್ಆರ್ ತಂಡದಲ್ಲಿ ಖಾಲಿಯಿರುವ ಸ್ಲಾಟ್ಗಳ ಸಂಖ್ಯೆ 8. ಇದರಲ್ಲಿ ಮೂವರು ವಿದೇಶಿ ಹಾಗೂ 5 ಭಾರತೀಯ ಆಟಗಾರರಿಗೆ ಅವಕಾಶ ನೀಡಬಹುದು.

8- ಡೆಲ್ಲಿ ಕ್ಯಾಪಿಟಲ್ಸ್ (DC): ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 9 ಸ್ಲಾಟ್ಗಳನ್ನು ಹೊಂದಿದ್ದು, ಇದರಲ್ಲಿ 4 ವಿದೇಶಿ ಮತ್ತು ಐವರು ಭಾರತೀಯ ಆಟಗಾರರನ್ನು ಖರೀದಿಸಬಹುದು.

9- ಪಂಜಾಬ್ ಕಿಂಗ್ಸ್ (PBKS): ಪಂಜಾಬ್ ತಂಡದಲ್ಲಿ ಒಟ್ಟು 8 ಸ್ಥಾನಗಳು ಖಾಲಿಯಿದೆ. ಈ ಸ್ಲಾಟ್ಗಳಲ್ಲಿ ಇಬ್ಬರು ವಿದೇಶಿ ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

10- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಆರ್ಸಿಬಿ ತಂಡಕ್ಕೆ ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಈ ಆರು ಸ್ಲಾಟ್ಗಳಲ್ಲಿ 3 ವಿದೇಶಿ ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದು.