IPL 2024: ಐಪಿಎಲ್ ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಅವಕಾಶ?
TV9 Web | Updated By: ಝಾಹಿರ್ ಯೂಸುಫ್
Updated on:
Dec 02, 2023 | 11:30 PM
IPL 2024 Auction: ಐಪಿಎಲ್ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ.
1 / 7
ವರ್ಣರಂಜಿತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಹದಿನೇಳರ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಮುಂಬರುವ ಐಪಿಎಲ್ಗಾಗಿ 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಎಲ್ಲಾ ಆಟಗಾರರ ಹೆಸರು ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.
2 / 7
ಏಕೆಂದರೆ ಈ ಬಾರಿ ನಡೆಯುತ್ತಿರುವುದು ಮಿನಿ ಹರಾಜು. ಐಪಿಎಲ್ನಲ್ಲಿ ಮೂರು ವರ್ಷಕ್ಕೊಮ್ಮೆ ಮೆಗಾ ಹರಾಜು ನಡೆದರೆ, ಉಳಿದ 2 ವರ್ಷಗಳಲ್ಲಿ ಮಿನಿ ಹರಾಜನ್ನು ನಡೆಸಲಾಗುತ್ತದೆ. ಅಂದರೆ ಇಲ್ಲಿ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗಾಗಿ ಹರಾಜು ನಡೆಯಲಿದೆ.
3 / 7
ಇದಕ್ಕಾಗಿ ಸದ್ಯ ಹೆಸರು ನೋಂದಾಯಿಸಿಕೊಂಡಿರುವ 1166 ಆಟಗಾರರಿಂದ ಶಾರ್ಟ್ ಲೀಸ್ಟ್ ಮಾಡಲಾಗುತ್ತದೆ. ಇದಾದ ಬಳಿಕ ಖಾಲಿಯಿರುವ ಸ್ಥಾನಗಳಿಗೆ ಹರಾಜು ನಡೆಯಲಿದೆ.
4 / 7
ಅದರಂತೆ ಈ ಬಾರಿ 10 ತಂಡಗಳು ಒಟ್ಟು 173 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಇನ್ನುಳಿದಿರುವ 77 ಆಟಗಾರರ ಸ್ಥಾನಗಳಿಗಾಗಿ ಐಪಿಎಲ್ ಬಿಡ್ಡಿಂಗ್ ನಡೆಯಲಿದೆ.
5 / 7
30 ವಿದೇಶಿ ಆಟಗಾರರು: ಪ್ರಸ್ತುತ 10 ತಂಡಗಳಲ್ಲಿ 50 ವಿದೇಶಿ ಆಟಗಾರರು ರಿಟೈನ್ ಆಗಿದ್ದಾರೆ. ಹೀಗಾಗಿ 77 ಆಟಗಾರರಲ್ಲಿ ಕೇವಲ 30 ವಿದೇಶಿ ಪ್ಲೇಯರ್ಸ್ಗೆ ಚಾನ್ಸ್ ಸಿಗಲಿದೆ. ಹಾಗೆಯೇ 47 ಭಾರತೀಯ ಆಟಗಾರರಿಗೆ ಅವಕಾಶ ಸಿಗಬಹುದು.
6 / 7
17+8 ನಿಮಯ: ಐಪಿಎಲ್ನ ಒಂದು ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದರಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಹೀಗಾಗಿ ಪ್ರತಿ ತಂಡಗಳು 17+8 ಆಟಗಾರರ ಲೆಕ್ಕಚಾರದೊಂದಿಗೆ ಬಿಡ್ಡಿಂಗ್ ನಡೆಸಲಿದೆ.
7 / 7
18 ಆಟಗಾರರು ಕಡ್ಡಾಯ: ಐಪಿಎಲ್ನ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್ನ ಯಾವುದೇ ತಂಡ ಹರಾಜಿನ ಬಳಿಕ 18 ಆಟಗಾರರಿಗಿಂತ ಕಡಿಮೆ ಪ್ಲೇಯರ್ಸ್ನ ಹೊಂದುವಂತಿಲ್ಲ. ಆದರೆ ಇಲ್ಲಿ ಗರಿಷ್ಠ 25 ಆಟಗಾರರು ಇರಬೇಕಿರುವುದು ಕಡ್ಡಾಯವಲ್ಲ. ಅಂದರೆ 18 ಮತ್ತು 25 ರೊಳಗೆ ಎಷ್ಟು ಆಟಗಾರರನ್ನು ಬೇಕಿದ್ದರೂ ಹೊಂದಬಹುದು.