IPL 2024: 9 ಕೋಟಿಯಿಂದ 40 ಲಕ್ಷ ರೂ.ಗೆ ಬಂದ ಪಂಜಾಬ್ ಆಟಗಾರ..!
IPL 2024 Auction: ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು 1,166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಿದ್ದು, ಆ ಬಳಿಕ ಫೈನಲ್ ಆಕ್ಷನ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
Updated on: Dec 02, 2023 | 7:15 PM

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಳ್ಳುತ್ತಿದೆ. ಈ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಪ್ಲೇಯರ್ಸ್ ಹೆಸರು ಮುಂಚೂಣಿಯಲ್ಲಿದೆ. ಇವರುಗಳ ನಡುವೆ ಇದೀಗ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಶಾರೂಖ್ ಖಾನ್.

ಹೌದು, ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಖಾಯಂ ಸದಸ್ಯರಾಗಿದ್ದ ಶಾರೂಖ್ ಖಾನ್ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಕೇವಲ 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಎಂಬುದೇ ಅಚ್ಚರಿ.

2021 ರಲ್ಲಿ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಶಾರೂಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 5.25 ಕೋಟಿ ರೂ.ಗೆ ಖರೀದಿಸಿತ್ತು. ಇದಾದ ಬಳಿಕ 2022 ರಲ್ಲಿ ಶಾರೂಖ್ ಮತ್ತೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.

2022ರ ಹರಾಜಿನಲ್ಲಿ ಶಾರೂಖ್ ಖಾನ್ ಖರೀದಿಗೆ ಹಲವು ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಿದ್ದವು. ಇದಾಗ್ಯೂ 9 ಕೋಟಿ ರೂ. ನೀಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡವೇ ಯುವ ಹೊಡಿಬಡಿ ದಾಂಡಿಗನನ್ನು ತನ್ನದಾಗಿಸಿಕೊಂಡಿತು.

ಇದೀಗ 2 ವರ್ಷಗಳ ಬಳಿಕ ಶಾರೂಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ 9 ಕೋಟಿಗೆ ಬಿಕರಿಯಾಗಿದ್ದ ಆಟಗಾರ ಈ ಬಾರಿ ಕೇವಲ 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಮತ್ತೆ ಕೋಟಿ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಲ್ಲಿದ್ದಾರೆ.



















