IPL 2024 Auction: ಭರ್ಜರಿ ಮೊತ್ತಕ್ಕೆ ಹರಾಜಾದ ಟ್ರಾವಿಸ್ ಹೆಡ್

| Updated By: ಝಾಹಿರ್ ಯೂಸುಫ್

Updated on: Dec 19, 2023 | 1:44 PM

IPL 2024 Travis Head: ಟ್ರಾವಿಸ್ ಹೆಡ್ ಐಪಿಎಲ್​ಗೆ ಆಯ್ಕೆಯಾಗುತ್ತಿರುವುದು ಇದು 2ನೇ ಬಾರಿ. ಈ ಹಿಂದೆ 2016-17 ರ ಸೀಸನ್​ನಲ್ಲಿ ಹೆಡ್ ಆರ್​ಸಿಬಿ ಪರ ಕಣಕ್ಕಿಳಿದಿದ್ದರು.

1 / 6
ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್​ಮನ್ ಟ್ರಾವಿಸ್ ಹೆಡ್ ಬರೋಬ್ಬರಿ 6.80 ಕೋಟಿ ರೂ.ಗೆ ಹರಾಜಾಗಿದ್ದಾರೆ. ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಹೆಡ್​ ಖರೀದಿಗೆ ಹಲವು ಫ್ರಾಂಚೈಸಿಗಳು ಮುಂದಾಗಿದ್ದವು.

2 / 6
ಪರಿಣಾಮ ಕ್ಷಣಾರ್ಧದಲ್ಲೇ ಟ್ರಾವಿಸ್ ಅವರ ಮೌಲ್ಯವು 5 ಕೋಟಿ ರೂ. ದಾಟಿತು. ಇದಾಗ್ಯೂ ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಆಸ್ಟ್ರೇಲಿಯಾ ಆಟಗಾರನಿಗಾಗಿ ಭರ್ಜರಿ ಪೈಪೋಟಿ ನಡೆಸಿದ್ದವು.

3 / 6
ಆದರೆ ಅಂತಿಮವಾಗಿ ಬರೋಬ್ಬರಿ 6.80 ಕೋಟಿ ರೂ. ನೀಡುವ ಮೂಲಕ ಸನ್​ರೈಸರ್ಸ್ ಹೈದರಾಬಾದ್​ ತಂಡವು ಟ್ರಾವಿಸ್ ಹೆಡ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ಎಡಗೈ ದಾಂಡಿಗ ಹೆಡ್ ಎಸ್​ಆರ್​ಹೆಚ್​ ಪರ ಕಣಕ್ಕಿಳಿಯಲಿದ್ದಾರೆ.

4 / 6
ಈ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿಯೇ ಹೆಡ್ ಅವರ ಆಯ್ಕೆಗೆ ಹೆಚ್ಚಿನ ಫ್ರಾಂಚೈಸಿಗಳು ಒಲವು ಹೊಂದಿದ್ದವು. ಅದರಂತೆ ಇದೀಗ ಟ್ರಾವಿಸ್ ಹೆಡ್ ಅವರನ್ನು ತಮ್ಮದಾಗಿಸಿಕೊಳ್ಳಲು SRH ಯಶಸ್ವಿಯಾಗಿದೆ.

5 / 6
ಅಂದಹಾಗೆ ಟ್ರಾವಿಸ್ ಹೆಡ್ ಐಪಿಎಲ್​ಗೆ ಆಯ್ಕೆಯಾಗುತ್ತಿರುವುದು ಇದು 2ನೇ ಬಾರಿ. ಈ ಹಿಂದೆ 2016-17 ರ ಸೀಸನ್​ನಲ್ಲಿ ಹೆಡ್ ಆರ್​ಸಿಬಿ ಪರ ಕಣಕ್ಕಿಳಿದಿದ್ದರು. ಇದೀಗ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಮೂಲಕ ಮತ್ತೆ ಐಪಿಎಲ್​ಗೆ ಮರಳಲಿದ್ದಾರೆ.

6 / 6
ಸನ್​ರೈಸರ್ಸ್​ ಹೈದರಾಬಾದ್ ತಂಡ: ಐಡೆನ್ ಮಾರ್ಕ್ರಾಮ್, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ, ಸಂವಿರ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್, ಅಬ್ದುಲ್ ಸಮದ್, ಅನ್ಮೋಲ್‌ಪ್ರೀತ್ ಸಿಂಗ್, ಗ್ಲೆನ್ ಫಿಲಿಪ್ಸ್, ಫಝಲ್‌ಹಕ್ ಫಾರೂಕಿ, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಹೆನ್ರಿಕ್ ಕ್ಲಾಸೆನ್, ಉಪೇಂದ್ರ ಸಿಂಗ್ ಯಾದವ್, ಟ್ರಾವಿಸ್ ಹೆಡ್.

Published On - 1:36 pm, Tue, 19 December 23