IPL 2024: ಸಿಎಸ್ಕೆಗೆ ಬಂತು ಆನೆ ಬಲ; ಸ್ಟಾರ್ ವೇಗಿ ಇಂಜುರಿಯಿಂದ ಗುಣಮುಖ
IPL 2024: 2024 ರ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದರಂತೆ ಕೆಲವು ದಿನಗಳ ಹಿಂದೆ ಗಾಯಗೊಂಡಿದ್ದ ತಂಡದ ಸ್ಟಾರ್ ವೇಗಿ ಮತಿಶ ಪತಿರಾನ ಫಿಟ್ ಎಂದು ವರದಿಯಾಗಿದೆ.
1 / 7
2024 ರ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದರಂತೆ ಕೆಲವು ದಿನಗಳ ಹಿಂದೆ ಗಾಯಗೊಂಡಿದ್ದ ತಂಡದ ಸ್ಟಾರ್ ವೇಗಿ ಮತಿಶ ಪತಿರಾನ ಫಿಟ್ ಎಂದು ವರದಿಯಾಗಿದೆ.
2 / 7
ವಾಸ್ತವವಾಗಿ ಮತಿಶ ಪತಿರಾನ ಇಂಜುರಿಯಿಂದಾಗಿ ಇಡೀ ಲೀಗ್ನಿಂದಲೇ ಹೊರಗುಳಿಯಲ್ಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈಗ ಈ ಆಟಗಾರ ಫಿಟ್ ಆಗಿದ್ದು, ಐಪಿಎಲ್ಗೆ ಲಭ್ಯರಿರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದು ಸಿಎಸ್‌ಕೆ ತಂಡಕ್ಕೆ ಕೊಂಚ ನಿರಾಳತೆ ತಂದಿದೆ.
3 / 7
ವೇಗದ ಬೌಲರ್ ಮತಿಶ ಪತಿರಾನ ಅವರ ಇಂಜುರಿಯ ಅಪ್ಡೇಟ್ ನೀಡಿರುವ ಅವರ ಮ್ಯಾನೇಜರ್ ಅಮಿಲ ಕಲುಗಗಲೆ ಅವರು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪತಿರಾನ ಫಿಟ್ ಆಗಿದ್ದು, ಕ್ರಿಕೆಟ್ಗೆ ಮರಳಲು ಸಿದ್ಧರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
4 / 7
ಇತ್ತೀಚೆಗೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಏಕದಿನ ಸರಣಿ ನಡೆದಿತ್ತು. ಈ ಸರಣಿಯ ಪಂದ್ಯವೊಂದರಲ್ಲಿ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಪತಿರಾನಾಗೆ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯವನ್ನು ಆಡಲಾಗಲಿಲ್ಲ.
5 / 7
ಆದರೆ ಈಗ ಪೂರ್ಣ ಫಿಟ್ ಆಗಿರುವ ಪತಿರಾನ ಶ್ರೀಲಂಕಾ ಕ್ರಿಕೆಟ್‌ನ ಅನುಮತಿಯ ನಂತರವೇ ಸಿಎಸ್‌ಕೆ ಶಿಬಿರವನ್ನು ಸೇರುವ ನಿರೀಕ್ಷೆಯಿದೆ. ಆದಾಗ್ಯೂ, ಪತಿರಾನ ಅವರು ಪಂದ್ಯಾವಳಿಯ 2 ಅಥವಾ 3 ಪಂದ್ಯಗಳಿಗೆ ಗೈರಾಗುವ ಸಾಧ್ಯತೆಗಳಿವೆ.
6 / 7
ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಮತಿಶ ಪತಿರಾನ ಪ್ರಮುಖ ಪಾತ್ರ ವಹಿಸಿದ್ದರು. ಆಡಿದ್ದ 12 ಪಂದ್ಯಗಳಲ್ಲಿ ಪತಿರಾನ 19 ವಿಕೆಟ್ ಪಡೆದಿದ್ದರು. ಈ ಬಾರಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಮತೀಶ ಪತಿರಾನ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
7 / 7
ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್ (ನಾಯಕ), ಮೊಯಿನ್ ಅಲಿ, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರಾಜವರ್ಧನ್ ಹಂಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಖ್ ರಶೀದ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮತಿಶ ಪತಿರಾನ, ಅವನೀಶ್ ರಾವ್ ಅರಾವಳಿ.