IPL 2024: ವಾರ್ನರ್ ಸಿಡಿಲಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..!

|

Updated on: Mar 31, 2024 | 9:46 PM

IPL 2024: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದಲ್ಲದೆ ಪ್ರಮುಖ ದಾಖಲೆಯನ್ನು ಬರೆದಿದ್ದಾರೆ.

1 / 8
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದಲ್ಲದೆ ಪ್ರಮುಖ ದಾಖಲೆಯನ್ನು ಬರೆದಿದ್ದಾರೆ.

2 / 8
ಇಂದಿನ ಪಂದ್ಯದಲ್ಲಿ ಆರಂಭಿಕರನ್ನು ಡೆಲ್ಲಿ ಬದಲಿಸಿತ್ತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ತಂಡಕ್ಕೆ 93 ರನ್​ಗಳ ಜೊತೆಯಾಟ ನೀಡಿದರು. ಈ ವೇಳೆ ವಾರ್ನರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 6500 ರನ್ ಪೂರೈಸಿದ ದಾಖಲೆ ಕೂಡ ನಿರ್ಮಿಸಿದರು.

3 / 8
ಮೊದಲ 4 ಓವರ್‌ಗಳಲ್ಲಿ ವಾರ್ನರ್ ಮತ್ತು ಶಾ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಇದಾದ ಬಳಿಕ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಗೇರ್ ಬದಲಿಸಿ ಸಿಎಸ್‌ಕೆ ಬೌಲರ್‌ಗಳನ್ನು ಪುಡಿಪುಡಿ ಮಾಡಿದರು. ಪಂದ್ಯದಲ್ಲಿ 25 ರನ್ ಗಳಿಸಿದ ನಂತರ, ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 6500 ರನ್ ಪೂರೈಸಿದರು.

4 / 8
ಈ ಮೂಲಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ನಂತರ ಐಪಿಎಲ್‌ನಲ್ಲಿ 6500 ರನ್ ಪೂರೈಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

5 / 8
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ 240 ಪಂದ್ಯಗಳ 232 ಇನ್ನಿಂಗ್ಸ್‌ಗಳಲ್ಲಿ 7444 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿಖರ್ ಧವನ್ 220 ಪಂದ್ಯಗಳ 219 ಇನ್ನಿಂಗ್ಸ್‌ಗಳಲ್ಲಿ 6754 ರನ್ ಗಳಿಸಿದ್ದಾರೆ.

6 / 8
ಇದಲ್ಲದೆ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವಾರ್ನರ್​ಗೆ ಟಿ20 ಮಾದರಿಯಲ್ಲಿ ಇದು 110ನೇ ಅರ್ಧಶತಕವಾಗಿತ್ತು. ಈ ಮೂಲಕ ವಾರ್ನರ್ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್​ ದಾಖಲೆಯನ್ನು ಸರಿಗಟ್ಟಿದ್ದಾರೆ.

7 / 8
ವಾರ್ನರ್​ಗೂ ಮುನ್ನ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗೇಲ್ ಟಿ20 ಮಾದರಿಯಲ್ಲಿ ಆಡಿದ್ದ 455 ಇನ್ನಿಂಗ್ಸ್​ಗಳಲ್ಲಿ 110 ಅರ್ಧಶತಕ ಬಾರಿಸಿದ್ದರು. ಆದರೆ ವಾರ್ನರ್ 372 ಇನ್ನಿಂಗ್ಸ್​ಗಳಲ್ಲಿ 110 ಅರ್ಧಶತಕ ಪೂರೈಸುವ ಮೂಲ, ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.

8 / 8
ಅಂತಿಮವಾಗಿ ತಮ್ಮ ಇನ್ನಿಂಗ್ಸ್​ನಲ್ಲಿ 35 ಎಸೆತಗಳನ್ನು ಎದುರಿಸಿದ ವಾರ್ನರ್ 148.57 ಸ್ಟ್ರೈಕ್ ರೇಟ್‌ನಲ್ಲಿ 52 ರನ್ ಕಲೆಹಾಕಿದರು. ಈ ವೇಳೆ ಅವರು 5 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಬಾರಿಸಿದರು. ಇದು ಐಪಿಎಲ್ ವೃತ್ತಿ ಜೀವನದಲ್ಲಿ ವಾರ್ನರ್​ ಅವರ 62ನೇ ಅರ್ಧಶತಕವಾಗಿದೆ.