
ಐಪಿಎಲ್ 2024 ರ 36ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸುತ್ತಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇತಿಹಾಸ ನಿರ್ಮಿಸಿದ್ದಾರೆ.

2008 ರಲ್ಲಿ ಡೆಲ್ಲಿ ಡೇರ್ಡೇವಿಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ ಕಾರ್ತಿಕ್ಗೆ ಈ ಪಂದ್ಯ ಅವರ ವೃತ್ತಿ ಜೀವನದ 250ನೇ ಪಂದ್ಯವಾಗಿದೆ. ಇದರೊಂದಿಗೆ ಕಾರ್ತಿಕ್ ಜಂಟಿಯಾಗಿ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಇವರಲ್ಲದೆ ರೋಹಿತ್ ಶರ್ಮಾ ಕೂಡ ಲೀಗ್‌ನಲ್ಲಿ 250 ಪಂದ್ಯಗಳನ್ನು ಆಡಿದ್ದು, ಕಾರ್ತಿಕ್ ಜೊತೆಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಇದುವರೆಗೆ 257 ಪಂದ್ಯಗಳನ್ನು ಆಡಿದ್ದಾರೆ.

ಈ ಮೂವರನ್ನು ಬಿಟ್ಟರೆ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 3ನೇ, ರವೀಂದ್ರ ಜಡೇಜಾ 4ನೇ, ಶಿಖರ್ ಧವನ್ 5ನೇ, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ 6ನೇ, ಅಂಬಟಿ ರಾಯುಡು 7ನೇ, ರವಿಚಂದ್ರನ್ ಅಶ್ವಿನ್ 8ನೇ, ಕೀರಾನ್ ಪೊಲಾರ್ಡ್ 9ನೇ ಮತ್ತು ಪಿಯೂಷ್ ಚಾವ್ಲಾ 10ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2024 ರಲ್ಲಿ ದಿನೇಶ್ ಕಾರ್ತಿಕ್ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳಲ್ಲಿ ಕಾರ್ತಿಕ್ 226 ರನ್ ಬಾರಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳೂ ಸೇರಿವೆ. ಕಾರ್ತಿಕ್ ಅವರ ಪ್ರದರ್ಶನವನ್ನು ನೋಡಿದರೆ, ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಊಹಾಪೋಹಗಳಿವೆ.

ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ... ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಮತ್ತು ಫಿಲ್ ಸಾಲ್ಟ್, ರಮಣದೀಪ್ ಸಿಂಗ್ ಅವರ ಅಬ್ಬರದ ಇನ್ನಿಂಗ್ಸ್‌ನ ನೆರವಿನಿಂದ ಆರ್‌ಸಿಬಿಗೆ 223 ರನ್‌ಗಳ ಗುರಿಯನ್ನು ನೀಡಿದೆ.