IPL 2024: ಮೋದಿ ಮೈದಾನದಲ್ಲಿ ಆರ್‌ಸಿಬಿ- ರಾಜಸ್ಥಾನ್ ಪ್ರದರ್ಶನ ಹೇಗಿದೆ ಗೊತ್ತಾ?
IPL 2024: ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸ್ಟೇಡಿಯಂನಲ್ಲಿ ಎರಡೂ ತಂಡಗಳು ಹೇಗೆ ಪ್ರದರ್ಶನ ನೀಡಿವೆ ಎಂಬುದನ್ನು ನೋಡುವುದಾದರೆ..
1 / 6
17ನೇ ಆವೃತ್ತಿಯ ಐಪಿಎಲ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮುಗಿದಿವೆ. ಇದೀಗ ಪ್ಲೇಆಫ್‌ಗಳು ಆರಂಭವಾಗಿದ್ದು, ಮಂಗಳವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟೇಬಲ್ ಟಾಪರ್ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ.
2 / 6
ಇದಾದ ಬಳಿಕ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
3 / 6
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೇಗೆ ಪ್ರದರ್ಶನ ನೀಡಿವೆ ಎಂಬುದನ್ನು ನೋಡುವುದಾದರೆ.. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ 15 ಪಂದ್ಯಗಳನ್ನು ಆಡಿದೆ.
4 / 6
ಈ 15 ಪಂದ್ಯಗಳಲ್ಲಿ ತಂಡ 9ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಒಂದು ಪಂದ್ಯ ಟೈ ಆಗಿದ್ದು, ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿತ್ತು. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೇಳೆ ರಾಜಸ್ಥಾನ 4 ಪಂದ್ಯಗಳಲ್ಲಿ ಗೆದ್ದಿದ್ದರೆ, ಗುರಿ ಬೆನ್ನಟ್ಟುವಾ್ 5 ಪಂದ್ಯಗಳನ್ನು ಗೆದ್ದಿದೆ. ಈ ಮೈದಾನದಲ್ಲಿ ತಂಡದ ಗರಿಷ್ಠ ಸ್ಕೋರ್ 201 ರನ್ ಆಗಿದ್ದರೆ, ಕಡಿಮೆ ಮೊತ್ತ 102 ರನ್ ಆಗಿದೆ.
5 / 6
ಇನ್ನು ಇದೇ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಹೇಗೆ ಎಂಬುದನ್ನು ನೋಡುವುದಾದರೆ.. ಆರ್‌ಸಿಬಿ ಈ ಮೈದಾನದಲ್ಲಿ ಇದುವರೆಗೆ ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದೆ. ಇದರಲ್ಲಿ ತಂಡ 3ರಲ್ಲಿ ಜಯಗಳಿಸಿದ್ದು, 2ರಲ್ಲಿ ಸೋಲನುಭವಿಸಿದೆ.
6 / 6
ಈ ಮೈದಾನದಲ್ಲಿ ಆರ್‌ಸಿಬಿ 1 ಪಂದ್ಯವನ್ನು ಮೊದಲು ಬ್ಯಾಟಿಂಗ್ ಮಾಡಿದ ಸಂದರ್ಭದಲ್ಲಿ ಮತ್ತು 2 ಪಂದ್ಯಗಳನ್ನು ಚೇಸಿಂಗ್‌ನಲ್ಲಿ ಗೆದ್ದಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಗರಿಷ್ಠ ಸ್ಕೋರ್ 206 ರನ್ ಆಗಿದ್ದರೆ, ಕಡಿಮೆ ಸ್ಕೋರ್ 145 ರನ್ ಆಗಿದೆ.
Published On - 7:56 pm, Tue, 21 May 24