IPL 2024: ಆರ್ಸಿಬಿಗೆ ಮತ್ತೊಂದು ಶಾಕ್; ನಾಯಕ ಫಾಫ್ಗೆ ದಂಡದ ಬರೆ ಎಳೆದ ಬಿಸಿಸಿಐ..!
IPL 2024: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಂದ್ಯದ ಬಳಿಕ ಸ್ಲೋ ಓವರ್ ರೇಟ್‌ಗಾಗಿ ಬಿಸಿಸಿಐ ಫಾಫ್ ಡು ಪ್ಲೆಸಿಸ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇವರಲ್ಲದೆ ಅಂಪೈರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಸ್ಯಾಮ್ ಕರನ್ಗೂ ಭಾರಿ ದಂಡ ವಿಧಿಸಲಾಗಿದೆ.
1 / 6
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್ಸಿಬಿಯ ಪಯಣ ಲೀಗ್ ಹಂತದಲ್ಲೇ ಮುಕ್ತಾಯಗೊಂಡಿದೆ. ನಿನ್ನೆ ನಡೆದ ಕೆಕೆಆರ್ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್ಸಿಬಿ ಒಂದೇ ಒಂದು ರನ್ಗಳಿಂದ ರೋಚಕ ಸೋಲು ಅನುಭವಿಸಿತ್ತು. ಇದರೊಂದಿಗೆ ಆರ್ಸಿಬಿ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ಕನಸಾಗೇ ಉಳಿದಿದೆ.
2 / 6
ಇದೀಗ ಲೀಗ್ ಹಂತದಲ್ಲೇ ಹೊರಬಿದ್ದ ಆಘಾತದಲ್ಲಿದ್ದ ಆರ್ಸಿಬಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ಗೆ ಬಿಸಿಸಿಐ ದಂಡ ವಿಧಿಸಿದೆ.
3 / 6
ಇವರಲ್ಲದೆ ನಿನ್ನೆ ನಡೆದ ಇನ್ನೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕರಾಗಿದ್ದ ಸ್ಯಾಮ್ ಕರನ್ ಕೂಡ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ದಂಡವನ್ನು ಪಾವತಿಸಬೇಕಾಗಿದೆ.
4 / 6
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಿಕ್ಷೆಯಾಗಿ ಕೊನೆಯ ಓವರ್ನಲ್ಲಿ 30 ಯಾರ್ಡ್ ಹೊರಗೆ 4 ಫೀಲ್ಡರ್ಗಳನ್ನು ಮಾತ್ರ ನಿಯೋಜಿಸಬೇಕಾಯಿತು. ಪಂದ್ಯದ ಬಳಿಕ ಸ್ಲೋ ಓವರ್ ರೇಟ್‌ಗಾಗಿ ಬಿಸಿಸಿಐ ಫಾಫ್ ಡು ಪ್ಲೆಸಿಸ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.
5 / 6
ಇದೀಗ ಫಾಫ್ ಡುಪ್ಲೆಸಿಸ್ ಬಿಸಿಸಿಐ ಶಿಕ್ಷೆಗೆ ಒಳಗಾಗುವ ಮೂಲಕ ಈ ಆವೃತ್ತಿಯಲ್ಲಿ ನಿಧಾನಗತಿಯ ಓವರ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶಿಕ್ಷಗೆ ಗುರಿಯಾದ ಐಪಿಎಲ್ ತಂಡಗಳ ನಾಯಕರ ಸಂಖ್ಯೆ 8ಕ್ಕೇರಿದೆ. ಫಾಫ್ಗೂ ಮುನ್ನ ಈ ದಂಡವನ್ನು ಎದುರಿಸಿದ 7 ನಾಯಕರು ಭಾರತೀಯರೇ ಆಗಿದ್ದರು.
6 / 6
ಇನ್ನು ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿದ್ದ ಸ್ಯಾಮ್ ಕರನ್ ಅಂಪೈರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ತಮ್ಮ ಪಂದ್ಯದ ಶುಲ್ಕದ 50 ಪ್ರತಿಶತವನ್ನು ದಂಡವಾಗಿ ಪಾವತಿಸಬೇಕಾಗಿದೆ.