IPL 2024: ಕೆಕೆಆರ್ ತಂಡಕ್ಕೆ ಬಿಗ್ ಶಾಕ್; ಲೀಗ್ನಿಂದಲೇ ಹೊರಬಿದ್ದ ಸ್ಟಾರ್ ಬ್ಯಾಟರ್..!
IPL 2024: 2024 ರ ಐಪಿಎಲ್ ಇದೇ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಸೀಸನ್‌ಗಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದೇ ವೇಳೆ ಎರಡು ಬಾರಿಯ ಚಾಂಪಿಯನ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಹಿನ್ನಡೆಯುಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್ ಜೇಸನ್ ರಾಯ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
1 / 5
2024 ರ ಐಪಿಎಲ್ ಇದೇ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಸೀಸನ್‌ಗಾಗಿ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದೇ ವೇಳೆ ಎರಡು ಬಾರಿಯ ಚಾಂಪಿಯನ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಹಿನ್ನಡೆಯುಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್ ಜೇಸನ್ ರಾಯ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
2 / 5
ವೈಯಕ್ತಿಕ ಕಾರಣಗಳಿಂದಾಗಿ ಜೇಸನ್ ರಾಯ್ ಐಪಿಎಲ್ 2024 ರಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಕಳೆದ ಸೀಸನ್ನಲ್ಲಿ ಜೇಸನ್ ರಾಯ್ ಬದಲಿಯಾಗಿ ತಂಡವನ್ನು ಸೇರಿಕೊಂಡಿದ್ದರು. ಕೆಕೆಆರ್ ಪರ ಎಂಟು ಪಂದ್ಯಗಳನ್ನು ಆಡಿದ್ದ ರಾಯ್ 35.63 ರ ಸರಾಸರಿಯಲ್ಲಿ ಮತ್ತು 151.60 ರ ಸ್ಟ್ರೈಕ್ ರೇಟ್‌ನಲ್ಲಿ 285 ರನ್ ಕಲೆಹಾಕಿದ್ದರು. ಅವರ ಬ್ಯಾಟ್‌ನಿಂದ ಎರಡು ಅರ್ಧಶತಕಗಳು ಸಿಡಿದಿದ್ದವು. ರಾಯ್ ಐಪಿಎಲ್‌ನಲ್ಲಿ ಒಟ್ಟು 21 ಪಂದ್ಯಗಳನ್ನು ಆಡಿದ್ದಾರೆ ಮತ್ತು 138.60 ಸ್ಟ್ರೈಕ್ ರೇಟ್‌ನಲ್ಲಿ 614 ರನ್ ಗಳಿಸಿದ್ದಾರೆ.
3 / 5
ಇದೀಗ ತಂಡದಿಂದ ಹೊರಬಿದ್ದಿರುವ ರಾಯ್ ಬದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫಿಲ್ ಸಾಲ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಫಿಲ್ ಸಾಲ್ಟ್ ಕಳೆದ ವರ್ಷ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದರು. ಆದರೆ ಈ ಬಾರಿಯ ಹರಾಜಿನಲ್ಲಿ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಆದರೆ ಇದೀಗ ಅವರು ಮತ್ತೆ ಐಪಿಎಲ್‌ಗೆ ಮರಳಿದ್ದಾರೆ.
4 / 5
ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು 1.5 ಕೋಟಿ ಮೂಲ ಬೆಲೆಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರ ಇತ್ತೀಚಿನ ಪ್ರದರ್ಶನವು ಅತ್ಯುತ್ತಮವಾಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸತತ ಎರಡು ಟಿ20 ಶತಕಗಳನ್ನು ಸಾಲ್ಟ್ ಬಾರಿಸಿದ್ದರು.
5 / 5
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಶ್ರೇಯಸ್ ಅಯ್ಯರ್, ಫಿಲ್ ಸಾಲ್ಟ್, ಸುನಿಲ್ ನರೈನ್, ಸುಯ್ಯಾಶ್ ಶರ್ಮಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕೆಎಸ್ ಭರತ್, ಚೇತನ್ ಸ್ಟಾರ್ ವನ್ ಸಕರಿಯಾ, ಚೇತನ್ ಸಕರಿಯಾ , ಶ್ರೀಕರ್ ಭರತ್, ರಮಣದೀಪ್ ಸಿಂಗ್, ಶೆರ್ಫೇನ್ ರುದರ್ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರೆಹಮಾನ್, ಗಸ್ ಅಟ್ಕಿನ್ಸನ್, ಶಾಕಿಬ್ ಹುಸೇನ್.