IPL 2024: ಯುಎಇಯಲ್ಲಿ ಈ ಬಾರಿಯ ಐಪಿಎಲ್; ಜಯ್ ಶಾ ಹೇಳಿದ್ದೇನು?
IPL 2024: ಕಳೆದ ಕೆಲವು ದಿನಗಳಿಂದ 17ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಸಂಬಂಧಿಸಿದಂತೆ ಹಬ್ಬಿದ್ದ ಗಾಳಿ ಸುದ್ದಿಗೆ ಅಂತಿಮವಾಗಿ ತೆರೆಬಿದ್ದಿದೆ. ಈ ಬಾರಿಯ ಐಪಿಎಲ್ ವಿದೇಶಿದಲ್ಲಿ ನಡೆಯಲ್ಲಿದೆ ಎಂಬ ವದಂತಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬ್ರೇಕ್ ಹಾಕಿದ್ದಾರೆ.
1 / 6
ಕಳೆದ ಕೆಲವು ದಿನಗಳಿಂದ 17ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಸಂಬಂಧಿಸಿದಂತೆ ಹಬ್ಬಿದ್ದ ಗಾಳಿ ಸುದ್ದಿಗೆ ಅಂತಿಮವಾಗಿ ತೆರೆಬಿದ್ದಿದೆ. ಈ ಬಾರಿಯ ಐಪಿಎಲ್ ವಿದೇಶಿದಲ್ಲಿ ನಡೆಯಲ್ಲಿದೆ ಎಂಬ ವದಂತಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬ್ರೇಕ್ ಹಾಕಿದ್ದಾರೆ.
2 / 6
ಈ ಬಾರಿಯ ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ನಂತರ ಮಾತನಾಡಿರುವ ಜಯ್ ಶಾ, ಈ ಬಾರಿಯ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಲಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
3 / 6
ವಾಸ್ತವವಾಗಿ ಚುನಾವಣಾ ಆಯೋಗ ಪ್ರಕಟಿಸಿದ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಗಮನಿಸಿದ ನಂತರ ಮೊದಲಾರ್ಧದ ಐಪಿಎಲ್ ಮುಗಿದ ಬಳಿಕ ಉಳಿದಾರ್ಧದ ಐಪಿಎಲ್ ಅನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತದೆ ಎಂದು ವರದಿಯಾಗಿತ್ತು.
4 / 6
ಆದಾಗ್ಯೂ, 2024 ರ ಸಂಪೂರ್ಣ ಆವೃತ್ತಿಯು ಭಾರತದಲ್ಲಿ ನಡೆಯಲಿದೆ ಎಂದು ಜಯ್ ಶಾ ಖಚಿತಪಡಿಸಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಹೀಗಾಗಿ ಮಿಲಿಯನ್ ಡಾಲರ್ ಟೂರ್ನಿಯನ್ನು ಕಣ್ತುಂನಿಕೊಳ್ಳುವುದನ್ನು ಮಿಸ್ ಮಾಡಿಕೊಳ್ಳುವ ಆತಂಕದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಸಿಕ್ಕಂತ್ತಾಗಿದೆ.
5 / 6
ಐಪಿಎಲ್‌ನ 17 ನೇ ಆವೃತ್ತಿಯ ಮೊದಲಾರ್ಧದಲ್ಲಿ 21 ಪಂದ್ಯಗಳು ನಡೆಯಲ್ಲಿದ್ದು, ಮಾರ್ಚ್ 22 ರಂದು ಆರಂಭವಾಗಲಿರುವ ಲೀಗ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿವೆ.
6 / 6
ಬಿಸಿಸಿಐ ಈ ಹಿಂದೆ 2009 (ದಕ್ಷಿಣ ಆಫ್ರಿಕಾ) ಮತ್ತು 2014 (ಯುಎಇ)ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಮತ್ತು ಕೋವಿಡ್ ಕಾರಣದಿಂದ 2020 ಮತ್ತು 2021 ರ ಐಪಿಎಲ್ ಪಂದ್ಯಾವಳಿಯನ್ನು ವಿದೇಶದಲ್ಲಿ ನಡೆಸಿತ್ತು.